ಬಾಗಲಕೋಟೆ: ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಆಗಮಿಸಿದ ಶಾಸಕರನ್ನು ವೇಶ್ಯೆಗೆ ಹೋಲಿಸಿದ್ದ ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಸ್ಪಷ್ಟೀಕರಣ ನೀಡುವಾಗ ಮತ್ತಷ್ಟು ನಾಲಗೆ ಹರಿಬಿಟ್ಟಿದ್ದಾರೆ.
ವೇಶ್ಯೆಯರಿಗೆ ಹೋಲಿಕೆ ಮಾಡಿದ್ದಕ್ಕೆ ರಾಜ್ಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಬಿಜೆಪಿ ನಾಯಕರು ಹರಿಪ್ರಸಾದ್ ವಿರುದ್ಧ ಹರಿಹಾಯ್ದಿದ್ದರು. ಈ ಕುರಿತು ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿಗರು ನನ್ನ ಹೇಳಿಕೆಯನ್ನು ತಿರುಚಿ ಉಲ್ಲೇಖ ಮಾಡಿದ್ದಾರೆ. ಲೈಂಗಿಕ ಕಾರ್ಯಕರ್ತರ ಬಗ್ಗೆ ಅನಗತ್ಯ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಲೈಂಗಿಕ ಕಾರ್ಯಕರ್ತರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ.
ಕೃಷಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ಹರಿಹಾಯ್ದ ಹರಿಪ್ರಸಾದ್, ನನ್ನ ಹೇಳಿಕೆ ನಂತರ ಕೆಲವರು ಹೇಳಿಕೆ ಕೊಟ್ಟಿದ್ದಾರೆ. ಮಾಜಿ ಚಿತ್ರನಟ, ಒಬ್ಬ ನಿರ್ಮಾಪಕ ಅವರ ಘನತೆಗೆ ತಕ್ಕ ಹೇಳಿಕೆ ಕೊಟ್ಟಿದ್ದಾರೆ. ಬಿ.ಸಿ. ಪಾಟಿಲ್ ಗರತಿ ತರಹ ಮಾತಾಡುತ್ತಾರೆ. ಅವನು ಯಶವಂತಪುರ ಠಾಣೆಯಲ್ಲಿದ್ದಾಗ ಚಪ್ಪಲಿ, ಪೊರಕೆಯಲ್ಲಿ ಹೊಡೆದಿದ್ದು ಗೊತ್ತಿದೆ. ಇಂಥವರಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ. ಅವರಿಗೆ ಗಂಡಸ್ತನ ಇದ್ದರೆ ಪ್ರೂವ್ ಮಾಡಲಿ. ಇವರು ಬಳಸುವ ಪದಗಳನ್ನು ನೋಡಿದರೆ ಅವರ ಯೋಗ್ಯತೆ ಏನು ಎಂದು ಗೊತ್ತಾಗುತ್ತದೆ. ಬಿಜೆಪಿಯಲ್ಲಿ ಸ್ಯಾಂಟ್ರೊ ರವಿ, ಸಿ.ಟಿ. ರವಿ, ಪೈಟರ್ ರವಿಯಂತಹ ಪಿಂಪ್ ರವಿಗಳೇ ತುಂಬಿ ತುಳುಕುತ್ತಿದ್ದಾರೆ. ಇವರಿಂದ ಏನೂ ನಿರೀಕ್ಷೆ ಮಾಡುವುದಕ್ಕೆ ಆಗುವುದಿಲ್ಲ ಎಂದರು.
ಸ್ಯಾಂಟ್ರೊ ರವಿಗೂ ಕಾಂಗ್ರೆಸ್‌ಗೂ ಯಾವುದೇ ವ್ಯತ್ಯಾಸವಿಲ್ಲ ಎಂಬ ಮುನಿರತ್ನ ಹೇಳಿಕೆಗೆ ತಿರುಗೇಟು ನೀಡಿದ ಹರಿಪ್ರಸಾದ್, ಮುನಿರತ್ನ ನನ್ನ ಗರಡಿಯಲ್ಲಿ ಬೆಳೆದವ. ಅವನು ಹೇಗೆ ಅಂತ ಗೊತ್ತಿದೆ. ಬಿಜೆಪಿ ಸರ್ಕಾರದ ಮಂತ್ರಿಗಳು ಸಪ್ಲೈ ಮಾಡಿ ಮಂತ್ರಿಗಳಾಗಿದ್ದಾರೆ ಎಂದು ಯತ್ನಾಳ್ ಅವರೇ ಖುದ್ದಾಗಿ ಹೇಳಿದ್ದಾರೆ. ಇವರು ಪಿಂಪ್ ಕೆಲಸ ಮಾಡಿ ಮಂತ್ರಿ ಆಗಿದ್ದಾರೆ ಎಂದು ಇನ್ನೊಬ್ಬ ಶಾಸಕರು ಹೇಳಿದ್ದಾರೆ. ವಲಸೆ ಬಂದಿರುವವರು ನಮ್ಮ ಸರ್ಕಾರದಲ್ಲಿ ಮಂತ್ರಿ ಆಗುವುದಕ್ಕೆ ಏನು ಮಾಡಿದಾರೆ ಎಂದು ಗೊತ್ತಿದೆ. ಆದರೆ ಅದನ್ನು ಹೇಳಿ ನನ್ನ ಬಾಯಿ ಹೊಲಸು ಮಾಡಿಕೊಳ್ಳುವುದಿಲ್ಲ ಎಂದರು.
ಬಿ.ಸಿ. ಪಾಟೀಲ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಹರಿಪ್ರಸಾದ್, ಬೆಂಗಳೂರಲ್ಲಿ ಒಂದು ಬೋರಿಂಗ್ ಇನ್ಸ್ಟಿಟ್ಯೂಟ್ ಅಂತಿದೆ. ಅಲ್ಲಿ ಒಬ್ಬ ಕಾಲಾಪತ್ತರ್ ಅಂತ ಇದ್ದ. ಅವನ ಸೇವೆ ಮಾಡಿಕೊಂಡು ಇದ್ದಂತಹ ಪೊಲಿಸ್ ಾಫಿಸರ್‌ಗಳು ಇವರೆಲ್ಲ. ಇವರಿಂದ ನಾನು ಪಾಠ ಕಲಿಯಬೇಕಾಗಿಲ್ಲ ಎಂದರು.
ಇದನ್ನೂ ಓದಿ | Prajadhwani : ಆನಂದ್ ಸಿಂಗ್ ವಿರುದ್ಧ ʼವೇಶ್ಯೆʼ ಪದ ಬಳಸಿದ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್: ಬಿ.ಸಿ. ಪಾಟೀಲ್ ತಿರುಗೇಟು