ಬಾಗಲಕೋಟೆ: ಇಲ್ಲಿನ ಜಮಖಂಡಿ ನಗರದ ತಾಲೂಕು ಆಸ್ಪತ್ರೆಯಲ್ಲಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ (Medical Negligence) ಎಂದು ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ನೀಲವ್ವ ಮಾಯಪ್ಪ ಹೂಗಾರ(25) ಮೃತ ದುರ್ದೈವಿ.
ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ನಿವಾಸಿ ನೀಲವ್ವಗೆ ಈಗಾಗಲೇ ಮೂರು ಮಕ್ಕಳು ಆಗಿದ್ದವು. ಮೂರನೇ ಹೆರಿಗೆ ಆಗಿ ಎರಡು ತಿಂಗಳು ಕಳೆದಿದ್ದವು. ಈ ನಡುವೆ, ಜಮಖಂಡಿ ಆಸ್ಪತ್ರೆಯಲ್ಲಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಕ್ಯಾಂಪ್ ಆಯೋಜಿಸಿದ್ದರಿಂದ ಅವರು ಶಸ್ತ್ರಚಿಕಿತ್ಸೆಗಾಗಿ ಶನಿವಾರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು.
ಶನಿವಾರ ಮಧ್ಯಾಹ್ನ ವೈದ್ಯರು ಇಂಜೆಕ್ಷನ್ ಕೊಟ್ಟ ಬಳಿಕ ನೀಲವ್ವ ಅಸ್ವಸ್ಥಳಾಗಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇಂಜೆಕ್ಷನ್ ನೀಡಿದ ಬಳಿಕ ಚೇತರಿಸಿಕೊಳ್ಳದೇ ಬೆಳಗ್ಗಿನ ನಸುಕಿನ ಜಾವ ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಹಿಳೆ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದರೆ, ೨ ತಿಂಗಳ ಕೂಸು ತಾಯಿ ಇಲ್ಲದೇ ಅನಾಥವಾಗಿದೆ. ನೀಲವ್ವನ ಸಾವಿನ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಆಸ್ಪತ್ರೆ ಎದುರು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ | Video | ಮಹಿಳೆಯ ಕಣ್ಣುಗಳಲ್ಲಿ ಸಿಕ್ಕಿಬಿದ್ದಿದ್ದ 23 ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಹೊರತೆಗೆದ ವೈದ್ಯರು !; ಇದು ಹೇಗಾಯ್ತು?