ಮುಧೋಳ: ಕಬ್ಬಿಗೆ ಸೂಕ್ತ ಬೆಲೆ ನಿಗದಿಗೆ ಆಗ್ರಹಿಸಿ ನಡೆಯುತ್ತಿರುವ ಬಂದ್ ಎರಡನೇ ದಿನವೂ ಮುಂದುವರಿದಿದೆ. ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು, ಅಲ್ಲಲ್ಲಿ ಖಾಸಗಿ ವಾಹನ ಓಡಾಟ ಕಂಡುಬಂದಿದೆ.
ಕಬ್ಬಿನ ದರ ನಿಗದಿಗಾಗಿ ಕಬ್ಬು ಬೆಳೆಗಾರರಿಂದ ನಡೆಯುತ್ತಿರುವ ಪ್ರತಿಭಟನೆ ಹೆಚ್ಚಿನ ಕಾವು ಪಡೆಯುತ್ತಿದೆ. ಮುಧೋಳ ತಾಲೂಕಿನಲ್ಲಿ ಹೆಚ್ಚಾಗಿರುವ ಕಬ್ಬು ಬೆಳೆಗಾರರ ಆಕ್ರೋಶ ಮುಷ್ಕರದ ರೂಪ ಪಡೆದಿದೆ. ಶಿರೋಳ, ಮಾಚಕನೂರ, ಚಿಚಖಂಡಿ, ಬುದ್ನಿ, ಬೆಳಗಲಿ, ಮುಗಳಕೋಡ ಗ್ರಾಮಗಳ ರೈತರು ರಸ್ತೆ ಬಂದ್ ಮಾಡಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದ್ದು, 12 ಗಂಟೆ ನಂತರ ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರ ಜಮಾವಣೆ ಸಾಧ್ಯತೆಯಿದೆ. ಅಹಿತಕರ ಘಟನೆ ನಡೆಯದಂತೆ ತಾಲೂಕಿನಾದ್ಯಂತ ಪೊಲೀಸ್ ಸರ್ಪಗಾವಲು ವಿಧಿಸಲಾಗಿದೆ.
ಇದನ್ನೂ ಓದಿ | ಕಬ್ಬು ಬೆಲೆ ನಿಗದಿಗೆ ಹೋರಾಟ | ಮಂಡ್ಯ, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿಭಟನೆ ತೀವ್ರ, ಸಿಎಂ ಪ್ರತಿಕೃತಿ ದಹನ