ಬಾಗಲಕೋಟ: ತೇರದಾಳ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಟೋಪಿ ಹಾಕಿಕೊಂಡು ಬಂದ ವಿದ್ಯಾರ್ಥಿ ಮೇಲೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಲೇಜಿನ ಪ್ರಿನ್ಸಿಪಾಲ್ ಸೇರಿದಂತೆ ಏಳು ಮಂದಿ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಬನಹಟ್ಟಿಯ ನ್ಯಾಯಾಲಯದ ಆದೇಶದ ಮೇರೆಗೆ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ. ಕಳೆದ ಫೆಬ್ರವರಿ 18ರಂದು ಈ ಘಟನೆ ನಡೆದಿತ್ತು.
ಘಟನೆಗೆ ಸಂಬಂಧಿಸಿ ವಿದ್ಯಾರ್ಥಿ ನವೀದ್ ಥರಥರಿ ಕೋರ್ಟ್ ಮೊರೆ ಹೋಗಿದ್ದ. ಇದೇ ವೇಳೆ ಹಿಜಾಬ್ ವಿವಾದವೂ ಎದ್ದಿತ್ತು. ಟೋಪಿ ಧರಿಸಿ ಬಂದಿದ್ದಕ್ಕೆ ಪ್ರಿನ್ಸಿಪಾಲರು ಆಕ್ಷೇಪಿಸಿದ್ದರು. ತೇರದಾಳ ಪೊಲೀಸರಿಗೆ ಕರೆ ಮಾಡಿ ವಿದ್ಯಾರ್ಥಿಯನ್ನು ಹೊರ ಹಾಕಿದ್ದರು. ಬಳಿಕ ಹಲ್ಲೆ ನಡೆದಿದೆ ಎಂದು ವಿದ್ಯಾರ್ಥಿ ಆರೋಪಿಸಿದ್ದ. ತೇರದಾಳ ಪಿಎಸ್‌ಐ ರಾಜು ಬೀಳಗಿ, ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಗಣಿ ಪಿಎಚ್ ಮಲ್ಲಿಕಾರ್ಜುನ, ಎಸ್.ಸಿ ಮದನಮಟ್ಟಿ, ಪ್ರಿನ್ಸಿಪಾಲ್ ಅಣ್ಣಪ್ಪಯ್ಯ ಪೂಜಾರಿ ಸೇರಿ ಏಳು ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.