ಬಾಗಲಕೋಟೆ: ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾದ ಇಬ್ಬರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ. ಕಮತಗಿ ಕ್ರಾಸ್ ಬಳಿಯ ಮಲಪ್ರಭಾ ನದಿಯಲ್ಲಿ ಘಟನೆ ನಡೆದಿದೆ.
ಅಕ್ಷಯ್ ಕಂಠಿಮಠ (24) ಹಾಗೂ ವಿಜಯ್ ಅರುಟಗಿಮಠ (25) ಮೃತ ಯುವಕರು. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕಮತಗಿ ಕ್ರಾಸ್ ಬಳಿ, ಮಲಪ್ರಭಾ ನದಿಯಲ್ಲಿ ಇವರು ನಿನ್ನೆ ಈಜಲು ಹೋಗಿದ್ದರು. ತಿರುಗಿ ಬಂದಿರಲಿಲ್ಲ. ಹುನಗುಂದ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ನಡೆಸಿದ್ದು, ರಾತ್ರಿ ಶವ ಹೊರತೆಗೆದಿದ್ದಾರೆ.
ಇವರಲ್ಲಿ ಅಕ್ಷಯ್ ಬಾಗಲಕೋಟೆ ನಿವಾಸಿ ಹಾಗೂ ವಿಜಯ್ ಕಮತಗಿ ನಿವಾಸಿಯಾಗಿದ್ದಾರೆ. ಅಮೀನಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
BWSSB ಅರೆಬರೆ ಕಾಮಗಾರಿಗೆ ಗುಂಡಿಗೆ ಬಿದ್ದು ಬಾಲಕ ಬಲಿ
ಬೆಂಗಳೂರು: ಬಿಡಬ್ಲ್ಯುಎಸ್‌ಎಸ್‌ಬಿ (BWSSB) ಅರೆಬರೆ ಕಾಮಗಾರಿ ಮಾಡಿ ತೆರೆದಿಟ್ಟು ಹೋಗಿರುವ ಗುಂಡಿಗೆ ಎರಡೂವರೆ ವರ್ಷದ ಬಾಲಕನೊಬ್ಬ ಬಿದ್ದು ಸಾವಿಗೀಡಾಗಿದ್ದಾನೆ.
ಮಾಗಡಿ ರಸ್ತೆಯ ಗೊಲ್ಲರಹಟ್ಟಿ ಫೈಪ್ ಲೈನ್‌ನಲ್ಲಿ ಈ ಘಟನೆ ನಡೆದಿದೆ. ಎರಡುವರೆ ವರ್ಷದ ಕಾರ್ತಿಕ್ ಗುಂಡಿಗೆ ಬಿದ್ದು ಸಾವಿಗೀಡಾದ ಬಾಲಕ. ಕಾಮಗಾರಿಗಾಗಿ ಹೊಂಡ ತೆಗೆದಿದ್ದ ಬಿಡಬ್ಲ್ಯುಎಸ್‌ಎಸ್‌ಬಿ ಅದನ್ನು ಮುಚ್ಚದೆ ಹಾಗೇ ಬಿಟ್ಟಿತ್ತು. ಆಟವಾಡುತ್ತಾ ಹೊಂಡದ ಬಳಿ ಹೋದ ಮಗು ಅದಕ್ಕೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದೆ.
ಮೃತ ಬಾಲಕನನ್ನು ಉತ್ತರಪ್ರದೇಶ ಮೂಲದ ಹನುಮಾನ್ ದಂಪತಿಯ ಪುತ್ರ ಎಂದು ಗುರುತಿಸಲಾಗಿದೆ. ಕೂಲಿ ಕೆಲಸಕ್ಕಾಗಿ ಇವರ ಕುಟುಂಬ ಬೆಂಗಳೂರಿಗೆ ಬಂದಿತ್ತು. ಬಿಡಬ್ಲ್ಯುಎಸ್‌ಎಸ್‌ಬಿ ಎಂಜಿನಿಯರ್ ಹಾಗು ಕಾಂಟ್ರ್ಯಾಕ್ಟರ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: Cylinder blast: ಸಿಲಿಂಡರ್ ಸ್ಫೋಟ, ಅಂಗಡಿ ಧ್ವಂಸ, ಒಬ್ಬನಿಗೆ ಗಾಯ