ಬಾಗಲಕೋಟೆ: ಜಿಲ್ಲೆಯ ಜಮಖಂಡಿ ನಗರದ ಸಜ್ಜಿ ಹನುಮಾನ್ ದೇವಸ್ಥಾನದ ಬಳಿ ಮರದ ಕೊಂಬೆ ಬಿದ್ದು ಸ್ಥಳದಲ್ಲೇ ಮಹಿಳೆ ಮೃತಪಟ್ಟು, ಗಂಡನಿಗೆ ಗಾಯಗಳಾಗಿವೆ.
ಮುಧೋಳ ತಾಲೂಕಿನ ಕುಳಲಿ ಗ್ರಾಮದ ನಿವಾಸಿ ರುಕ್ಮಿಣಿ ಮರನೂರ (39) ಮೃತ ದುರ್ದೈವಿ. ಶ್ರೀಶೈಲ್ ಮರನೂರ(49) ಗಾಯಾಳು. ಜಮಖಂಡಿ ರುಕ್ಮಣಿ ಮತ್ತು ಶ್ರೀಶೈಲ್ ಬೈಕ್ನಲ್ಲಿ ಹೋಗಿ, ಗೋವಿನಜೋಳ ಖರೀದಿ ಮಾಡಲು ರಸ್ತೆ ಪಕ್ಕ ನಿಲ್ಲಿಸಿದ್ದಾರೆ. ಶ್ರೀಶೈಲ್ ಮರನೂರ ಬೈಕ್ ನಿಲ್ಲಿಸಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಪತ್ನಿ ರುಕ್ಮಿಣಿ ಮೇಲೆ ಮರದ ಕೊಂಬೆ ಮುರಿದು ಬಿದ್ದಿದೆ. ಜಮಖಂಡಿ ಶಹರ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಿ, ಆತ್ಮಹತ್ಯೆಗೆ ಯತ್ನ