ಬಾಗಲಕೋಟೆ: ಬುರ್ಕಾ ಧರಿಸಿ ಓಡಾಡ್ತಿದ್ದ ವ್ಯಕ್ತಿಗೆ ಮಹಿಳೆಯರಿಂದ ಚಪ್ಪಲಿ ಏಟು ಬಿದ್ದಿರುವ ಘಟನೆ ಇಳಕಲ್ ನಗರದ (Bagalkot News) ಎಸಿಒ ಶಾಲೆ ಬಳಿ ನಡೆದಿದೆ. ಬುರ್ಕಾ ಧರಿಸಿ ಹೋಗುತ್ತಿದ್ದಾಗ ಅನುಮಾನ ಬಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಈ ವೇಳೆ ಆ ವ್ಯಕ್ತಿ ಮಹಿಳೆಯಲ್ಲ, ಪುರುಷ ಎಂದು ತಿಳಿದುಬಂದಿದ್ದರಿಂದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದೇ ವೇಳೆ ಮಹಿಳೆಯರು ಕೂಡ ಬಾಯಿಗೆ ಬಂದಂತೆ ಬೈಯ್ದು ಚಪ್ಪಲಿಯಿಂದ ಹೊಡೆದಿದ್ದಾರೆ.
ವಿಚಾರಣೆ ವೇಳೆ ಬುರ್ಕಾ ಧರಿಸಿದ್ದ ವ್ಯಕ್ತಿ ಹುನಗುಂದ ತಾಲೂಕಿನ ವೀರಾಪುರ ನಿವಾಸಿ ಮಹಾಂತೇಶ್ ರಾಮವಾಡಗಿ (36) ಎಂದು ತಿಳಿದುಬಂದಿದೆ. ನಗರದಲ್ಲಿ ಬುರ್ಕಾದಲ್ಲಿ ಓಡಾಡುತ್ತಿದ್ದರಿಂದ ಸಂಶಯ ಬಂದು ವಿಚಾರಿಸಿದಾಗ ಮಹಿಳೆ ಅಲ್ಲ ಎಂದು ಗೊತ್ತಾಗಿದೆ. ಇದರಿಂದ ಸ್ಥಳದಲ್ಲಿದ್ದ ಜನತೆಯಿಂದ ವ್ಯಕ್ತಿಗೆ ಧರ್ಮದೇಟು ಬಿದ್ದಿದೆ. ಆತನ ಚೀಲ ಪರಿಶೀಲಿಸಿದಾಗ ಚಾಕು, ಕತ್ತರಿ ಕಂಡುಬಂದಿದೆ.
ಇದನ್ನೂ ಓದಿ | Actor Darshan: ಸಸ್ಯಾಹಾರಿ ಅಂದ್ರೂ ರೇಣುಕಾಸ್ವಾಮಿ ಬಾಯಿಗೆ ಬಿರಿಯಾನಿ ಮೂಳೆ ತುರುಕಿದ್ದ ಆರೋಪಿಗಳು!
ಸುದ್ದಿ ತಿಳಿದು ಸ್ಥಳಕ್ಕೆ ಇಳಕಲ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಚಪ್ಪಲಿ ಏಟು ತಿಂದ ವ್ಯಕ್ತಿಗೆ ಹೆಂಡತಿ, ಮಗ ಇದ್ದು, ಮಂಗಳೂರಿನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಮಂಗಳೂರಿನಿಂದ ಗದಗಗೆ ಬಂದು, ಬುರ್ಕಾ ಖರೀದಿಸಿದ್ದ ಮಹಾಂತೇಶ್, ಇಳಕಲ್‌ನಲ್ಲಿ ಓಡಾಡುತ್ತಿದ್ದ. ಇಳಕಲ್ ಠಾಣೆಗೆ ಮಹಾಂತೇಶ್ ಸಂಬಂಧಿಕರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!
ಬೆಂಗಳೂರು: ನಟ ದರ್ಶನ್ (Actor Darshan) ಗೆಳತಿ, ನಟಿಯೂ ಆದ ಪವಿತ್ರಾ ಗೌಡ (Pavithra Gowda) ಅವರ ಕುರಿತು ಅಶ್ಲೀಲ ಮೆಸೇಜ್ ಮಾಡಿದ ಹಿನ್ನೆಲೆಯಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ (murder case) ಪ್ರಕರಣಕ್ಕೆ ಕ್ಷಣಕ್ಕೊಂದು ತಿರುವುಗಳು ಸಿಗುತ್ತಿವೆ. ಈಗಾಗಲೇ ಮತ್ತಿಬ್ಬರು ಆರೋಪಿಗಳು ಚಿತ್ರದುರ್ಗದ ಪೊಲೀಸರಿಗೆ ಶರಣಾಗಿದ್ದು, ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ ಆಗಿದೆ. ಈ ನಡುವೆ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜೂನ್ 8ರ ಬೆಳಗ್ಗೆ 11:30ಕ್ಕೆ ಗುಯಿಲಾಳ್ ಟೋಲ್ ಬಳಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಕಾರಿನ ಮುಂಭಾಗ ಡ್ರೈವರ್ ರವಿ ಹಾಗೂ ರಾಘವೇಂದ್ರ ಕುಳಿತಿದ್ದರು. ಹಿರಿಯೂರು ಮಾರ್ಗವಾಗಿ ಬೆಂಗಳೂರು ಕಡೆ ಪ್ರಯಾಣ ಮಾಡಿರುವ ಈ ಗ್ಯಾಂಗ್ ವಿಐಪಿ ಕಾರ್ಡ್ ತೋರಿಸಿ ಹೋಗಿದ್ದಾರೆ.
ಮಾತ್ರವಲ್ಲದೇ ದರ್ಶನ್ ಸಂಘದ ಅಧ್ಯಕ್ಷ ಎಂದು ಬಿಲ್ಡಪ್ ಕೊಟ್ಟು ಹೋಗಿರುವ ದೃಶ್ಯವೆಲ್ಲವೂ ಹಿರಿಯೂರು ಗುಯಿಲಾಳ್ ಟೋಲ್ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನುಳಿದ ನಾಲ್ಕು ಮಂದಿ ಜತೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಬಿಟ್ಟು ಜೂನ್ 9ರ ಬೆಳಗಿನ ಜಾವ 4:30ಕ್ಕೆ ಚಿತ್ರದುರ್ಗದತ್ತ ಚಾಲಕ ರವಿ ವಾಪಸ್ ಆಗಿದ್ದಾನೆ.
ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕೊಲೆ ಕೇಸ್; ಆರೋಪಿಗಳಿಗೆ ನೀಡಲು ರೆಸ್ಟೋರೆಂಟ್‌ನಲ್ಲಿ ಇಟ್ಟಿದ್ದ 30 ಲಕ್ಷ ಸೀಜ್
ಶರಣಾಗತಿಯಾಗಿದ್ದ ಆರೋಪಿಗಳು
ಇನ್ನೂ ತಾವೇ ಸರೆಂಡರ್ ಆಗಿರುವ ಕಾರು ಚಾಲಕ ರವಿ ಜತೆಗೆ ಹೇಮಂತ್ ಹಾಗೂ ಪುನೀತ್‌ರನ್ನು ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಕರೆದುಕೊಂಡು ಹೋದರು. ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಬಂದಾಗ ರವಿ ಕಾರು ಚಲಾಯಿಸಿದ್ದ. ಸ್ಕಾರ್ಪಿಯೋ ಮಾಲೀಕ ಪುನೀತ್ ಹಾಗೂ ಶವ ಸಾಗಿಸಿದ ಬಳಿಕ ಹೇಮಂತ್ ಕಾರನ್ನು ವಾಶ್ ಮಾಡಿದ್ದ. ಇದೀಗ ಈ ಮೂವರನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ.