Site icon Vistara News

Bagalkot News: ಅಬಕಾರಿ ನಿಯಮ‌ ಉಲ್ಲಂಘನೆ; ಬಾಗಲಕೋಟೆಯಲ್ಲಿ 59 ಲಕ್ಷ ಮೌಲ್ಯದ ಮದ್ಯ ಜಪ್ತಿ

Liquor seized

ಬಾಗಲಕೋಟೆ: ಕ್ಷೇತ್ರದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಹಾಗೂ ಅಬಕಾರಿ ನಿಯಮ‌ ಉಲ್ಲಂಘನೆ ಮಾಡಿದ್ದರಿಂದ ಲಾರಿಯಲ್ಲಿ ಸಾಗಸುತ್ತಿದ್ದ ಒಟ್ಟು 59 ಲಕ್ಷ ರೂ. ಮೌಲ್ಯದ 14,688 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ.

ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮದ್ಯ, ಬಿಯರ್ ಸಾಗಿಸುವ ವಾಹನಗಳಿಗೆ ಜಿ.ಪಿ.ಎಸ್ ಉಪಕರಣ ಅಳವಡಿಸದ ಕಾರಣ ಕೆ.ಎಸ್.ಬಿ.ಸಿ.ಎಲ್ ಡಿಪೋದಲ್ಲಿ ವಾಹನ ಸಮೇತ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ 90 ಎಂ.ಎಲ್‌ನ ವಿಸ್ಕಿ ಬಾಟಲ್‌ಗಳಿರುವ 1700 ಬಾಕ್ಸ್‌ ಸಾಗಿಸಲಾಗುತ್ತಿತ್ತು. ಈ ಸಂಬಂಧ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 17.28 ಲೀಟರ್ ಮದ್ಯ ವಶ

ಜಮಖಂಡಿ ವಲಯ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 17.28 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. ಜಮಖಂಡಿ ವ್ಯಾಪ್ತಿಯ ನಾವಲಗಿ-ಬೆಳಗಲಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆದಿದ್ದು, 87,682 ರೂ.ಗಳ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.

ಮುಂಡರಗಿ ಬಳಿ ಸಾರಿಗೆ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Bus Accident

ಗದಗ: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ (Bus Accident) ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಬಳಿ ನಡೆದಿದೆ. ಪಾಟಾ ಕಟ್ ಆಗಿದ್ದರಿಂದ ಏಕಾಏಕಿ ಬಸ್‌ ಪಲ್ಟಿಯಾಗಿದೆ.

ಇದನ್ನೂ ಓದಿ | Self Harming: 7ನೇ ಮಹಡಿಯಿಂದ ಜಿಗಿದು ಯೂಟ್ಯೂಬರ್‌ ಜೋಡಿ ಆತ್ಮಹತ್ಯೆ

ಬೆಳ್ಳಟ್ಟಿಯಿಂದ ಮುಂಡರಗಿ ಹೋಗುತ್ತಿದ್ದ ಬಸ್ ಪಲ್ಟಿಯಾಗಿದೆ. ಈ ವೇಳೆ ಪ್ರಯಾಣಿಕರ ಕೂಗಾಟ, ಚೀರಾಟ ಕೇಳಿಬಂದಿದೆ. ಹೀಗಾಗಿ ಗ್ರಾಮಸ್ಥರು ಬಸ್ ಮುಂದಿನ ಗ್ಲಾಸ್ ಒಡೆದು ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಸುಸ್ಥಿತಿಯಲ್ಲಿ ಇಲ್ಲದ ಕಾರಣ ಅಪಘಾತವಾಗಿದೆ ಎಂದು ಪ್ರಯಾಣಿಕರ ಆರೋಪಿಸಿದ್ದಾರೆ.

Exit mobile version