ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾಮಠದ ಶಿವಮೂರ್ತಿ ಮುರುಘಾಶರಣ ಅವರ ಪರ ವಕೀಲರು ಇಂದು ಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ.
ಡಿವೈಎಸ್ಪಿ ಕಚೇರಿಯಲ್ಲಿ ಶುಕ್ರವಾರ ಇಡೀ ರಾತ್ರಿಯನ್ನು ಮುರುಘಾ ಶರಣರು ಕಳೆದರು. ಇಂದು ಮುರುಘಾ ಶರಣರ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ. ನಿನ್ನೆಯೇ ಜಾಮೀನು ಅರ್ಜಿ ಸಲ್ಲಿಸಬೇಕಿತ್ತು. ಆದರೆ ಸಾಧ್ಯವಾಗಿರಲಿಲ್ಲ.
ಜಾಮೀನು ಅರ್ಜಿ ಜೊತೆಗೆ ಮುರುಘಾ ಶರಣರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲು ಕೋರ್ಟ್‌ನಲ್ಲಿ ಮನವಿ ಮಾಡುವ ಸಾಧ್ಯತೆ ಇದೆ. ಇಂದು ಬೆಳಿಗ್ಗೆಯೇ ಶ್ರೀಗಳನ್ನು ಭೇಟಿ ಮಾಡಲು ಬಂದ ವಕೀಲ ಟಿ. ಉಮೇಶ್ ಬಂದಿದ್ದರು. ಆದರೆ ಡಿವೈಎಸ್ಪಿ ಕಛೇರಿ ಒಳಗೆ ತೆರಳಲು ಪೊಲೀಸರು ಒಪ್ಪದ ಕಾರಣ ವಾಪಸ್ ತೆರಳಿದರು.