ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣದಲ್ಲಿ ಇಂದು ಸಂತ್ರಸ್ತ ಬಾಲಕಿಯರನ್ನು ಮೈಸೂರಿನಿಂದ ಚಿತ್ರದುರ್ಗಕ್ಕೆ ಕರೆತರುವ ಸಾಧ್ಯತೆ ಇದೆ.
ಮೈಸೂರಿನಲ್ಲಿರುವ ದೂರುದಾರ ಮಹಿಳೆ ಮತ್ತು ಮಹಿಳೆಯ ಮಕ್ಕಳಾದ ಇಬ್ಬರು ಸಂತ್ರಸ್ತರನ್ನು ಕರೆಸುವಂತೆ ಸಿಡಬ್ಲ್ಯುಸಿಗೆ ಪೊಲೀಸರು ಮನವಿ ಮಾಡಿದ್ದಾರೆ. ದೂರಿನಲ್ಲಿ ಇನ್ನಿಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬಾಲಕಿಯರಿಂದ ಜಡ್ಜ್ ಎದುರು ಸಿಆರ್‌ಪಿಸಿ 164 ಅಡಿ ಹೇಳಿಕೆ ದಾಖಲು ಮಾಡುವ, ಬಾಲಕಿಯರಿಗೆ ವೈದ್ಯಕೀಯ ಪರೀಕ್ಷೆ ಮಾಡುವ ಹಾಗೂ ಮುರುಘಾಮಠಕ್ಕೆ ಕರೆತಂದು ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ.
ಜಾಮೀನು ಅರ್ಜಿ
ಅಕ್ಟೋಬರ್ 13ರಂದು 2ನೇ ಪೋಕ್ಸೋ ಪ್ರಕರಣ ಮುರುಘಾ ಶ್ರೀಗಳ ಮೇಲೆ ದಾಖಲಾಗಿದೆ. ಇಂದು A1 ಆರೋಪಿ ಮುರುಘಾ ಶ್ರೀ, A2 ಲೇಡಿ ವಾರ್ಡನ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ. ಇವರಿಬ್ಬರೂ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಠದ ಪರ ವಕೀಲರಾದ ವಿಶ್ವನಾಥಯ್ಯ, ಉಮೇಶರಿಂದ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಪ್ರಕರಣದಲ್ಲಿ ಇನ್ನುಳಿದ ಐವರು ಆರೋಪಿಗಳು ನಾಪತ್ತೆ ಆಗಿದ್ದಾರೆ. ಇನ್ನುಳಿದ ಆರೋಪಿಗಳಾದ ಮುರುಘಾ ಶ್ರೀ ಸಹಾಯಕ A6 ಮಹಾಲಿಂಗ, A7 ಅಡುಗೆಯಾತ ಕರಿಬಸಪ್ಪಗೂ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಗೆ ಮುರುಘಾ ಶರಣರ ಪವರ್ ಆಫ್ ಅಟಾರ್ನಿ