Site icon Vistara News

ಶ್ರೀರಂಗಪಟ್ಟಣದಲ್ಲಿ ಉರೂಸ್ ನಿಷೇಧಿಸುವಂತೆ ಭಜರಂಗದಳ ಒತ್ತಾಯ

bhajarang dala

ಮಂಡ್ಯ : ಸೋಮವಾರ (ಜೂನ್ 27) ದಿಂದ 29ರವರೆಗೆ ಶ್ರೀರಂಗಪಟ್ಟಣದಲ್ಲಿ ನಡೆಯುವ ಉರೂಸ್​ ಆಚರಣೆಗೆ ಭಜರಂಗದಳ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಉರೂಸ್‌​ ಆಚರಣೆಗೆ ಸುಮಾರು 30ರಿಂದ 40 ಸಾವಿರ ಮಂದಿ ಮೆರವಣಿಗೆಯಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಆಚರಣೆ ನಿಷೇಧ ಮಾಡಬೇಕು ಎಂದು ಆಗ್ರಹಿಸಿದೆ.

ಇದನ್ನು ಓದಿ| ಶ್ರೀರಂಗಪಟ್ಟಣ ಚಲೋ ತಡೆಗೆ ಪೊಲೀಸ್‌ ಸರ್ಪಗಾವಲು, ಪ್ರತಿಭಟನೆ ಮಾಡೇ ತೀರ್ತಾರಂತೆ ಹಿಂದೂ ಕಾರ್ಯಕರ್ತರು

ಈ ಬಗ್ಗೆ ಮಾತನಾಡಿರುವ ಭಜರಂಗದಳ ಮುಖಂಡ ಮಂಜನಾಥ್, ಪ್ರತಿ ವರ್ಷ ಉರೂಸ್ ಆಚರಣೆಗೆ 150 ರಿಂದ 200 ಜನ ಸೇರುತ್ತಿದ್ದರು. ಆದರೆ, ಈ ಬಾರಿ 30ರಿಂದ 40 ಸಾವಿರ ಮಂದಿ ಮೆರವಣಿಗೆಯಲ್ಲಿ ಭಾಗಿಯಾಗುತ್ತಿದ್ದಾರೆ. ಕೇರಳ ಸೇರಿದಂತೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದಲೂ ಜನರು ಆಗಮಿಸುತ್ತಿದ್ದಾರೆ. ಹಿಂದೂ ಸಂಘಟನೆಗಳು ಮೆರವಣಿಗೆ ಮಾಡಿದ್ರೆ, ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡುತ್ತದೆ. ನಮಗೆ ಶ್ರೀರಂಗಪಟ್ಟಣ ಪ್ರವೇಶ ಮಾಡಲು ಅವಕಾಶ ನೀಡಲ್ಲ. ಆದರೆ, ಮುಸ್ಲಿಂ ಸಂಘಟನೆಗಳು ಮೆರವಣಿಗೆ ಮಾಡಲು ಮುಂದಾದರೆ ಯಾಕೆ ತಡೆಯುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಜಿಲ್ಲಾಡಳಿತ ಈ ಕೂಡಲೇ ಮೆರಣಿಗೆ ತಡೆಯಬೇಕು. ನಮಗೆ ಒಂದು ಕಾನೂನು ಅವರಿಗೊಂದು ಕಾನೂನು ಮಾಡೋದು ಯಾಕೆ. ಮೊದಲು ಈ ಮೆರವಣಿಗೆ ತಡೆಯಿರಿ. ಇಷ್ಟು ವರ್ಷ 150ರಿಂದ 200 ಮಂದಿ ಆಚರಣೆ ಮಾಡುತ್ತಿದ್ದರಲ್ಲಾ. ಅದೇ ರೀತಿಯಲ್ಲೇ ಈ ಬಾರಿಯೂ ಆಚರಣೆ ಮಾಡಲಿ ಎಂದು ಮಂಜುನಾಥ್ ಆಗ್ರಹಿಸಿದ್ದಾರೆ.

ಇದನ್ನು ಓದಿ|ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದಕ್ಕೆ ಬಿಗ್‌ ಟ್ವಿಸ್ಟ್‌: ವೈರಲ್‌ ವಿಡಿಯೋ ಸತ್ಯವೂ ಬಹಿರಂಗ !

Exit mobile version