ಬಳ್ಳಾರಿ: ಅಕ್ರಮವಾಗಿ ಗಾಂಜಾ (Ganja) ಮಾರಾಟ ಮಾಡಲು ತೊಡಗಿದ್ದ ಇಬ್ಬರು ಆರೋಪಿಗಳನ್ನು ಸೋಮವಾರ ಬಂಧಿಸಿರುವ ಸೈಬರ್, ಆರ್ಥಿಕ, ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಪೊಲೀಸರು, 17 ಲಕ್ಷ ರೂ. ಮೌಲ್ಯದ 16.940 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿರುವ ಘಟನೆ (Ballari News) ಜರುಗಿದೆ.
ಇದನ್ನೂ ಓದಿ: Money Guide : ಮ್ಯೂಚುವಲ್ ಫಂಡ್‌ನಲ್ಲಿ ನೆಟ್ ಅಸೆಟ್ ವಾಲ್ಯೂ (NAV) ಎಂದರೇನು?
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಆರ್.ಎಚ್.ಕಾಲೋನಿಯ ಶ್ರೀಪಾದೂ ಬಿಶ್ವಾಸ್, ಪಶನ್ ಜಿತ್ ಮಂಡಲ್ ಬಂಧಿತ ಆರೋಪಿಗಳು. ನಗರ ಹೊರವಲಯ ಸಿರುಗುಪ್ಪ ರಸ್ತೆಯ ಲಕ್ಷ್ಮೀನಗರ ಕ್ಯಾಂಪ್ ಬಳಿಯ ಹೊಲವೊಂದರಲ್ಲಿ ಆರೋಪಿಗಳಿಬ್ಬರೂ 17 ಲಕ್ಷ ರೂ. ಮೌಲ್ಯದ 16.940 ಕೆಜಿ ಗಾಂಜಾವನ್ನು ಮಾರಾಟ ಮಾಡಲು ಮುಂದಾಗಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದಿರುವ ಅಪರಾಧ ಪೊಲೀಸ್ ಠಾಣೆಯ ಸಿಪಿಐ ವೈ.ಎಚ್.ರಮಾಕಾಂತ್, ಪಿಎಸ್‌ವೈ ವಲಿಬಾಷ, ಸಿಬ್ಬಂದಿಗಳಾದ ಕೆ.ಸುರೇಶ್, ಕೆ.ವೇಣುಗೋಪಾಲ್, ಕೆ.ತಿಪ್ಪೇರುದ್ರಪ್ಪ ಸೇರಿ ಇತರರು ದಾಳಿ ನಡೆಸಿ, ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಗಾಂಜಾ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.