ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಆಗಮಿಸುವ ಹಿನ್ನೆಲೆಯಲ್ಲಿ ಜ.19ರಂದು ಕಲಬುರಗಿ ವಿಮಾನ ನಿಲ್ದಾಣದ ಸುತ್ತ ಮುತ್ತಲಿನ 10 ಕಿಲೋಮೀಟರ್ ಪ್ರದೇಶದಲ್ಲಿ ಸಿಆರ್‌ಪಿಸಿ ಸೆಕ್ಷನ್ 144ರಂತೆ ಯಾವುದೇ ಡ್ರೋನ್ ಕ್ಯಾಮೆರಾ ಹಾರಿಸದಂತೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರುನ್ನುಮ್ ಆದೇಶ ಹೊರಡಿಸಿದ್ದು, ಕಲಬುರಗಿ ಜಿಲ್ಲೆ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ. ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಜನವರಿ 19ರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೂ ಡ್ರೋನ್ ಹಾರಾಟ ನಿಷೇಧಿಸಲಾಗಿದೆ.
ಇದನ್ನೂ ಓದಿ | PM Narendra Modi: ಆಂಧ್ರದ ಲೇಪಾಕ್ಷಿ ದೇಗುಲಕ್ಕೆ ಮೋದಿ ಭೇಟಿ; ರಾಮಾಯಣದಲ್ಲಿ ಈ ಸ್ಥಳದ ಮಹತ್ವ ಏನು?
ಬೆಂಗಳೂರಿಗೆ ಪ್ರಧಾನಿ ಭೇಟಿ
ಜನವರಿ 19 ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ. ಮಹಾರಾಷ್ಟ್ರ ಕಾರ್ಯಕ್ರಮದ ಬಳಿಕ ಅವರು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ರಾಜಧಾನಿಯಲ್ಲಿ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ & ಟೆಕ್ನಾಲಜಿ ಸೆಂಟರ್ (ಬಿಐಇಟಿಸಿ) ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿ ಕಾರ್ಯಕ್ರಮಗಳ ವೇಳಾಪಟ್ಟಿ ಇಲ್ಲಿದೆ.
ಬೆಳಗ್ಗೆ 9.35: ದೆಹಲಿಯಿಂದ ಕಲಬುರಗಿ ಏರ್‌ಪೋರ್ಟ್‌ಆಗಮನ
ಬೆಳಗ್ಗೆ 9.40: ಕಲ್ಬುರ್ಗಿಯಿಂದ ಹೆಲಿಕಾಫ್ಟರ್ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಪ್ರಯಾಣ
ಮಧ್ಯಾಹ್ನ 12.10: ಹೆಲಿಕಾಪ್ಟರ್ ಮೂಲಕ ಸೊಲ್ಲಾಪುರದಿಂದ ನಿರ್ಗಮನ
ಮಧ್ಯಾಹ್ನ 1 ಗಂಟೆ: ಕಲಬುರಗಿ ಏರ್‌ಪೋರ್ಟ್‌ಗೆ ಆಗಮನ
ಮಧ್ಯಾಹ್ನ 1.05: ವಿಶೇಷ ವಿಮಾನದ ಮೂಲಕ ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣ
ಮಧ್ಯಾಹ್ನ 2.10: ಬೆಂಗಳೂರು ಕೆಂಪೇಗೌಡ ಏರ್ ಪೋರ್ಟ್‌ಗೆ (ಕೆಐಎಬಿ) ಆಗಮನ
ಮಧ್ಯಾಹ್ನ 2.15: ಕೆಐಎಬಿಯಿಂದ ರಸ್ತೆ ಮಾರ್ಗವಾಗಿ ದೇವನಹಳ್ಳಿ ತಾಲೂಕಿನ ಭಟ್ಟರ ಮಾರನಹಳ್ಳಿಗೆ ಪ್ರಯಾಣ
ಮಧ್ಯಾಹ್ನ 2.45: ಭಟ್ಟರಮಾರನಹಳ್ಳಿಗೆ ತಲುಪಲಿರುವ ಮೋದಿ
ಬಿಐಇಟಿಸಿ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಲೋಕಾರ್ಪಣೆ
ಮಧ್ಯಾಹ್ನ 3.45: ಭಟ್ಟರಮಾರನಹಳ್ಳಿಯಿಂದ ನಿರ್ಗಮನ
ಮಧ್ಯಾಹ್ನ 3.55: ಕೆಐಎಬಿ ತಲುಪಲಿರುವ ಪ್ರಧಾನಿ
ಸಂಜೆ 4 ಗಂಟೆ: ಕೆಐಎಬಿಯಿಂದ ಚೆನ್ನೈಗೆ ನಿರ್ಗಮನ