ರಾಮನಗರ: ಕಂಚುಗಲ್ ಬಂಡೆಮಠ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆ ಮುಕ್ತಾಯಗೊಳಿಸಿದ ಮಾಗಡಿ ಪೊಲೀಸರು, ಇಂದು ಮಾಗಡಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಲಿದ್ದಾರೆ. ಮಾಗಡಿ ಠಾಣೆ ಇನ್ಸ್ಪೆಕ್ಟರ್ ರವಿ ಅವರು ಇಂದು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ.
ಅಕ್ಟೋಬರ್ ೨೪ರಂದು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಬಸವಲಿಂಗ ಶ್ರೀಗಳು ಮೂರು ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದರು. ಇದರಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಒಬ್ಬಳು ಯುವತಿ ಕಾರಣ ಎಂಬುದು ಗೊತ್ತಾಗಿತ್ತು. ಈ ಕೇಸ್ನಲ್ಲಿ ನೀಲಾಂಬಿಕೆ, ರೇಣುಕಾರಾಧ್ಯ, ವಕೀಲ ಮಹದೇವಯ್ಯ ಬಿ.ಸಿ ಸುರೇಶ್ ಎಂಬುವರು ಆರೋಪಿಗಳಾಗಿದ್ದು, ಈಗಾಗಲೇ ಜೈಲುಪಾಲಾಗಿದ್ದಾರೆ.
ಇದರಲ್ಲಿ ಬಂಡೆಮಠದ ಸ್ವಾಮೀಜಿ ಉಲ್ಲೇಖಿಸಿದ್ದ ಯುವತಿ ನೀಲಾಂಬಿಕೆ ಆಗಿದ್ದು ಆಕೆಯೂ ಈಗಾಗಲೇ ತಪ್ಪೊಪ್ಪಿಕೊಂಡಿದ್ದಾಳೆ. ಹೌದು ನಾನು ಸ್ವಾಮೀಜಿ ಮೇಲೆ ಸೇಡು ತೀರಿಸಿಕೊಳ್ಳಲೆಂದೇ ಈ ರೀತಿ ಮಾಡಿದೆ ಎಂದು ಹೇಳಿದ್ದಾಳೆ. ಎಂಜಿನಿಯರಿಂಗ್ ವಿದ್ಯಾರ್ಥಿನಿಯಾದ ನೀಲಾಂಬಿಕೆ ಹಿಂದೊಮ್ಮೆ ಬಂಡೆಮಠದ ಸ್ವಾಮೀಜಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಳು. ಸ್ವಾಮಿಜಿಯೊಬ್ಬ ಹೆಣ್ಣುಬಾಕ, ಹೆಣ್ಣಿನ ಮೋಹ ಇದೆ ನಾಲಿಗೆ ಹರಿಬಿಟ್ಟಿದ್ದಳು. ಅದನ್ನೆಲ್ಲ ಬಂಡೆ ಮಠದ ಸ್ವಾಮೀಜಿ ಆಡಿಯೊ ರೆಕಾರ್ಡ್ ಮಾಡಿ, ನೀಲಾಂಬಿಕೆಗೆ ಅವಮಾನಿಸಿದ್ದರು. ಅದೇ ಸೇಡಿಗಾಗಿ ಅವಳು ಸ್ವಾಮೀಜಿಯ ಖಾಸಗಿ ವಿಡಿಯೊಗಳನ್ನು ಹರಿಬಿಟ್ಟಿದ್ದಳು. ಒಟ್ಟಾರೆ ಬಂಡೆಮಠದ ಸ್ವಾಮೀಜಿ ಹತ್ಯೆ ಕೇಸ್ನಲ್ಲಿ ತನಿಖೆಯಲ್ಲಿ ಹೊರಬಿದ್ದ ವಿಷಯಗಳನ್ನೆಲ್ಲ ಉಲ್ಲೇಖಿಸಿರುವ ಚಾರ್ಜ್ಶೀಟ್ ಇಂದು ಕೋರ್ಟ್ ಎದುರು ಸಲ್ಲಿಕೆಯಾಗಲಿದೆ.
ಇದನ್ನೂ ಓದಿ: Seer Suicide | ಬಂಡೇಮಠದ ಸ್ವಾಮೀಜಿಯ ಖಾಸಗಿ ವಿಡಿಯೊ ಮಾಡಿಕೊಂಡಿದ್ದ ಮೂಲ ಫೋನ್‌ಗಾಗಿ ಶೋಧ!