ಕೋಲಾರ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕಾಮಗಾರಿ ವೇಳೆ ತಲೆಗೆ ಕಬ್ಬಿಣದ ರಾಡ್ ತಗುಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಜಿಲ್ಲೆಯ (Kolar News) ಕೆಜಿಎಫ್ ತಾಲೂಕು ನಾಗಶೆಟ್ಟಿಹಳ್ಳಿ ಬಳಿ ಬುಧವಾರ ನಡೆದಿದೆ. ಹೆದ್ದಾರಿಯ ಪಿಲ್ಲರ್ ಮೇಲೆ ಹತ್ತಿ ಕೆಲಸ ಮಾಡುವ ವೇಳೆ ತಲೆಗೆ ಬಲವಾಗಿ ಕಬ್ಬಿಣದ ರಾಡ್ ತಗುಲಿದ್ದರಿಂದ ಕಾರ್ಮಿಕ ಕೊನೆಯುಸಿರೆಳೆದಿದ್ದಾನೆ.
ಪಶ್ಚಿಮ ಬಂಗಾಳ ಮೂಲದ ಆರ್ಕಾನ್ಸ್ ಕಂಪನಿಯ ಕಾರ್ಮಿಕ ಸುಜನ್ ಘೋಷ್ (32) ಮೃತ. ಸ್ಥಳಕ್ಕೆ ಬೇತಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಲಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ
ಹಾಸನ: ಸಾಲಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಹಾಸನ ತಾಲೂಕಿನ ಸಾಲಗಾಮೆ ನರಸೀಪುರ ಗ್ರಾಮದಲ್ಲಿ ನಡೆದಿದೆ.
ಸುಜಾತಾ (36) ಮೃತ ಮಹಿಳೆ. 20 ದಿನಗಳ ಹಿಂದೆ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಪತಿ ಲೋಕೇಶ್ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಪತಿಯ ಸಾನಿನ ಬಳಿಕ, ಕೃಷಿಗೆಂದು ಮಾಡಿದ್ದ ಸಾಲದ ಬಗ್ಗೆ ಮಹಿಳೆ ಚಿಂತೆಗೀಡಾಗಿದ್ದರು. ವಿವಿದ ಬ್ಯಾಂಕ್‌ಗಳಲ್ಲಿ 3 ಲಕ್ಷ ರೂ. ಸೇರಿ ಒಟ್ಟು 8 ಲಕ್ಷ ರೂ. ಸಾಲ ಮಾಡಿದ್ದರು.
ಇದನ್ನೂ ಓದಿ | Road Accident : ರಸ್ತೆ ಬದಿಯಲ್ಲಿ ನಿಂತಿದ್ದ ಮಗುವನ್ನು ಬಲಿ ಪಡೆದ ಟ್ರ್ಯಾಕ್ಟರ್; ಅಜ್ಜಿ ಜತೆ ಇದ್ದಾಗಲೇ ದುರಂತ
ದೊಡ್ಡ ಮೊತ್ತದ ಸಾಲದ ಹೊರೆ, ಪತಿಯ ಅಗಲಿಕೆಯಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಒಂದು ತಿಂಗಳ ಅಂತರದಲ್ಲಿ ಇಬ್ಬರನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ.
ರಾಜಧಾನಿಯಲ್ಲಿ ಭಯಾನಕ ಘಟನೆ; ತಾಯಿ, 8 ವರ್ಷದ ಮಗನ ಬರ್ಬರ ಹತ್ಯೆ
ಬೆಂಗಳೂರು: ರಾಜಧಾನಿಯಲ್ಲಿ ಬೆಚ್ಚಿಬೀಳಿಸುವ ಭಯಾನಕ (Bangalore news) ಘಟನೆಯೊಂದು ನಡೆದಿದೆ. ತಾಯಿ ಮತ್ತು 8 ವರ್ಷದ ಮಗನನ್ನು ಕೊಲೆ (Murder case) ಮಾಡಲಾಗಿದೆ. ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ತಾಯಿ ಮತ್ತು ಮಗನ ಹಂತಕರು (Mother and son murdered) ಯಾರು ಎಂದು ಪತ್ತೆ ಹಚ್ಚಲು ಪೊಲೀಸರು ತಂಡವನ್ನು ರಚಿಸಿದ್ದಾರೆ.
ಬಾಗಲಗುಂಟೆಯ ರವೀಂದ್ರ ನಗರದಲ್ಲಿ ವಾಸವಾಗಿರುವ ನವನೀತ (35) ಎಂಬ ಮಹಿಳೆ ಹಾಗೂ ಅವರ ಎಂಟು ವರ್ಷದ ಮಗ ಸುಜನ್‌ನನ್ನು ಕೊಲ್ಲಲಾಗಿದೆ. ಮಂಗಳವಾರ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಬುಧವಾರ ಬೆಳಗ್ಗೆ ಹೊರ ಜಗತ್ತಿಗೆ ಬಯಲಾಯಿತು.
ತಾಯಿ ನವನೀತ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದರೆ, ಎಂಟು ವರ್ಷದ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಇಬ್ಬರ ಶವ ಕೂಡಾ ಬೆಡ್ ಮೇಲೆ ಬಿದ್ದಿದೆ. ಈ ಕೊಲೆಯನ್ನು ಮಾಡಿದ್ದು ಯಾರು ಎನ್ನುವುದು ನಿಗೂಢವಾಗಿದ್ದು, ಅದನ್ನು ಪತ್ತೆ ಹಚ್ಚಲು ಡಿಸಿಪಿ ಶಿವಪ್ರಕಾಶ್ ದೇವರಾಜ ಅವರು ವಿಶೇಷ ತಂಡವನ್ನು ರಚಿಸಿದ್ದಾರೆ.
ಪತಿಯಿಂದ ದೂರವಾಗಿದ್ದ ಮಹಿಳೆ
ನವನೀತ ಅವರು ಆಂಧ್ರ ಪ್ರದೇಶ ಮೂಲದವರೆಂದು ಹೇಳಲಾಗಿದೆ. ಕಳೆದ ಮೂರು ವರ್ಷಗಳಿಂದ ರವೀಂದ್ರ ನಗರದಲ್ಲಿ ವಾಸವಿದ್ದರು. ಆದರೆ, ಅಕ್ಕಪಕ್ಕದವರ ಜತೆಗೆ ಹೆಚ್ಚೇನೂ ಸಂಪರ್ಕ ಇರಲಿಲ್ಲ ಎನ್ನಲಾಗಿದೆ.
ಅವರು ಕೌಟುಂಬಿಕವಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದರು ಎನ್ನಲಾಗಿದ್ದು, ಎರಡು ವರ್ಷಗಳಿಂದ ಪತಿಯಿಂದ ದೂರವಾಗಿ ವಾಸಿಸುತ್ತಿದ್ದಾರೆ. ಅವರು ಏನು ಕೆಲಸ ಮಾಡುತ್ತಿದ್ದರು ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.
ಇದನ್ನೂ ಓದಿ: Murder Case: ವೀಕೆಂಡ್ ಗೋವಾದಲ್ಲಿ ಮಜಾ ಮಾಡಿ ಮನೆಗೆ ಬಂದು ಪತ್ನಿಯ ಕೊಲೆ ಮಾಡಿದ ಪತಿ!
ಕೊಲೆಗಾರ ಯಾರು?
ಮಂಗಳವಾರ ನಡೆದಿರುವ ಈ ಕೊಲೆಯನ್ನು ಮಾಡಿದ್ದು ಯಾರು ಎನ್ನುವುದರ ಬಗ್ಗೆ ತನಿಖೆ ನಡೆಯಬೇಕಾಗಿದೆ. ನವನೀತ ಅವರಿಂದ ದೂರವಾಗಿರುವ ಪತಿಯ ಕೃತ್ಯ ಇದಾಗಿರಬಹುದೇ ಎಂಬ ಸಂಶಯದ ನೆಲೆಯಲ್ಲಿ ಮೊದಲ ಹಂತದ ತನಿಖೆ ನಡೆದಿದೆ. ಮಂಗಳವಾರ ಈ ಮನೆಗೆ ಯಾರು ಬಂದಿದ್ದಾರೆ ಎಂಬುದರ ಹುಡುಕಾಟವೂ ನಡೆದಿದೆ. ಹಂತಕ ಮೊದಲು ನವನೀತ ಅವರನ್ನು ಚೂರಿಯಿಂದ ಇರಿದಿದ್ದು, ತಡೆಯಲು ಹೋದ ಹುಡುಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.