Site icon Vistara News

ಉದ್ಯಾನ ನಗರಿ ಇನ್ನೆರಡು ದಿನ ಕೂಲ್ ಕೂಲ್, ಚಳಿಯ ಮೂಡ್‌ನಲ್ಲಿ ಬೆಂಗಳೂರಿಗರು

rain news

ಬೆಂಗಳೂರು: ರಾಜಧಾನಿ ಬೆಂಗಳೂರು ಈಗ ಸಖತ್‌ ಕೂಲ್‌ ಆಗಿದೆ. ಬೆಳಗಿನ ಹೊತ್ತು ಹತ್ತಾದರೂ ಸೂರ್ಯನ ರಶ್ಮಿ ನೆಲವನ್ನು ತಾಕುತ್ತಿಲ್ಲ. ತಣ್ಣನೆ ಬಿಸೋ ಗಾಳಿ, ಜತೆಗೆ ಆಗಾಗ ಬಂದುಹೋಗುವ ತುಂತುರು ಮಳೆ… ಇವೆಲ್ಲದರ ಎಫೆಕ್ಟ್‌ನಿಂದ ಬೆಂಗಳೂರು ಈಗ ಕೂಲ್ ಸಿಟಿಯಾಗಿದೆ.

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ, ಮಲೆನಾಡಿನಲ್ಲಿ ತೀವ್ರ ಮಳೆಯಾಗುತ್ತಿದೆ. ಇದರಿಂದ ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಇದೆ. ಹೀಗಾಗಿ ಸೂರ್ಯನ ಪ್ರಖರತೆ ಬಹಳ ಕಡಿಮೆಯಾಗಿದೆ.

ಉಷ್ಣಾಂಶ ಪ್ರಮಾಣ ತಗ್ಗಿದೆ. ಹೀಗಾಗಿ ಸ್ವೆಟರ್, ಹೆಡ್ ಕ್ಯಾಪ್‌ಗಳನ್ನು ಧರಿಸಿಯೇ ನಾಗರಿಕರು ಮನೆಯಿಂದ ಹೊರಗೆ ಕಾಲಿಡುತ್ತಿದ್ದಾರೆ. ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Rain News | ನಿಲ್ಲದ ಧಾರಾಕಾರ ಮಳೆ; ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ, ನೂರಾರು ಎಕರೆ ಬೆಳೆ ಜಲಾವೃತ

ಕಳೆದ ೪ ದಿನದಲ್ಲಿ ಬೆಂಗಳೂರಿನ ತಾಪಮಾನ ಹೀಗಿದೆ

ದಿನಾಂಕಕನಿಷ್ಠಗರಿಷ್ಠ
4-7-202219‌ ಡಿಗ್ರಿ ಸೆಲ್ಸಿಯಸ್20 ಡಿಗ್ರಿ ಸೆಲ್ಸಿಯಸ್
5-7-202226.5 ಡಿಗ್ರಿ ಸೆಲ್ಸಿಯಸ್20.1 ಡಿಗ್ರಿ ಸೆಲ್ಸಿಯಸ್
6-7-202225.0 ಡಿಗ್ರಿ ಸೆಲ್ಸಿಯಸ್20.6 ಡಿಗ್ರಿ ಸೆಲ್ಸಿಯಸ್
7-7-202225.0 ಡಿಗ್ರಿ ಸೆಲ್ಸಿಯಸ್20.3 ಡಿಗ್ರಿ ಸೆಲ್ಸಿಯಸ್
8-7-202223.7 ಡಿಗ್ರಿ ಸೆಲ್ಸಿಯಸ್19.7 ಡಿಗ್ರಿ ಸೆಲ್ಸಿಯಸ್

ನಗರದಲ್ಲಿ ಮೋಡ ಕವಿದ ವಾತಾವರಣ ಜತೆಗೆ ತುಂತುರು ಮಳೆಯಿಂದ ಉಷ್ಣತೆ ಇಳಿಕೆಯಾಗಿದೆ. ಸಿಟಿ ಜನರಿಗೆ ಮೂರ್ನಾಲ್ಕು ದಿನಗಳಿಂದ ಚಳಿಗಾಲದ ಅನುಭವವಾಗಿದೆ. ಜೂನ್ ಅಂತ್ಯದಲ್ಲಿ 30 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ನಗರದ ಗರಿಷ್ಠ ಉಷ್ಣಾಂಶ ಈಗ 20 ಡಿಗ್ರಿ ಸೆಲ್ಸಿಯಸ್ ಆಗಿದೆ.

ಹವಾಮಾನ ಕೇಂದ್ರದ ವರದಿ:

ನಗರದಲ್ಲಿ ಇನ್ನೆರಡು ದಿನಗಳ ಕಾಲ ತಂಪಾದ ವಾತಾವರಣ ಇರಲಿದೆ. ಸಿಟಿಯಲ್ಲಿ ಅಲ್ಪ ಪ್ರಮಾಣದ ಮಳೆ ಆಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ 24 ಮತ್ತು 19 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ| Bangalore Rain | ಬೆಂಗಳೂರಲ್ಲಿ ನಿನ್ನೆ ರಾತ್ರಿಯಿಂದಲೂ ಮಳೆ; 22 ವರ್ಷಗಳಲ್ಲಿ ಮೇನಲ್ಲಿ ಇಷ್ಟು ಚಳಿ ಆಗಿರಲಿಲ್ಲ!

Exit mobile version