Site icon Vistara News

Bangalore-Mysore Expressway : ಕೇವಲ ಐದು ವರ್ಷದಲ್ಲಿ ಸಿದ್ಧಗೊಂಡ ಹೆದ್ದಾರಿಯ ವೈಭವದ ನೋಟ ಇಲ್ಲಿದೆ ನೋಡಿ!

Bangalore mysore highway

#image_title

ಬೆಂಗಳೂರು: ಬೆಂಗಳೂರು-ಮೈಸೂರು ನಡುವೆ ಶರವೇಗದಲ್ಲಿ ಸಾಗಬಹುದಾದ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ (Bangalore-Mysore Expressway) ಉದ್ಘಾಟನೆ ಮಾರ್ಚ್‌ 12ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯದ ಗೆಜ್ಜಲಕೆರೆಯಲ್ಲಿ ನಡೆಯಲಿರುವ ಬೃಹತ್‌ ಸಮಾವೇಶದಲ್ಲಿ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಇದು ರಾಷ್ಟ್ರೀಯ ಹೆದ್ದಾರಿ -275. ಇದನ್ನು ಎಕ್ಸ್‌ಪ್ರೆಸ್‌ ಆಗಿ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದು 2018ರ ಫೆಬ್ರವರಿ 19ರಂದು. ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡಿದಾಗ ಅದನ್ನು ಪ್ರಕಟಿಸಿದ್ದರು. ಇದೀಗ ಕೇವಲ ಐದು ವರ್ಷದಲ್ಲಿ ಅದರ ನಿರ್ಮಾಣ ಆಗಿದ್ದು, 2023ರ ಮಾರ್ಚ್‌ 12ರಂದು ಪ್ರಧಾನಿಯವರೇ ಉದ್ಘಾಟನೆ ಮಾಡಲಿದ್ದಾರೆ. ಇದು ಕರ್ನಾಟಕದ ಪಾಲಿಗೆ ಐತಿಹಾಸಿಕ ದಿನ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಮಂಡ್ಯದ ಗೆಜ್ಜಲಗೆರೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಗೆಜ್ಜಲಗೆರೆ ಬಳಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರತಾಪ್‌ ಸಿಂಹ ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ 11:30ಕ್ಕೆ ಮೋದಿ ಅವರ ರೋಡ್ ಶೋ ಪ್ರಾರಂಭವಾಗಲಿದ್ದು, 12:೦5ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ರೋಡ್ ಶೋದಲ್ಲಿ 40 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Bangalore-Mysore Expressway : ಅಪೂರ್ಣ ಹೆದ್ದಾರಿ ಉದ್ಘಾಟನೆ, 25000 ಕೋಟಿ ಟೋಲ್‌ ಸಂಗ್ರಹ ಗುರಿ ಎಂದ ಕಾಂಗ್ರೆಸ್‌

Exit mobile version