Site icon Vistara News

Bangalore- Mysore Expressway : ಜನಾಕ್ರೋಶಕ್ಕೆ ಮಣಿದು ದಶಪಥ ಹೆದ್ದಾರಿ ಟೋಲ್‌ ದರ ಹೆಚ್ಚಳ ಕೈಬಿಟ್ಟ ಪ್ರಾಧಿಕಾರ

Bangalore -Mysore high way toll

#image_title

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ (Bangalore- Mysore Expressway) ಏಪ್ರಿಲ್‌ ಒಂದರಿಂದ ಜಾರಿಗೆ ಬರಬೇಕಾಗಿದ್ದ ಟೋಲ್‌ ದರ ಹೆಚ್ಚಳವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸದ್ಯಕ್ಕೆ ಕೈಬಿಟ್ಟಿದೆ. ಹೆದ್ದಾರಿ ಸಂಚಾರ ಆರಂಭವಾದ 17ನೇ ದಿನಕ್ಕೇ ಟೋಲ್‌ ದರವನ್ನು ಹೆಚ್ಚಿಸಿರುವುದರ ವಿರುದ್ಧ ಜನಾಕ್ರೋಶ ಹೆಚ್ಚಿದ ಹಿನ್ನೆಲೆಯಲ್ಲಿ ಪ್ರಾಧಿಕಾರ ಟೋಲ್‌ ದರ ಹೆಚ್ಚಳವನ್ನು ಮುಂದೂಡಿದೆ. ಸದ್ಯಕ್ಕೆ ಹಳೆ ದರವನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರ ಪ್ರಕಟಿಸಿದೆ.

ಟೋಲ್ ಆರಂಭವಾದ 17ನೇ ದಿನಕ್ಕೆ ದರ ಏರಿಕೆ ಮಾಡಿದ್ದರ ವಿರುದ್ಧ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಸಾರ್ವಜನಿಕರ ಒತ್ತಡಕ್ಕೆ ಮಣಿದು ದರ ಹೆಚ್ಚಳ ವಾಪಸ್‌ ಪಡೆಯಲಾಗಿದೆ. ದೇಶಾದ್ಯಂತ ಏಕಕಾಲದಲ್ಲಿ ಹೆದ್ದಾರಿ ಟೋಲ್‌ ದರ ಹೆಚ್ಚಳ ಮಾಡಲಾಗಿದ್ದು, ಅದರ ಭಾಗವಾಗಿ ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್‌ ಕೂಡಾ ಏರಿಸಲಾಗಿತ್ತು. ಆದರೆ, ಇಲ್ಲಿ ಕೇವಲ 17 ದಿನದ ಹಿಂದಷ್ಟೇ ಟೋಲ್‌ ಆರಂಭವಾಗಿರುವುದರಿಂದ ಕಿರು ಅವಧಿಯಲ್ಲೇ ಹೆಚ್ಚಳ ಮಾಡಿದಂತಾಗಿತ್ತು. ಈ ವಿಚಾರಗಳನ್ನು ಪ್ರಾಧಿಕಾರಕ್ಕೆ ಮನವಿ ಮಾಡಿ ಟ್ರೋಲ್‌ ದರ ಹೆಚ್ಚಳವನ್ನು ಕೈಬಿಡುವಂತೆ ಮಾಡುವುದಾಗಿ ಮೈಸೂರು ಸಂಸದ ಪ್ರತಾಪ್‌ಸಿಂಹ ಹೇಳಿದ್ದರು. ಇದೀಗ ಪ್ರಾಧಿಕಾರಕ್ಕೆ ಈ ವಿಚಾರಗಳು ಮನವರಿಕೆ ಆಗಿದ್ದರ ಜತೆಗೆ, ಸಾರ್ವಜನಿಕವಾಗಿ ಕಂಡುಬಂದಿರುವ ಆಕ್ರೋಶವೂ ಜತೆಯಾಗಿ ಟ್ರೋಲ್‌ ದರ ಹೆಚ್ಚಳವನ್ನು ಕೈಬಿಡಲಾಗಿದೆ. ಆದರೆ, ಮುಂದೆ ಈ ಹೆಚ್ಚಳ ಮತ್ತೊಮ್ಮೆ ಜಾರಿಗೆ ಬರುವುದು ಖಚಿತವಾಗಿದೆ.

ಆದರೆ, ಈಗ ದರ ಪರಿಷ್ಕರಣೆಯನ್ನು ಕೈಬಿಟ್ಟಿರುವುದು ವಾಹನಿಗರಿಗೆ ಸಣ್ಣ ಮಟ್ಟದ ನಿರಾಳತೆಯನ್ನು ನೀಡಿದೆ.

ಹೆದ್ದಾರಿ ಪ್ರಾಧಿಕಾರ ನಿಗದಿಪಡಿಸಿದ್ದ ಪರಿಷ್ಕೃತ ದರ ಹೀಗಿತ್ತು

ಕಾರು/ವ್ಯಾನ್/ಜೀಪ್: ಏಕಮುಖ ಸಂಚಾರ 165 ರೂಪಾಯಿ (30 ರೂ. ಹೆಚ್ಚಳ). ದ್ವಿಮುಖ ಸಂಚಾರ – 250 ರೂಪಾಯಿ (45ರೂ ಹೆಚ್ಚಳ).
ಲಘು ವಾಹನಗಳು/ಮಿನಿಬಸ್: ಏಕಮುಖ ಸಂಚಾರ 270 ರೂಪಾಯಿ (50 ರೂ. ಹೆಚ್ಚಳ) ದ್ವಿಮುಖ ಸಂಚಾರ- 405 ರೂಪಾಯಿ (75 ರೂ. ಹೆಚ್ಚಳ)
ಟ್ರಕ್/ಬಸ್/ಎರಡು ಆ್ಯಕ್ಸೆಲ್ ವಾಹನ: ಏಕಮುಖ ಸಂಚಾರ 565 ರೂಪಾಯಿ (165 ರೂ. ಹೆಚ್ಚಳ), ದ್ವಿಮುಖ ಸಂಚಾರ- 850 ರೂಪಾಯಿ (160 ರೂಪಾಯಿ ಹೆಚ್ಚಳ)
ತ್ರಿ ಆ್ಯಕ್ಸೆಲ್ ವಾಣಿಜ್ಯ ವಾಹನಗಳು: ಏಕ‌ಮುಖ ಸಂಚಾರ 615 ರೂಪಾಯಿ (115 ರೂ. ಹೆಚ್ಚಳ), ದ್ವಿಮುಖ ಸಂಚಾರ- 925 ರೂಪಾಯಿ (225 ರೂ. ಹೆಚ್ಚಳ)
ಭಾರಿ ಕಟ್ಟಡ ನಿರ್ಮಾಣ ವಾಹಗನಳು/ ಅರ್ಥ್ ಮೂವರ್ಸ್‌/ 4-6 ಆ್ಯಕ್ಸೆಲ್ ವಾಹನಗಳು: ಏಕಮುಖ ಸಂಚಾರ 885 ರೂಪಾಯಿ (165 ರೂ. ಹೆಚ್ಚಳ), ದ್ವಿಮುಖ ಸಂಚಾರ- 1,330 ರೂ. ಹೆಚ್ಚಳ (250 ರೂ. ಹೆಚ್ಚಳ)
7 ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸೆಲ್ ವಾಹನಗಳು: ಏಕಮುಖ ಸಂಚಾರ 1,080 ರೂಪಾಯಿ (200 ರೂ. ಹೆಚ್ಚಳ) ದ್ವಿಮುಖ ಸಂಚಾರ- 1,620 ರೂ. (305 ರೂ. ಹೆಚ್ಚಳ)

ಇದನ್ನೂ ಓದಿ : Banglore-Mysore Expressway: ದಶಪಥ ಹೆದ್ದಾರಿ ಮತ್ತೆ ದುಬಾರಿ; ನಾಳೆಯಿಂದಲೇ ಟೋಲ್‌ ದರದಲ್ಲಿ ಏರಿಕೆ, ಯಾವುದಕ್ಕೆ ಎಷ್ಟು?

Exit mobile version