ಬೆಂಗಳೂರು: ನಗರದ ದಕ್ಷಿಣ ಕೊನೆಯಲ್ಲಿರುವ ಕ್ಷೇತ್ರ ಬೆಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಎಮ್ ಕೃಷ್ಣಪ್ಪ (m krishnappa) ಅವರು ಭರ್ಜರಿ ಗೆಲವು ದಾಖಲಿಸಿದ್ದಾರೆ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಆರ್. ಕೆ ರಮೇಶ್ ವಿರುದ್ಧ ಗೆಲುವು ಸಾಧಿಸಿದರು. 2018ರಲ್ಲಿ ಈ ಕ್ಷೇತ್ರದಲ್ಲಿ ಎಂ ಕೃಷ್ಣಪ್ಪ 1,52,427 ಮತಗಳನ್ನು ಪಡೆದು ಭರ್ಜರಿ ಜಯಭೇರಿ ಬಾರಿಸಿದ್ದರು. ಇವರ ಎದುರಾಳಿಯಾಗಿದ್ದ ಕಾಂಗ್ರೆಸ್‌ನ ಆರ್ ಕೆ ರಮೇಶ್ 1,22,068 ಮತಗಳನ್ನು ಪಡೆದಿದ್ದರು.
ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿ ಹರಡಿಕೊಂಡಿರುವ ಈ ಕ್ಷೇತ್ರದೊಳಗೆ ಉತ್ತರಹಳ್ಳಿಯ ಕೆಲ ಭಾಗವನ್ನೂ ಒಳಗೊಂಡಂತೆ, ಸುಬ್ರಹ್ಮಣ್ಯಪುರ, ವಸಂತಪುರ, ಯಲಚೇನಹಳ್ಳಿ, ಚುಂಚಘಟ್ಟ, ಬೇಗೂರು, ಕಾಳೇನ ಅಗ್ರಹಾರ, ಗೊಟ್ಟಿಗೆರೆ ಮತ್ತು ಎಲೆಕ್ಟ್ರಾನಿಕ್ ಸಿಟಿಯಿಂದ ಬನ್ನೇರುಘಟ್ಟ ಹಾಗೆಯೇ ಹೊರಳಿ ಸಾಗಿದರೆ ಜಿಗಣಿ ಕೆಲ ಪ್ರದೇಶಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ.
2008ರಲ್ಲಿ ರಚನೆಯಾದ ಈ ಕ್ಷೇತ್ರದಲ್ಲಿ ಬಿಜೆಪಿ ಎಂ ಕೃಷ್ಣಪ್ಪ ಅವರು ಪಾರಮ್ಯ ಸಾಧಿಸಿದ್ದಾರೆ. 2013 ಹಾಗೂ 2018ರಲ್ಲಿ ಅವರೇ ಜಯ ಸಾಧಿಸಿದ್ದಾರೆ.
ಇದನ್ನೂ ಓದಿ : Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಬಿ.ವೈ.ವಿಜಯೇಂದ್ರ ಗೆಲುವಿನ ‘ಶಿಕಾರಿ’
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 5,81,408 ಮತದಾರರಿದ್ದಾರೆ. ಇವರ ಪೈಕಿ 1,54,000 ಮತದಾರರನ್ನು ಹೊಂದಿರುವ ದಲಿತ ವರ್ಗ (ಎಸ್‌ಸಿ ಹಾಗೂ ಎಸ್‌ಟಿ) ಕ್ಷೇತ್ರದ ಅತಿದೊಡ್ಡ ವೋಟ್ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ. ಇವರ ನಂತರದಲ್ಲಿ 1,40,000 ಒಕ್ಕಲಿಗರಿದ್ದಾರೆ. ಅವರನ್ನು ಹೊರತುಪಡಿಸಿ ಇತರೆ ಹಿಂದುಳಿದವ ಸಮುದಾಯಗಳ 1,40,000 ಮತದಾರರು ಹಾಗೂ 55,000 ಲಿಂಗಾಯತ, 14,000 ಬ್ರಾಹ್ಮಣ, ವರ್ಗದ ಮತದಾರರಿದ್ದಾರೆ.