Site icon Vistara News

suicide | ಬೆಂಗಳೂರಿನ ಮಹಿಳಾ ಟೆಕ್ಕಿ ಒಡಿಶಾದ ಹೋಟೆಲ್‌ನಲ್ಲಿ ಆತ್ಮಹತ್ಯೆ, ಗಂಡನ ಕಿರುಕುಳ ಆರೋಪ

suicide

ಬೆಂಗಳೂರು: ಬೆಂಗಳೂರು ಮೂಲದ ಮಹಿಳಾ ಟೆಕ್ಕಿಯೊಬ್ಬರು ಒಡಿಶಾದ ಪುರಿಯ ಖಾಸಗಿ ಹೋಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಐಶ್ವರ್ಯ ಶಾನಭಾಗ್ (28) ಆತ್ಮಹತ್ಯೆ ಮಾಡಿಕೊಂಡವರು. ಇವರು ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ವೃತ್ತಿ ಸಂಬಂಧಿತ ಕಾನ್ಫರೆನ್ಸ್‌ ಒಂದರಲ್ಲಿ ಭಾಗವಹಿಸುವುದಕ್ಕಾಗಿ ಒಡಿಶಾದ ಪುರಿಗೆ ತೆರಳಿದ್ದರು. ಅಲ್ಲಿ ಖಾಸಗಿ ಹೋಟೆಲ್‌ ಒಂದರಲ್ಲಿ ವಾಸ್ತವ್ಯ ಹೂಡಿದ್ದು ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಐಶ್ವರ್ಯ ಅವರಿಗೆ ಎಂಟು‌ ತಿಂಗಳ‌ ಹಿಂದೆ ನಿತಿನ್ ಎಂಬವರ ಜತೆ ಮದುವೆಯಾಗಿತ್ತು. ಮಗಳು ಗಂಡನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಐಶ್ವರ್ಯ ಪೋಷಕರು ಆರೋಪ ಮಾಡಿದ್ದಾರೆ. ಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮೈಸೂರಿಗೆ ತರಲಾಗುತ್ತಿದೆ.

Exit mobile version