ಬೆಂಗಳೂರು : ಲೋಕಾರ್ಪಣೆಗೆ ಸಿದ್ಧವಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೇಸ್ ವೇ (Bengaluru-Mysuru Expressway) ಪರಿಶೀಲನೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಕೈಗೊಳ್ಳಲಿದ್ದಾರೆ. ಎಕ್ಸ್‌ಪ್ರೆಸ್ ವೇ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನ ಕಿರಿದು ಮಾಡಲಿದೆ. ಸದ್ಯ ಬೆಂಗಳೂರಿಂದ ಮೈಸೂರಿಗೆ ತೆರಳಲು 3 ಗಂಟೆ ಬೇಕು. ಎಕ್ಸ್‌ಪ್ರೆಸ್ ಲೋಕಾರ್ಪಣೆಗೊಂಡರೆ, ಕೇವಲ ಒಂದೂವರೆ ತಾಸಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳಬಹುದು.
ಈ ದಶಪಥವನ್ನು ದಾಖಲೆಯ ಕಡಿಮೆ ಅವಧಿಯಲ್ಲಿ ನಿರ್ಮಿಸಲಾಗಿದೆ. 8172 ಕೋಟಿ ರೂ. ವೆಚ್ಚದ ಈ ಕಾರಿಡಾರ್ ಈಗ ಉದ್ಘಾಟನೆಗೆ ಸಿದ್ಧವಾಗಿದೆ. ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿಯು ಮೂರು ಗಂಟೆಯಿಂದ ಒಂದೂವರೆ ತಾಸಿಗೆ ಇಳಿಕೆಯಾಗಲಿದೆ ಎಂದು ಈ ಹಿಂದೆ ಸಚಿವ ಗಡ್ಕರಿ ಅವರು ಟ್ವೀಟ್ ಮಾಡಿದ್ದರು.
ಭಾರತ್ ಮಾಲಾ ಮೊದಲನೆಯ ಹಂತದ ಯೋಜನೆಯ ಅಂಗವಾಗಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೇಸ್ ಕಾರಿಡಾರ್ ಯೋಜನೆಯನ್ನು ಕೈಗೆತ್ತಿಕೊಂಡು, ಈಗ ಪೂರ್ಣಗೊಳಿಸಲಾಗಿದೆ. ಈ ರಾಷ್ಟ್ರೀಯ ಹೆದ್ದಾರಿಯನ್ನು ಬೆಂಗಳೂರು-ನಿಡಘಟ್ಟ ಮತ್ತು ನಿಟಘಟ್ಟ-ಮೈಸೂರು ಈ ಎರಡು ಹಂತದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.
ಬೆಂಗಳೂರು-ಮೈಸೂರು ಕಾರಿಡಾರ್‌ನಿಂದ ಈ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಬಲ ಬರಲಿದೆ. ರಾಜ್ಯದ ಎರಡು ಪ್ರಮುಖ ನಗರಗಳನ್ನು ಸಂಪರ್ಕಿಸುವುದರಿಂದ ಎಲ್ಲ ರೀತಿಯಿಂದಲೂ ನೆರವು ಸಿಗಲಿದೆ ಎಂದು ಹೇಳಬಹುದು.
ಇದನ್ನೂ ಓದಿ | ದಶಪಥದಲ್ಲಿ ₹800 ಕೋಟಿ ಭ್ರಷ್ಟಾಚಾರ: ಸಂಸದ ಪ್ರತಾಪ್ ಸಿಂಹ ವಿರುದ್ಧ ಜೆಡಿಎಸ್ ಶಾಸಕ ಆರೋಪ