Site icon Vistara News

Bantwal Election Results: ಬಂಟ್ವಾಳದಲ್ಲಿ ಬಿಜೆಪಿಯ ರಾಜೇಶ್‌ ನಾಯ್ಕ್‌ಗೆ ಮಣೆ; ರಮಾನಾಥ್‌ ರೈಗೆ ಸೋಲು

Bantwal Election results Rajesh Naik

ಮಂಗಳೂರು: ಬಂಟ್ವಾಳ ವಿಧಾನಸಭಾ‌ ಕ್ಷೇತ್ರದಲ್ಲೂ ಈ ಬಾರಿ ಗೆಲುವು ಯಾರಿಗಾಗಬಹುದು ಎಂಬ ಊಹೆ ಕಷ್ಟಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾಕೆಂದರೆ 9ನೇ ಬಾರಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿರೋ ಕಾಂಗ್ರೆಸ್ ಹಿರಿಯ ನಾಯಕ ರಮಾನಾಥ ರೈ ಅವರು ಇದೇ ತಮ್ಮ ಕೊನೇ ಚುನಾವಣೆ ಎಂಬುದಾಗಿ ಸೆಂಟಿಮೆಂಟ್ ಕಾರ್ಡ್ ಪ್ಲೇ ಮಾಡಿದ್ದರು. ಈಗ ಫಲಿತಾಂಶ (Bantwal Election Results) ಪ್ರಕಟವಾಗಿದ್ದು, ಬಿಜೆಪಿಯ ರಾಜೇಶ್‌ ನಾಯ್ಕ್‌ ಅವರು ಜಯಗಳಿಸಿದ್ದಾರೆ.

ಗೆದ್ದು ಬೀಗಿದ ರಾಜೇಶ್ ನಾಯ್ಕ್

ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಕೂಡಾ ಜನ ಮೆಚ್ಚುಗೆ ಪಡೆದಿದ್ದಾರೆ. ಎಲ್ಲ ಸಮುದಾಯದವರೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಿರುವ ರಾಜೇಶ್ ನಾಯ್ಕ್ ಕಟ್ಟಾ ಹಿಂದುತ್ವವಾದಿ ಸಹ ಅಲ್ಲದಿರುವುದು ಒಂದು ಪ್ಲಸ್‌ ಆದಂತೆ ಆಗಿದೆ. ತಮ್ಮ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಕ್ಷೇತ್ರದಲ್ಲಿ ಶಾಂತಿ ಸಾಮರಸ್ಯವನ್ನೂ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಒಟ್ಟು 93324 ಮತಗಳನ್ನು ಪಡೆದಿದ್ದಾರೆ. ಅಲ್ಲದೆ, ಪ್ರತಿಸ್ಪರ್ಧಿ ರಮಾನಾಥ ರೈ ವಿರುದ್ಧ 8,282 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಫಲಿತಾಂಶ

ಸೋತ ರಮಾನಾಥ ರೈ

ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದ ರಮಾನಾಥ ರೈ ಅವರು, ತಮ್ಮ ವಿರುದ್ಧ ಅಪಪ್ರಚಾರ ಮಾಡಿ ಸೋಲಿಸಿದರು ಎಂದು ಹೇಳುತ್ತಾ ಬಂದಿದ್ದಲ್ಲದೆ, ಹಾಗೇ ಆರೋಪ ಮಾಡಿದವರು ಸಾಬೀತು ಪಡಿಸಿ ಎಂದು ಹಲವು ದೈವಗಳ ಮುಂದೆ ಆಣೆ ಪ್ರಮಾಣಕ್ಕೆ ಕರೆದು ಸವಾಲೊಡ್ಡಿದ್ದರು. ಅಲ್ಲದೆ, ಇದೇ ತಮ್ಮ ಕೊನೇ ಚುನಾವಣೆ ಎಂಬ ಭಾವನಾತ್ಮಕ ಮಾತುಗಳನ್ನು ಆಡಿದ್ದರೂ ಗೆಲುವಿನ ಮೇಲೆ ಪರಿಣಾಮ ಬೀರಲಿಲ್ಲ. ಅವರು 85042 ಮತಗಳನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Karnataka Election Results 2023 : ಕಾಂಗ್ರೆಸ್‌ ಅಧಿಕಾರಕ್ಕೆ; ಐದು ಉಚಿತ ಯೋಜನೆಗಳ ಜಾರಿಗೆ ಕೌಂಟ್‌ಡೌನ್‌

ಕಳೆದ ಬಾರಿಯ ಫಲಿತಾಂಶ
ರಾಜೇಶ್ ನಾಯ್ಕ್ (ಬಿಜೆಪಿ): 97802, ರಮಾನಾಥ ರೈ (ಕಾಂಗ್ರೆಸ್): 81665, ಗೆಲುವಿನ ಅಂತರ : 16137

ಈ ಬಾರಿಯ ಚುನಾವಣಾ ಫಲಿತಾಂಶ
ರಾಜೇಶ್ ನಾಯ್ಕ್ (ಬಿಜೆಪಿ): 93324 | ರಮಾನಾಥ ರೈ (ಕಾಂಗ್ರೆಸ್): 85042 | ಗೆಲುವಿನ ಅಂತರ: 8,282 | ನೋಟಾ: 821

Exit mobile version