ಬೆಳಗಾವಿ: ಹೆಂಡತಿ, ಮಕ್ಕಳು ಮನೆಯಲ್ಲಿದ್ದಾಗಲೇ ಮನೆಗೆ ನುಗ್ಗಿ ರಿಯಲ್ ಎಸ್ಟೇಟ್ ಏಜೆಂಟ್‌ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಕೊಲೆ (Murder) ಮಾಡಿರುವುದು ನಗರದ ಕ್ಯಾಂಪ್ ಪ್ರದೇಶದ ಫಿಶ್ ಮಾರ್ಕೆಟ್ ಬಳಿ ನಡೆದಿದೆ.
ರಿಯಲ್ ಎಸ್ಟೇಟ್ ಏಜೆಂಟ್ ಸುಧೀರ್ ಕಾಂಬಳೆ (57) ಕೊಲೆಯಾದ ವ್ಯಕ್ತಿ. ಶುಕ್ರವಾರ ರಾತ್ರಿ ಊಟ ಮಾಡಿ ಮಲಗಿದ್ದರು. ಆದರೆ, ಈ ವೇಳೆ ಬಂದ ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿದ್ದಾರೆ. ಈ ವೇಳೆ ಗಲಾಟೆ ನಡೆದಿದ್ದು, ಸುಧೀರ್ ಹೆಂಡತಿ ಮತ್ತು ಮಕ್ಕಳು ಭಯಗೊಂಡಿದ್ದಾರೆ. ಅದೇ ವೇಳೆ ಸುಧೀರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳು ಹೊಟ್ಟೆ, ಕತ್ತು, ಕೈ, ಮುಖಕ್ಕೆ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾರೆ. ಸೌದಿಯಲ್ಲಿ ನೆಲೆಸಿದ್ದ ಸುಧೀರ್ ಕೋವಿಡ್ ಕಾರಣಕ್ಕೆ ಸ್ವದೇಶಕ್ಕೆ ವಾಪಸ್ ಬಂದು, ಬೆಳಗಾವಿಯಲ್ಲಿ ಮೂರು ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದರು.
ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಕ್ಯಾಂಪ್ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | child thives | ಮಕ್ಕಳ ಕಳ್ಳರ ವದಂತಿಯಿಂದ ಕಂಗೆಟ್ಟ ಹಾವೇರಿ ಜನ, ಭಯದಿಂದ ಕಂಡ ಕಂಡವರಿಗೆಲ್ಲ ಥಳಿತ