Site icon Vistara News

BBK Season 10 : ಸಂಗೀತಾ-ನಮ್ರತಾ‌ರಲ್ಲಿ ಕಿತ್ತೋದೋಳು ಯಾರು? ವಿನಯ್-ಕಾರ್ತಿಕ್‌ ಮಧ್ಯೆ ಗಂಡ್ಸು ಯಾರು?

Fight between Sangeetha and Namritha gowda in Bigg boss

ಬೆಂಗಳೂರು: ಬಿಗ್‌ ಬಾಸ್‌ (BBK Season 10) ಮನೆಯಲ್ಲಿ ಬೆಂಕಿ ಹತ್ತಿಕೊಂಡಿದೆ. ಹಳ್ಳಿ ಮನೆಯ ಟಾಸ್ಕ್‌ನಲ್ಲಿ (Halli Mane Task) ಸ್ಪರ್ಧಿಗಳು ಪರಸ್ಪರ ಕೆಟ್ಟ ಶಬ್ದಗಳಲ್ಲಿ ಬೈದಾಡಿಕೊಂಡಿದ್ದಾರೆ. ಸಂಗೀತಾ ಶೃಂಗೇರಿ ಮತ್ತು ನಮ್ರತಾ ಗೌಡ ನಡುವೆ ಕಿತ್ತೋದೋಳು ಫೈಟ್‌ ನಡೆದರೆ, ವಿನಯ್‌ ಮತ್ತು ಕಾರ್ತಿಕ್‌ ನಡುವೆ ʻಗಂಡ್ಸು ಫೈಟ್‌ ನಡೆದಿದೆ. ಇದು ವಸ್ತುಶಃ ಬೀದಿಜಗಳದಂತೆ ಕಂಡುಬಂದಿದೆ.

ಸಂಗೀತಾ ಮತ್ತು ನಮ್ರತಾ ನಡುವಿನ ವಾಗ್ಯುದ್ಧದ ವೈಖರಿ ಹೀಗಿದೆ

ತಳ್ಳೋದು ಪಳ್ಳೋದು ಮಾಡಿದ್ರೆ ತೆಗ್ದು ಕಪಾಳಕ್ಕೇ ಬಾರಿಸ್ಬೇಕು
‘ಏ ಲೂಸರ್’
ಬಾಯಿ ಮುಚ್ಕೊಂಡ್ ಆಡು’
‘ಬಾಯಿ ಮುಚ್ಕೊಂಡ್ ಆಡು ಅನ್ನೋಕೆ ನೀನ್ಯಾವಳೇ?’
‘ಕಿತ್ತೋದೋಳು’
‘ನೀನ್ ಕಿತ್ತೋದೋಳು’
‘ಮರ್ಯಾದೆ ಇಲ್ದಿರೋ ನಿನ್ನಂಥೋಳ ಹತ್ರ ಏನ್ ಮಾತು?’

ಇದಾದ ನಂತರ ವಿನಯ್‌ ಮತ್ತು ಕಾರ್ತಿಕ್‌ ನಡುವೆ ಜಗಳವಾಗಿದೆ. ಅದರಲ್ಲಿ ಕಾರ್ತಿಕ್‌ ʻ‘ಬಾರೋ’ ಎಂದು ವಿನಯ್‌ಗೆ ಸವಾಲು ಹಾಕ್ತಾನೆ. ಆಗ ವಿನಯ್‌, ‘ಹೋಗಲೇ ಗಂಡಸಿನ ಥರ ಆಡು, ಬಳೆಗಳ ಹಾಕ್ಕೊಂಡು ಹೆಂಗಸರ ಥರ ಆಡೋದಲ್ಲ’ ಎಂದು ಹೇಳುತ್ತಾನೆ.

ಈ ಚಕಮಕಿಯ ತುಣುಕುಗಳು JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿ ಕಾಣಿಸಿಕೊಂಡಿವೆ.‌

ನವೆಂಬರ್ 1ರ ರಾಜ್ಯೋತ್ಸವದ ಸಂಭ್ರಮದಲ್ಲಿ ಬಿಗ್‌ಬಾಸ್‌, ಮನೆಯೊಳಗಿನ ಸ್ಪರ್ಧಿಗಳಿಗೆ ಒಂದು ವಿಶಿಷ್ಟವಾದ ಟಾಸ್ಕ್‌ ಕೊಟ್ಟಿದ್ದರು. ಸದಸ್ಯರೆಲ್ಲರೂ ಎರಡು ಕುಟುಂಬಗಳಾಗಿ ವಿಭಾಗಗೊಂಡು ಹಳ್ಳಿ ಜೀವನವನ್ನು ನಡೆಸಬೇಕು. ಸಂಗೀತಾ ಮತ್ತು ವಿನಯ್ ಒಬ್ಬರೂ ಒಂದೊಂದು ಕುಟುಂಬದ ಮುಖ್ಯಸ್ಥರಾಗಬೇಕು ಎಂದು ಹೇಳಿದ್ದರು. ಅದರ ಪ್ರಕಾರವೇ ಟಾಸ್ಕ್‌ ಆರಂಭಗೊಂಡಿತ್ತು.

ಪ್ರಾರಂಭದಲ್ಲಿ ಹಳ್ಳಿ ಸೊಗಡಿನ ಡೈಲಾಗ್ಸ್‌, ಪರಸ್ಪರ ಕಾಲೆಳೆದುಕೊಳ್ಳುವ ಖುಷಿಯೊಂದಿಗೇ ಟಾಸ್ಕ್ ಆರಂಭಗೊಂಡಿತ್ತು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿರುವಂತೆ ತೋರುತ್ತಿತ್ತು. ಆದರೆ ಯಾವಾಗ ಹಳ್ಳಿ ಬದುಕಿನಲ್ಲಿ ಟಾಸ್ಕ್‌ ಶುರುವಾಗಿದೆಯೋ, ಒಲೆಯೊಳಗಿನ ಬೆಂಕಿ ಕಿಡಿ ಎರಡೂ ಕುಟುಂಬಗಳ ನಡುವೆಯೂ ಹಬ್ಬಿಕೊಂಡಿದೆ.
ಮಣ್ಣಿನ ಪಾತ್ರೆಗಳನ್ನು ಮಾಡುವ ಟಾಸ್ಕ್‌ನಲ್ಲಿ, ‘ಎದುರಾಳಿ ಕುಟುಂಬದ ಸದಸ್ಯರು ಅದನ್ನು ಕೆಡಿಸದಂತೆ ರಕ್ಷಿಸಿಕೊಳ್ಳಬೇಕು’ ಎಂಬ ನಿಯಮವೇ ಈ ಚಕಮಕಿಗೆ ಕಾರಣವಾದಂತಿದೆ.

ಇದನ್ನೂ ಓದಿ: BBK Season 10: ವಿನಯ್-ಸಂಗೀತಾ ನಡುವೆ ಅಸಲಿ ಆಟ; ಮನೆಯಲ್ಲಿ ಹಳ್ಳಿ ಟಾಸ್ಕ್‌!

ಒಬ್ಬರು ಮಾಡಿದ ಪಾತ್ರೆಗಳನ್ನು ಕಿತ್ತುಕೊಳ್ಳಲು ಇನ್ನೊಬ್ಬರು ಬಂದಿರುವುದು ಜಗಳಕ್ಕೆ ಕಾರಣವಾಗಿದೆ. ಅದರಲ್ಲಿಯೂ ಸಂಗೀತಾ ಮತ್ತು ನಮ್ರತಾ ನಡುವಿನ ಗಲಾಟೆ ಮತ್ತು ವಿನಯ್‌ (Vinay gowda) ಹಾಗೂ ಕಾರ್ತಿಕ್ (Kartik Mahesh) ನಡುವಿನ ಜಿದ್ದಾಜಿದ್ದಿ ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಗುವಂತಿದೆ. ಹೀಗೆ ಜಗಳದ ಕಿಡಿ ಹೊತ್ತಿಕೊಂಡ ಸಂದರ್ಭ ಯಾವುದು? ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ನೋಡಲು JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು.

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.

Exit mobile version