Site icon Vistara News

BBK Season 10: ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ವರ್ತೂರು ಸಂತೋಷ್

BBK Season 10, Varthur santhosh eliminated from bigg boss

ಬೆಂಗಳೂರು: ಬಿಗ್ ಬಾಸ್ ಸೀಸನ್ 10 (Big Boss Season 10) ಗ್ರ್ಯಾಂಡ್‌ ಫಿನಾಲೆಗೆ (Grand Finale) ಹತ್ತಿರವಾಗುತ್ತಿದ್ದಂತೆ ಅಚ್ಚರಿಯ ಎಲಿಮಿನೇಷನ್‌‌ ನಡೆದಿದೆ. ಬಿಗ್ ಬಾಸ್‌ ಸ್ಪರ್ಧೆಯ ಭಾರೀ ಟಪ್ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ವರ್ತೂರು ಸಂತೋಷ್ (Varthur Santhosh) ಅವರು ಮನೆಯಿಂದ ಹೊರ ಬಿದ್ದಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ವರ್ತೂರು ಅವರು ಬಿಗ್‌ ಬಾಸ್ ಮನೆಯಲ್ಲಿ ಕೊನೆಯವರೆಗೂ ಉಳಿಯಲಿದ್ದಾರೆಂದು ಬಹುತೇಕರು ಭಾವಹಿಸಿದ್ದರು. ಆದರೆ, ಈಗ ಅವರು ಮನೆಯಿಂದ ಹೊರ ಬಿದ್ದಿರುವುದು ಅವರ ಅಭಿಮಾನಿಗಳಿಗೆ ಭಾರೀ ಆಘಾತ ತಂದಿದೆ(BBK Season 10).

ಸ್ಪರ್ಧಿಗಳಾದ ತುಕಾಲಿ ಸಂತೋಷ್ ಮತ್ತು ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನಯ ‘ಸಂತು-ಪಂತು’ ಎಂದೇ ಗುರುತಿಸಿಕೊಂಡಿದ್ದರು. ತುಕಾಲಿ ಮತ್ತು ವರ್ತೂರು ಅವರು ಮನೆಯಲ್ಲಿ ಜೊತೆಯಾಗಿಯೇ ಇದ್ದರು. ಬಿಗ್ ಬಾಸ್ ಸೀಸನ್ 10ರ ಗೆಲ್ಲುವ ಸ್ಪರ್ಧಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು. ಆದರೆ, ಅದಕ್ಕೆಲ್ಲ ತೆರೆ ಬಿದ್ದಿದೆ. ಕಿಚ್ಚನ ಪಂಚಾಯ್ತಿಯಲ್ಲಿ ವರ್ತೂರು ಅವರು ಎಲಿಮಿನೇಟೆಡ್ ಆಗಿದೆ ಎಂದು ಹೇಳಲಾಗುತ್ತಿದೆ.

ಮನೆಯಲ್ಲಿ ಎಲ್ಲರೂ ಸೇರಿ ನನಗೆ ಮೋಸ ಮಾಡಿದರು ಎಂದು ವರ್ತೂರು ಹೇಳಿದ್ದಾರೆಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈಗಾಗಲೇ ಟಿಕೆಟ್ ಫಿನಾಲೆ ಗೆದ್ದಿರುವ ಸಂಗೀತಾ ಅವರು ಫೈನಲ್‌ಗೆ ಆಯ್ಕೆಯಾಗಿದ್ದಾರೆ. ವರ್ತೂರು ಮನೆಯಿಂದ ಹೊರ ಬಂದಿರುವುದರಿಂದ ಪ್ರತಾಪ್ ಸೇರಿದಂತೆ ಉಳಿದವರು ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡುವ ಸಾಧ್ಯತೆಗಳಿವೆ.

ವರ್ತೂರು ಅವರು ಹುಲಿ ಉಗುರಿನ ಲಾಕೆಟ್‌ ಧರಿಸಿಕೊಂಡು ಬಿಗ್ ಬಾಸ್ ಮನೆಗೆ ಬಂದಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರಿಂದ, ವರ್ತೂರು ಸಂತೋಷ್ ಅವರು ಅರೆಸ್ಟ್ ಕೂಡ ಆಗಿದ್ದರು. ಮತ್ತೆ ಜಾಮೀನು ದೊರೆತ ಮೇಲೆ ಅವರು ಬಿಗ್ ಬಾಸ್ ಮನೆಗೆ ಹಿಂದಿರುಗಿದ್ದರು. ಈ ಹುಲಿ ಉಗುರು ಲಾಕೆಟ್ ಪ್ರಕರಣವು ಅವರಿಗೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಈಗ ಅವರು ಮನೆಯಿಂದ ಹೊರ ಬಂದಿರುವುದು ಅವರು ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ.

ಈ ಸುದ್ದಿಯನ್ನೂ ಓದಿ: BBK Season 10: ಚರ್ಚೆ ಹುಟ್ಟು ಹಾಕಿದೆ ವರ್ತೂರು ಸಂತೋಷ್‌ ಮದುವೆ ವಿಚಾರ; ಅಸಲಿಯತ್ತೇನು?

Exit mobile version