Site icon Vistara News

ಬೆಂಗಳೂರಿನ ಅಶೋಕ ಪಿಲ್ಲರ್‌ ಸಿಂಹಗಳೂ ಗರ್ಜಿಸಲಿವೆ?: ಬಿಬಿಎಂಪಿ ನಡೆಗೆ ಪ್ರತಿಪಕ್ಷ ಆಕ್ಷೇಪ

lion parliament

ಬೆಂಗಳೂರು: ನವದೆಹಲಿಯಲ್ಲಿ ನಿರ್ಮಾಣ ಆಗುತ್ತಿರುವ ನೂತನ ಸಂಸತ್‌ ಭವನದ ಮೇಲೆ ಸ್ಥಾಪನೆ ಮಾಡುತ್ತಿರುವ ಸಿಂಹಗಳ ಮಾದರಿಯಲ್ಲೇ ಬೆಂಗಳೂರಿನ ಅಶೋಕ ಪಿಲ್ಲರ್‌ನಲ್ಲಿರುವ ಸಿಂಹಗಳ ಮುಖಭಾವವನ್ನೂ ಬದಲಾವಣೆ ಮಾಡಲು ಬಿಬಿಎಂಪಿ ಮುಂದಾಗಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಸಂಸತ್‌ ಭವನದ ಮೇಲೆ ಸ್ಥಾಪಿಸಲು ಸಿಂಹಗಳ ಪ್ರತಿಕೃತಿಯನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು. ಆದರೆ ಈ ಸಿಂಹಗಳು, ಸಾರಾನಾಥದಲ್ಲಿರುವ ಮೂಲ ಸಿಂಹಗಳು, ಇಲ್ಲಿವರೆಗೆ ಭಾರತ ಸರ್ಕಾರ ರೂಪಿಸಿಕೊಂಡುಬರುತ್ತಿರುವ ಸಿಂಹಗಳಿಗಿಂತ ಭಿನ್ನವಾಗಿತ್ತು. ಹಿಂದಿನ ಸಿಂಹಗಳು ಸೌಮ್ಯ ಸ್ವಭಾವ ಹೊಂದಿದ್ದರೆ ಈಗಿನ ಸಿಂಹಗಳು ವ್ಯಘ್ರ ರೂಪದಲ್ಲಿವೆ. ಈ ಮೂಲಕ ಕೇಂದ್ರ ಸರ್ಕಾರ, ದೇಶದ ಜನರಲ್ಲಿ ಭಯವನ್ನು ನಿರ್ಮಾಣ ಮಾಡಲು ಮುಂದಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

ಸಂಸತ್‌ ಭವನದ ಸಿಂಹದ ರೀತಿಯಲ್ಲೆ ಕರ್ನಾಟಕ ಸೇರಿ ಎಲ್ಲ ರಾಜ್ಯಗಳ ಲಾಂಛನದಲ್ಲೂ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ. ಈ ಕುರಿತು ಬಿಬಿಎಂಪಿಗೂ ಸೂಚನೆ ಬಂದಿದೆ. ಬೆಂಗಳೂರಿನ ಜಯನಗರದ ಅಶೋಕ ಪಿಲ್ಲರ್‌ನಲ್ಲಿರಯವ ರಾಷ್ಟ್ರ ಲಾಂಛನದ ಬದಲಾವಣೆಗೂ ಬಿಬಿಎಂಪಿ ಸಿದ್ಧತೆ ನಡೆಸಿದೆ ಎಂದು ಬಿಬಿಎಂಪಿ ಮಾಜಿ ಪ್ರತಿಪಕ್ಷ ನಾಯಕ ಅಬ್ದುಲ್‌ ವಾಜೀದ್‌ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅಬ್ದುಲ್‌ ವಾಜೀದ್‌, ಕೇಂದ್ರ ಸರ್ಕಾರ ಲಾಂಛನವನ್ನು ಬದಲಾವಣೆ ಮಾಡಿತ್ತು. ಈಗ ಬಿಬಿಎಂಪಿಯೂ ಅಶೋಕ ಪಿಲ್ಲರ್‌ ಸಿಂಹವನ್ನು ಬದಲಾವಣೆಗೆ ಮಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರು ಮಹಾರಾಜರು ಅನಾವರಣ ಮಾಡಿದ ಅಶೋಕ ಪಿಲ್ಲರ್‌ ಬದಲಾವಣೆ ಮಾಡುವುದು ಸರಿಯಲ್ಲ, ಇದನ್ನು ವಿರೋಧಿಸುತ್ತೇವೆ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಈ ಕುರಿತು ಇನ್ನೂ ಆಲೋಚನೆ ಮಾಡಿಲ್ಲ. ಕೇಂದ್ರದಿಂದ ಸೂಚನೆ ಬಂದ ನಂತರ, ದೇಶದೆಲ್ಲೆಡೆ ಹೇಗೆ ಆಗುತ್ತದೆಯೋ ಅದೇ ರೀತಿ ಬೆಂಗಳೂರಿನಲ್ಲೂ ಬದಲಾವಣೆ ಆಗುತ್ತದೆ ಎಂದಷ್ಟೆ ಹೇಳಿದ್ದಾರೆ.

ಲಾಂಛನ ಕುರಿತು ಇತರೆ ಸುದ್ದಿಗಳ ಲಿಂಕ್‌ಗಳು ಇಲ್ಲಿವೆ

1. ರಾಷ್ಟ್ರೀಯ ಲಾಂಛನದ ಸಿಂಹಗಳಿಗೆ ಉಗ್ರ ಸ್ವರೂಪ: ಪ್ರತಿಪಕ್ಷದ ಆರೋಪಕ್ಕೆ ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?
2. ಮೋದಿಯಿಂದ ನೂತನ ಸಂಸತ್‌ ಭವನದ ಭವ್ಯ ರಾಷ್ಟ್ರೀಯ ಲಾಂಛನ ಅನಾವರಣ, ಇದರ ತೂಕ ಎಷ್ಟಿರಬಹುದು?
3. ರಾಷ್ಟ್ರ ಲಾಂಛನವನ್ನು ಕೆಳಭಾಗದಿಂದ ತೆಗೆದ ಫೋಟೋ ವೈರಲ್‌ ಆಗ್ತಿದೆ; ಶಿಲ್ಪಿ ಸುನಿಲ್‌ ಡಿಯೋರ್‌ ಸ್ಪಷ್ಟನೆ
4. ನೂತನ ರಾಷ್ಟ್ರ ಲಾಂಛನ ವಿರೋಧಿಗಳನ್ನು ಅರ್ಬನ್‌ ನಕ್ಸಲ್ಸ್‌ ಎಂದು ಕರೆದ ವಿವೇಕ್‌ ಅಗ್ನಿಹೋತ್ರಿ
5. ಇವು ಸ್ವತಂತ್ರ ಭಾರತದ ಸಿಂಹಗಳು; ರಾಷ್ಟ್ರ ಲಾಂಛನ ವಿವಾದಕ್ಕೆ ಪ್ರತಿಕ್ರಿಯಿಸಿದ ಅನುಪಮ್‌ ಖೇರ್‌
6. ರಾಷ್ಟ್ರ ಲಾಂಛನದ ವಿನ್ಯಾಸ ಬದಲಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಇದೆಯಾ?; ಕಾಯಿದೆ ಹೇಳೋದೇನು?
7. ವಿಸ್ತಾರ Explainer | ರಾಷ್ಟ್ರ ಲಾಂಛನ ವಿವಾದದ ಸಿಂಹ ಗರ್ಜನೆ! ಪ್ರತಿಪಕ್ಷಗಳ ಆರೋಪ ನಿಜವೇ?

Exit mobile version