ಬೆಂಗಳೂರು: ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲು ನಗರದ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ (Mantri Square Mall ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ಈ ಹಿಂದೆ ಕೋವಿಡ್ ಸಂದರ್ಭ ಸೇರಿ ಅನೇಕ ಬಾರಿ ಮಂತ್ರಿ ಮಾಲ್‌ಗೆ ಬೀಗ ಹಾಕಲಾಗಿತ್ತು. ಇದೀಗ ಮತ್ತೆ ದೊಡ್ಡ ಮೊತ್ತದ ತೆರಿಗೆ ಕಟ್ಟಲು ವಿಫಲವಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮಂತ್ರಿ ಮಾಲ್‌ಗೆ ಬೀಗ ಹಾಕಲಾಗಿದೆ.
51 ಕೋಟಿ ರೂ. ತೆರಿಗೆ ಬಾಕಿ
ಮಂತ್ರಿ ಮಾಲ್ 2018-19ರಿಂದ ಆಸ್ತಿತೆರಿಗೆ ಪಾವತಿಸಿಲ್ಲ ಎನ್ನಲಾಗಿದೆ. ಕಳೆದ ಫೆಬ್ರವರಿ ವೇಳೆಗೆ ಈ ಮೊತ್ತ 42.69 ಕೋಟಿ ರೂ.ಗೆ ಏರಿತ್ತು. ಆ ಸಂದರ್ಭದಲ್ಲಿ ಪಾಲಿಕೆ ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದರು. ಈಗ ಒಟ್ಟು ಮೊತ್ತ 51 ಕೋಟಿ ರೂ.ಗೆ ಏರಿದೆ. ಹೀಗಾಗಿ ಮಾಲ್‌ಗೆ ಬೀಗ ಹಾಕಿಸಿದ್ದಾರೆ.
ಸದ್ಯ ಪಾಲಿಕೆಗೆ ಆದಾಯ ಕೊರತೆ ಉಂಟಾಗಿರುವ ಕಾರಣ ವಿವಿಧ ಸಂಪನ್ಮೂಲಗಳಿಂದ ಹಣ ಕ್ರೊಡೀಕರಣಕ್ಕೆ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೋಟಿಸ್ ನೀಡಿ ತೆರಿಗೆ ಬಾಕಿ ವಸೂಲು ಮಾಡಲಾಗುತ್ತಿದೆ. ಇತ್ತೀಚಿಗೆ ಮಧ್ಯಮ ಪ್ರಮಾಣದ ವಾಣಿಜ್ಯ ಮಳಿಗೆಗಳು ಸೇರಿ 800ಕ್ಕೂ ಹೆಚ್ಚು ಅಂಗಡಿ, ಮುಂಗಟ್ಟು, ಮಾಲ್‌ಗಳಿಗೆ ಬೀಗ ಹಾಕಲಾಗಿದೆ.
ಇದನ್ನೂ ಓದಿ | ಕಲ್ಲಡ್ಕ ಪ್ರಭಾಕರ ಭಟ್: ಒಂದೇ ಭಾಷಣ; ಹತ್ತಾರು ಸೆಕ್ಷನ್‌ನಡಿ ಎಫ್‌ಐಆರ್ ದಾಖಲು!
ವಾಕಿಂಗ್ ಹೋಗುವೆ ಎಂದಳು; ಬ್ರಿಡ್ಜ್ ಮೇಲಿಂದ ಹಾರಿದಳು!
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸಮೀಪದ ಚಿಕ್ಕತೋಗೂರು ಬ್ರಿಡ್ಜ್ ಮೇಲಿಂದ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾರೆ. ಓಮಿಕಾ ಮಿಶ್ರ (28) ಆತ್ಮಹತ್ಯೆಗೆ ಯತ್ನಿಸಿದವರು.
ಜರ್ಖಾಂಡ್ ಮೂಲದ ಓಮಿಕಾ ಮಿಶ್ರ, ವಾಕಿಂಗ್ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ. ಆದರೆ ನೈಸ್ ರಸ್ತೆಯ ಬ್ರಿಡ್ಜ್ ಬಳಿ ಬಂದವಳೇ ಏಕಾಏಕಿ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬ್ರಿಡ್ಸ್ ಮೇಲಿಂದ ಬಿದ್ದ ರಭಸಕ್ಕೆ ಮುಖಕ್ಕೆ ಗಂಭೀರವಾಗಿದ್ದು, ಕೈ-ಕಾಲು ಮೂಳೆಗಳು ಮುರಿದಿದೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ | Road Accident : 3 ವರ್ಷದ ಬಾಲಕಿ ತಲೆ ಮೇಲೆ ಹರಿದ ಕಾರು; ಪೋಷಕರ ಎದುರೇ ಮೃತ್ಯು
ಓಮಿಕಾ ಮಿಶ್ರ ಪತಿ ಟೆಕ್ ಮಹೇಂದ್ರ ಕಂಪನಿಯ ಉದ್ಯೋಗಿ ಎಂದು ತಿಳಿದು ಬಂದಿದೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.