ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಗಲಿ 9 ತಿಂಗಳುಗಳೇ ಕಳೆದಿವೆ. ಆದರೂ ಅವರ ನೆನಪುಗಳನ್ನು ಮಾತ್ರ ಮಾಸಿಲ್ಲ, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಕ್ರಿಂಡಾಗಣ, ವೃತ್ತಗಳಿಗೆ, ರಸ್ತೆಗಳಿಗೆ ಪುನೀತ್ ಹೆಸರು ನಾಮಕರಣ ಮಾಡಲಾಗುತ್ತಿದೆ. ಈಗ ಬಿಬಿಎಂಪಿ (BBMP Ward) ಕೂಡ ವಾರ್ಡ್ ನಂಬರ್ 55ಕ್ಕೆ ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ನಾಮಕರಣ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಿದೆ.
ಪುನರ್‌ವಿಂಗಡನೆ ಅಂತಿಮಗೊಳಿಸಿ ಹೊರಡಿಸಿದ ರಾಜ್ಯ ಪತ್ರದಲ್ಲಿ ವಾರ್ಡ್ ನಂ. 55ರ ಕಾವೇರಿ ನಗರ ಹೆಸರನ್ನು ಬದಲಿಸಿ ಪುನೀತ್ ರಾಜಕುಮಾರ್ ಎಂದು ನಾಮಕರಣ ಮಾಡಿದೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ತಂದಿದ್ದು, ಸರ್ಕಾರದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ| ಲಾಲ್ಬಾಗ್ ಪುಷ್ಪ ಪ್ರದರ್ಶನ | ಪುನೀತ್ ರಾಜಕುಮಾರ್ ಸ್ಮರಣೆಗೆ ಸರ್ಕಾರದ ಸಿದ್ಧತೆ