ತುಮಕೂರು: ಇಲ್ಲಿನ ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದಲ್ಲಿ ಕರಡಿ ದಾಳಿ (Bear Attack) ಮುಂದುವರಿದಿದೆ. ಜಮೀನಿಗೆ ತೆರಳುತ್ತಿದ್ದ ರೈತನ (Farmer) ಮೇಲೆ ಕರಡಿ ಎರಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತಾಪರೆಡ್ಡಿ(45) ಗಂಭೀರ ಗಾಯಗೊಂಡವರು.
ಪ್ರತಾಪರೆಡ್ಡಿ ಮುಂಜಾನೆ ಎಂದಿನಂತೆ ಜಮೀನಿಗೆ ತೆರಳಿದ್ದಾರೆ. ಈ ವೇಳೆ ಬದಿಯಿಂದ ಓಡಿ ಬಂದ ಕರಡಿ ಪ್ರತಾಪ್ ಮೇಲೆ ಎರಗಿ ದಾಳಿ ಮಾಡಿದೆ. ತಲೆ ಮತ್ತು ಮುಖವನ್ನು ಪರಚಿದೆ. ಈ ವೇಳೆ ಕರಡಿಯಿಂದ ತಪ್ಪಿಸಿಕೊಳ್ಳಲು ರೈತ ಕಿರುಚಿಕೊಂಡಿದ್ದು ಗಾಬರಿಗೆ ಓಡಿ ಹೋಗಿದೆ. ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ಕೂಡಲೇ ಗಾಯಾಳನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಹಗಲು ರಾತ್ರಿಯನ್ನದೇ ಕರಡಿಗಳು ಕಾಡಿನಿಂದ ನಾಡಿಗೆ ಬರುತ್ತಿರುವುದರಿಂದ ಗ್ರಾಮಸ್ಥರು ಭೀತಿಗೊಂಡಿದ್ದಾರೆ. ಶಾಲಾ- ಕಾಲೇಜುಗಳಿಗೆ ತೆರಳುವ ಮಕ್ಕಳು ಭಯಪಡುವಂತಾಗಿದೆ. ಕರಡಿಗಳನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಗ್ಯವನ್ನು ವಿಚಾರಿಸಿದ್ದಾರೆ.
ಇದನ್ನೂ ಓದಿ: Love Jihad : ಸ್ನೇಹವನ್ನೇ ಬಳಸಿಕೊಂಡು ಸ್ನೇಹಿತನ ಹೆಂಡ್ತಿಯನ್ನೇ ಪಟಾಯಿಸಿದ ಸಲ್ಮಾನ್; ಲವ್ ಜಿಹಾದ್?
ತುಮಕೂರಲ್ಲಿ ಕರಡಿ ದಾಳಿಗೆ ಬಲಿಯಾಗಿದ್ದ ರೈತ
ಎಲೆಕಡಕಲು ಗ್ರಾಮದಲ್ಲಿ ಕರಡಿ ದಾಳಿಗೆ (Bear Attacked) ರಾಜು (33) ಎಂಬ ರೈತ ಬಲಿಯಾಗಿದ್ದರು. ಜಮೀನಿನಲ್ಲಿ ಕೆಲಸ ಮಾಡುವ ವೇಳೆ ರಾಜು ಮೇಲೆ ಕರಡಿ ದಾಳಿ ನಡೆಸಿತ್ತು. ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಆಗದೆ ಸ್ಥಳದಲ್ಲೇ ಜೀವ ಬಿಟ್ಟಿದ್ದರು.
ಕುಣಿಗಲ್ ತಾಲೂಕಿನ ಅರಮನೆ ಹೊನ್ನಮಾಚನಹಳ್ಳಿಯಲ್ಲಿ ಒಡೆಬೈರವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಕರಡಿ ಪ್ರತ್ಯಕ್ಷವಾಗಿತ್ತು. ಕರಡಿ ಪ್ರತ್ಯಕ್ಷವಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಮಧುಗಿರಿ ತಾಲೂಕಿನ ಬೇಡತ್ತೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಕರಡಿ ಓಡಾಟದ ದೃಶ್ಯವನ್ನು ಗ್ರಾಮಸ್ಥರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಆಹಾರಕ್ಕಾಗಿ ಬಂದ ಕರಡಿಯೊಂದು ಮರದಲ್ಲಿ ತಂತಿಗೆ ಸಿಲುಕಿಕೊಂಡು (Bear Stuck In Tree) ಪರದಾಡಿತ್ತು. ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿ ದಾಸೇನಹಳ್ಳಿ, ಕುಣಿಗಲ್ ತಾಲೂಕಿನ ಎಲೆಕಡಕಲು ಗ್ರಾಮದ ಸುತ್ತಮುತ್ತ ಕರಡಿ ಪ್ರತ್ಯಕ್ಷವಾಗಿತ್ತು.
ಕರಡಿ ಜತೆಗೆ ಚಿರತೆ ಭೀತಿ
ತುಮಕೂರಲ್ಲಿ ಕರಡಿ ಮಾತ್ರವಲ್ಲದೆ ಚಿರತೆಯೂ ಕಾಣಿಸಿಕೊಳ್ಳುತ್ತಿದೆ. ಇಲ್ಲಿನ ಕೊರಟಗೆರೆ ತಾಲೂಕಿನ ಮಾರಿಪಾಳ್ಯ ಗ್ರಾಮದ ಬಳಿ ಮೇಕೆ ಮೇಲೆ ಚಿರತೆ ದಾಳಿ ಮಾಡಿದೆ. ಕುರಿ- ಮೇಕೆ ಮೇಯುತ್ತಿದ್ದಾಗ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಚಿರತೆ ಸೆರೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಜಮೀನುಗಳಲ್ಲಿ ಹುಲಿ ಹೆಜ್ಜೆ ಪತ್ತೆ
ಮೈಸೂರಿನ ನಾಗರಹೊಳೆ ಅರಣ್ಯದಂಚಿನ ಜಮೀನುಗಳಲ್ಲಿ ಹುಲಿ ಹೆಜ್ಜೆ ಪತ್ತೆ ಆಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಹುಣಸೂರು ತಾಲೂಕಿನ ಹನಗೋಡು, ಮುದಗನೂರು, ಕೊಳವಿಗೆ ಗ್ರಾಮದ ಮುಸುಕಿನ ಜೋಳದ ಹೊಲದಲ್ಲಿ ಹೆಜ್ಜೆ ಗುರುತುಗಳು ಪತ್ತೆ ಆಗಿದೆ. ಜೋಳದ ಕಡ್ಡಿಗಳು ಆಳೆತ್ತರಕ್ಕೆ ಬೆಳೆದಿದ್ದು, ಹುಲಿ ಇಲ್ಲೆ ಆಶ್ರಯಿಸುವ ಭೀತಿ ಇದೆ. ರೈತರು ಹೊಲಗಳತ್ತ ತೆರಳಲು, ದನಕರುಗಳನ್ನು ಮೇಯಿಸಲು ಹೋಗದಂತಾಗಿದೆ. ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ