Site icon Vistara News

Bear attack | ರೈತನ ಮೇಲೆ ಕರಡಿಗಳ ದಾಳಿ; ಪ್ರಾಣಾಪಾಯದಿಂದ ಪಾರು

bear attck

ತುಮಕೂರು: ಇಲ್ಲಿನ ಮಧುಗಿರಿ ತಾಲೂಕಿನ ಜಡೇಗೊಂಡನಹಳ್ಳಿ ಗ್ರಾಮದಲ್ಲಿ ಮುಂಜಾನೆ ಹೊತ್ತು ರೈತರೊಬ್ಬರ ಮೇಲೆ ಕರಡಿಗಳು ದಾಳಿ (Bear attack) ನಡೆಸಿವೆ. ಜಡೇಗೊಂಡನಹಳ್ಳಿ ವಾಸಿ ಕರಿಯಣ್ಣ (45) ಕರಡಿ ದಾಳಿಗೊಳಗಾದ ರೈತ.

ಕರಿಯಣ್ಣ ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ ವಾಪಸಾಗುವಾಗ ಎರಡು ಕರಡಿಗಳು ಏಕಾಏಕಿ ದಾಳಿ ನಡೆಸಿವೆ. ಕರಡಿಯಿಂದ ತಪ್ಪಿಸಿಕೊಂಡ ರೈತ ಕರಿಯಣ್ಣ ಅವರಿಗೆ ಗಂಭೀರ ಗಾಯಗಳಾಗಿದೆ. ಕರಿಯಣ್ಣ ಅವರ ಕಿರುಚಾಟ ಕೇಳಿ ಅಕ್ಕಪಕ್ಕದ ರೈತರು ಓಡಿ ಬಂದು ಕರಡಿಯನ್ನು ಓಡಿಸಿದ್ದಾರೆ.

ಮೊದಲು ಕರಿಯಣ್ಣ ಅವರನ್ನು ತಾಲೂಕು ಆಸ್ಪತ್ರೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Ganesh chaturthi | ಕೋಲು ಬಿಟ್ಟು ಡೋಲು ಬಡಿದ ಅಥಣಿ ಪೊಲೀಸರು, ಠಾಣೆಗೇ ಬಂದ ಗಣೇಶ!

Exit mobile version