Site icon Vistara News

Belagavi News: ಬಿಲ್ ಮಂಜೂರಾತಿ ವಿಚಾರ ಗ್ರಾಪಂ ಅಧ್ಯಕ್ಷ-ಸದಸ್ಯರ ಮಧ್ಯೆ ಮಾರಾಮಾರಿ; ಸಿಸಿ ಕ್ಯಾಮೆರಾದಲ್ಲಿ ಸೆರೆ

Belagavi News

ಬೆಳಗಾವಿ: ಬಿಲ್ ಮಂಜೂರಾತಿ ವಿಚಾರವಾಗಿ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ (Belagavi News) ಜಿಲ್ಲೆಯ ಕಿತ್ತೂರು ತಾಲೂಕಿನ ಉಗರಖೋಡ ಗ್ರಾಮದಲ್ಲಿ ನಡೆದಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕರೆಯಲಾಗಿದ್ದ ಸಭೆಯಲ್ಲಿ ಘರ್ಷಣೆ ನಡೆದಿದೆ.

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸದಸ್ಯರು ಕೊಳವೆಬಾವಿ ಕೊರಿಸಿದ್ದರು. ಆದರೆ ಬಿಲ್ ಮಂಜೂರಾತಿಗೆ ಅಧ್ಯಕ್ಷ ಒಪ್ಪಿಗೆ ನೀಡದ ಹಿನ್ನೆಲೆ ಸದಸ್ಯರು ವಾಗ್ವಾದ ನಡೆಸಿದ್ದಾರೆ. ಇದು ವಿಕೋಪಕ್ಕೆ ತಿರುಗಿ ಸದಸ್ಯರು ಹಾಗೂ ಅಧ್ಯಕ್ಷರ ಮಧ್ಯೆ ಮಾರಾಮಾರಿ ನಡೆದಿದೆ. ಗಲಾಟೆಯ ದೃಶ್ಯ ಪಂಚಾಯಿತಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ | Love Case : ಪ್ರಿಯತಮೆಯ ಮದುವೆ ದಿನವೇ ಪ್ರಿಯತಮನ ರುಂಡ-ಮುಂಡ ಕಟ್‌; ಕೊಲೆಯೋ? ಆತ್ಮಹತ್ಯೆಯೋ?

ಗದಗದಲ್ಲಿ ನಾಲ್ವರ ಹತ್ಯೆ: ಮನೆಮಗನೇ ನೀಡಿದ ಸುಪಾರಿಗೆ ಅಮಾಯಕ ನೆಂಟರು ಬಲಿ!

ಗದಗ: ಗದಗದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ (Gadag Murder Case) ಕೇಸ್‌ಗೆ ವಿಚಿತ್ರ ಟ್ವಿಸ್ಟ್‌ ದೊರೆತಿದೆ. ಮನೆಯ ಹಿರಿಯ (Elder son) ಮಗನೇ ಆಸ್ತಿಯ ದಾಹದಿಂದ ತನ್ನ ತಂದೆ ತಾಯಿಯನ್ನು ಕೊಲೆ ಮಾಡಲು ಸುಪಾರಿ (Supari Murder) ನೀಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಆದರೆ, ಸುಪಾರಿ ಕಿಲ್ಲರ್‌ಗಳ ಎಡವಟ್ಟಿನಿಂದಾಗಿ, ಆ ದಿನ ಮನೆಗೆ ಬಂದು ಉಳಿದುಕೊಂಡಿದ್ದ ಅಮಾಯಕ ನೆಂಟರು ಜೀವ ತೆತ್ತಿದ್ದಾರೆ!

ಗದಗ ನಗರದ ದಾಸರ ಓಣಿಯಲ್ಲಿ ನಾಲ್ವರ ಭೀಕರ ಹತ್ಯೆ (Murder Case) ನಡೆದಿತ್ತು. ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಗೆ ಕೊಲೆ ನಡೆದಿತ್ತು. ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್ ಬಾಕಳೆ, ಹಾಲಿ ಉಪಾಧ್ಯಕ್ಷೆ ಸುನಂದಾ ಬಾಕಳೆ ಟಾರ್ಗೆಟ್ ಮಾಡಿ ಕೃತ್ಯ ನಡೆದಿತ್ತು. ಕೊಲೆಗಾರರು ಮನೆಗೆ ನುಗ್ಗಿ ಮೇಲಿನ ಮಹಡಿಯಲ್ಲಿ ಮಲಗಿದ್ದ ಪ್ರಕಾಶ್ ಅವರ ಕಿರಿಯ ಮಗ ಕಾರ್ತಿಕ್ ಬಾಕಳೆ (28), ಪರಶುರಾಮ್ ಹಾದಿಮನಿ (55), ಲಕ್ಷ್ಮೀ ಹಾದಿಮನಿ (45) ಮತ್ತು ಆಕಾಂಕ್ಷಾ (16) ಇವರನ್ನು ಹತ್ಯೆ ಮಾಡಿದ್ದರು. ಮೇಲಿನ ಮಹಡಿಯಲ್ಲಿ ಸದ್ದು ಆಗಿದ್ದರಿಂದ ಆತಂಕಗೊಂಡಿದ್ದ ಪ್ರಕಾಶ್‌ ಬಾಕಳೆ ಪೊಲೀಸರಿಗೆ ಫೋನ್‌ ಮಾಡಿದಾಗ ಕೊಲೆಗಾರರು ಪರಾರಿಯಾಗಿದ್ದರು.

ಹಿರಿಯ ಮಗನೇ ನೀಡಿದ ಸುಪಾರಿ

ಇದೀಗ ಮನೆ ಮಗನೇ ಇವರಿಗೆ ಯಮನಾಗಿರುವುದು ಗೊತ್ತಾಗಿದೆ. ಪ್ರಕಾಶ್ ಬಾಕಳೆ ಅವರ ಹಿರಿಯ ಮಗ ವಿನಾಯಕ್ ಬಾಕಳೆಯೇ ಕೊಲೆಗೆ ಸುಪಾರಿ ನೀಡಿದ್ದಾನೆ. ಮಹರಾಷ್ಟ್ರ ಮೂಲದ ಫಯಾಜ್ ಆ್ಯಂಡ್ ಗ್ಯಾಂಗ್‌ಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಲು ಮುಂದಾಗಿದ್ದಾನೆ. ಕೊಲೆಯ ಹಿಂದೆ ಆಸ್ತಿ ಹಂಚಿಕೆ ತಗಾದೆ ಇರುವ ಬಗ್ಗೆ ಅನುಮಾನ ಇದೆ. ಗದಗ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆಯಾದ ಪರಶುರಾಮ್ ಹಾದಿಮನಿ, ಆಕಾಂಕ್ಷಾ, ಲಕ್ಷ್ಮೀ ಹಾದಿಮನಿ ಮತ್ತು ಕಾರ್ತಿಕ್ ಬಾಕಳೆ.

ವಿಚಿತ್ರ ಎಂದರೆ, ಮೊದಲಿಗೆ ಪೊಲೀಸರು ಹಾಗೂ ಸ್ವತಃ ತಂದೆ ಪ್ರಕಾಶ್‌ ಬಾಕಳೆ ಸಹ, ಇನ್ನೊಬ್ಬ ಮಗ ದತ್ತಾತ್ರೇಯ ಎಂಬಾತನನ್ನು ಈ ಕೃತ್ಯದಲ್ಲಿ ಅನುಮಾನಿಸಿದ್ದರು. ಕೃತ್ಯದ ಹಿಂದೆ ಮಗ ದತ್ತಾತ್ರೇಯನ ʼನಕಲಿ‌ ಗೋಲ್ಡ್’ ದಂಧೆಯ ಕರಿನೆರಳು ಇರಬಹುದು. ಮಗನಿಂದ ಮೋಸ ಹೋದವರಿಂದ ಈ ಹತ್ಯೆ ನಡೆದಿರಬಹುದು. ಮಗನ ಮೇಲೆ ಅನುಮಾನ ಇದೆ. ಅವನಿಂದ ಮೋಸ ಹೋದವರಿಂದ ಕೃತ್ಯ ನಡೆದಿರಬಹುದು. ಅಥವಾ ಅವನ‌ ಸುಪಾರಿಯಿಂ‌ಂದಲೇ ನಾಲ್ವರ ಹತ್ಯೆ ಆಗಿರಬಹುದು ಎಂದು ಪ್ರಕಾಶ ಬಾಕಳೆ ಅನುಮಾನ ವ್ಯಕ್ತಪಡಿಸಿದ್ದರು.

ಎರಡನೇ ಮಗನ ಮೇಲೆ ಸಂಶಯ

ಪ್ರಕಾಶ ಬಾಕಳೆಗೆ ಇಬ್ಬರು ಹೆಂಡತಿಯರು. ಮೊದಲನೇ ಹೆಂಡತಿ ಮಕ್ಕಳು ಮೂರು ಜನ. ಹಿರಿಯ ಮಗ ವಿನಾಯಕ, ಎರಡನೇ ಮಗ ದತ್ತಾತ್ರೇಯ. ಮತ್ತೊಬ್ಬಳು ಮಗಳು. ಆಕೆಯನ್ನು ಮದುವೆ ಮಾಡಿಕೊಡಲಾಗಿದೆ. ಹಿರಿಯ ಮಗನೇ ಮನಯಲ್ಲಿ ಜೊತೆಯಲ್ಲಿದ್ದುಕೊಂಡೇ ಮರ್ಡರ್ ಸ್ಕೆಚ್ ಹಾಕಿದ್ದಾನೆ.

ಎರಡನೇ ಮಗ ದತ್ತಾತ್ರೇಯ ಬಾಕಳೆ ವಿರುದ್ಧ ನಕಲಿ ಗೋಲ್ಡ್ ಅಡವಿಟ್ಟು ಬ್ಯಾಂಕ್‌ಗೆ ಫ್ರಾಡ್ ಮಾಡಿರುವ ಆರೋಪ ಇದೆ. ಗದಗ, ಮುಂಡರಗಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಬ್ಯಾಂಕ್‌ಗಳನಲ್ಲಿ ನಕಲಿ ಗೋಲ್ಡ್ ಅಡವಿಟ್ಟು ಹಣ ಪಡೆಯಲು ದತ್ತಾತ್ರೇಯ ಪ್ಲಾನ್ ಮಾಡಿದ್ದ. ಅಮಾಯಕರ ಹೆಸರಲ್ಲಿ ಖಾತೆ ತೆಗೆದು, ಬ್ಯಾಂಕ್‌ಗೆ ಮೋಸ ಎಸಗಿದ್ದಾನೆ. ದತ್ತಾತ್ರೇಯ ಸೇರಿ 18 ಜನರ ಟೀಮ್‌ ಗದಗಿನ ಐಡಿಎಫ್‌ಸಿ ಬ್ಯಾಂಕಿನಲ್ಲಿ‌ 4 ಕೆಜಿ ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್‌ನಿಂದ 45 ಕೋಟಿ ರೂಪಾಯಿ ಹಣ ಪಡೆಯಲು ಮುಂದಾಗಿತ್ತು. ವಿವಿಧೆಡೆ ಬ್ಯಾಂಕ್ ಫ್ರಾಡ್ ಕೇಸ್‌ನಲ್ಲಿ ಭಾಗಿಯಾಗಿ ದತ್ತಾತ್ರೇಯ ಅಲಿಯಾಸ್ ದತ್ತು ಅಲಿಯಾಸ್ ಯಶ್ ಬಾಕಳೆ ತಲೆ ಮರೆಸಿಕೊಂಡಿದ್ದು, ಹೀಗಾಗಿ ಆತನನ್ನು ತಂದೆ ಪ್ರಕಾಶ್ ಬಾಕಳೆ ದೂರ ಇಟ್ಟಿದ್ದರು.

ಇದನ್ನೂ ಓದಿ: Murder Case: ನಗರಸಭೆ ಉಪಾಧ್ಯಕ್ಷೆಯ ಮಗ ಸೇರಿ 4 ಮಂದಿ ಮಲಗಿದಲ್ಲೇ ಕೊಚ್ಚಿ ಕೊಲೆ

ಇದೇ ಸಮಯ ನೋಡಿ ಹಿರಿಯ ಮಗ ವಿನಾಯಕ ಕೊಲೆಗೆ ಸುಪಾರಿ ನೀಡಿದ್ದಾನೆ. ದತ್ತಾತ್ರೇಯನ ಮೇಲೆ ಆರೋಪ ಬಂದು ತಾನು ಪಾರಾಗಬಹುದು ಎಂದು ಈತ ಸ್ಕೆಚ್‌ ಹಾಕಿದ್ದ ಎಂದು ತರ್ಕಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Exit mobile version