Site icon Vistara News

Power Point with HPK : ಜನ ಇರೋವರೆಗೂ ನಮ್ಮ ಕಂಟ್ರೋಲ್‌ನಲ್ಲೇ ಇರುತ್ತೆ ಬೆಳಗಾವಿ: ಸತೀಶ್‌ ಜಾರಕಿಹೊಳಿ

satish jarkiholi in Power Point with HPK

ಬೆಂಗಳೂರು: ಬೆಳಗಾವಿ ರಾಜಕಾರಣದ (Belagavi politics) ಹಿಡಿತ ಖಂಡಿತ ಕೈತಪ್ಪುವುದಿಲ್ಲ. ಜನರು ಎಲ್ಲಿಯವರೆಗೆ ನಮ್ಮ ಜತೆ ಇರುತ್ತಾರೋ ಅಲ್ಲಿಯವರೆಗೆ ಜಿಲ್ಲೆ ನಮ್ಮ ಕಂಟ್ರೋಲ್‌ನಲ್ಲಿಯೇ ಇರಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ (PwD Minister Satish Jarkiholi) ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಈಗ ಜನ ಕೂಡ ನಮ್ಮನ್ನು ಬಯಸುತ್ತಾರೆ. ನಾವು ಎಲ್ಲಿಯವರೆಗೆ ಜನರ ಪರವಾಗಿ ಕೆಲಸ ಮಾಡುತ್ತೇವೋ ಅವರೂ ಸಹ ಅಲ್ಲಿಯವರೆಗೆ ನಮ್ಮ ಪರ ಇರುತ್ತಾರೆ. ನಮ್ಮ ನಾಯಕತ್ವಕ್ಕೆ ಏನೂ ಆಗುವುದಿಲ್ಲ. ಹಾಗಾಗಿ ಅಲ್ಲಿಯವರೆಗೆ ನಾಯಕತ್ವ ಕೈತಪ್ಪುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.

ನನ್ನನ್ನು ಪಕ್ಷದಲ್ಲಿ ಕಡೆಗಣಿಸಿಲ್ಲ

ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ನನ್ನನ್ನು ಕಡೆಗಣಿಸಲಾಗಿಲ್ಲ. ನಾನು ಈಗ ಸಚಿವನಾಗಿರುವುದರಿಂದ ಬೇರೆಯವರಿಗೆ ಈ ಜವಾಬ್ದಾರಿಯನ್ನು ಕೊಡಿ ಎಂದು ನಾನು ಈಗ ಎರಡು ತಿಂಗಳು ಮುಂಚೆಯೇ ಹೇಳಿದ್ದೇನೆ. ವರಿಷ್ಠರ ಗಮನಕ್ಕೆ ತರುವ ಪ್ರಯತ್ನವನ್ನೂ ಮಾಡಿದ್ದೇನೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ಇಲಾಖೆಯಲ್ಲಿ ಹೊಸತನ ತರುವೆ

ಅಧಿಕಾರಕ್ಕೆ ಬಂದ ಮೇಲೆ ಲೋಕೋಪಯೋಗಿ ಇಲಾಖೆ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ಅದಕ್ಕೆ ಸಮಯ ಬೇಕಾಗುತ್ತದೆ. ಈಗಾಗಲೇ ಐದು ತಿಂಗಳು ಕಳೆದಿದೆ. ಹಲವಾರು ಸಭೆಗಳನ್ನು ನಡೆಸಿದ್ದೇವೆ. ಸಭೆಗಳನ್ನು ನಡೆಸಿದ್ದೇವೆ. ಯಾವೆಲ್ಲ ಹೊಸ ಯೋಜನೆಗಳನ್ನು ಜಾರಿಗೆ ತರಬೇಕು. ಇಲಾಖೆ ಪುನಶ್ಚೇತನಕ್ಕೆ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚಿಂತನೆಗಳನ್ನು ನಡೆಸಲಾಗಿದೆ. ತಂತ್ರಜ್ಞಾನಗಳ ಅಳವಡಿಕೆ ಸಹಿತ ಹೊಸತನ ಅಳವಡಿಸಿಕೊಳ್ಳುವುದು, ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿಪಡಿಸುವ ಕೆಲಸಗಳು ಸಹ ನಡೆಯುತ್ತಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

ಲಕ್ಷ್ಮಣ್‌ ಸವದಿಯಿಂದ ನನ್ನ ನಾಯಕತ್ವಕ್ಕೆ ಸಮಸ್ಯೆ ಇಲ್ಲ

ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ಗೆ ಬಂದ ಮೇಲೆ ನನ್ನ ಪ್ರಭಾವ ಕುಂದುತ್ತದೆ ಎಂದು ಹೇಳಲು ಬರುವುದಿಲ್ಲ. ಒಬ್ಬೊಬ್ಬರದ್ದು ಒಂದೊಂದು ರೀತಿಯ ನಾಯಕತ್ವ ಇರುತ್ತದೆ. ಲಕ್ಷ್ಮಣ ಸವದಿ ಅವರದ್ದು ಸಂಘಟನೆ ಮಾದರಿ ನಾಯಕತ್ವವಾಗಿದೆ. ಸತೀಶ್‌ ಜಾರಕಿಹೊಳಿ ಅವರದ್ದೇ ಬೇರೆಯಾಗಿರುತ್ತದೆ. ಲಕ್ಷ್ಮಿ ಹೆಬ್ಬಾಳ್ಕರ್‌ ಅವರದ್ದು ಇನ್ನೂ ಡಿಫರೆಂಟ್‌ ಆಗಿರುತ್ತದೆ. ಹೀಗಾಗಿ ಅವರು ಬಂದರೆ ನಮ್ಮದು ಕಡಿಮೆಯಾಗುತ್ತದೆ, ನಾವಿದ್ದರೆ ಅವರ ಸ್ಥಾನಮಾನ ಕಡಿಮೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅವರವರ ಬೆಂಬಲದ ಮೇಲೆ ಲೀಡರ್‌ಶಿಪ್‌ ಅವಲಂಬಿತ ಆಗುತ್ತದೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ: Power Point with HPK : ಮುಂದಿನ ವರ್ಷಕ್ಕೆ 600 ಕೆಪಿಎಸ್‌ ಶಾಲೆ; ಮಕ್ಕಳಿಗೆ ತಗ್ಗಲಿದೆ ಬ್ಯಾಗ್‌ ಹೊರೆ!

ಲಕ್ಷ್ಮಣ ಸವದಿ ಅವರನ್ನು ಪಕ್ಷದ ಕಾರ್ಯಾಧ್ಯಕ್ಷ ಮಾಡುವ ವಿಚಾರ ನನಗೆ ಗೊತ್ತಿಲ್ಲ. ಬೇರೆ ಬೇರೆಯವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಿಂದ ನನಗೇನೂ ಆತಂಕವಾಗಲೀ, ಭಯ ಆಗಲೀ ಇಲ್ಲ. ಅವರೂ ಸಹ ಪಕ್ಷಕ್ಕೆ ಕೆಲಸ ಮಾಡುತ್ತಾರೆ. ನಾನೂ ಸಹ ಪಕ್ಷಕ್ಕೆ ಕೆಲಸವ ಮಾಡುತ್ತೇನೆ. ಯಾರೇ ಆದರೂ ಕೂಡಾ ನಾನು ಸ್ವಾಗತವನ್ನು ಮಾಡುತ್ತೇನೆ. ನನಗೆ ಅವಕಾಶ ಸಿಕ್ಕಾಗ ನಾನು ಮಾಡಿದ್ದೇನೆ. ಅವರಿಗೆ ಅವಕಾಶ ಸಿಕ್ಕರೆ ಅವರು ಕೆಲಸ ಮಾಡಬೇಕು ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

Exit mobile version