Site icon Vistara News

Sheeps Die | ಬೆಳಗಾವಿ ಸುವರ್ಣಸೌಧದ ಬಳಿ ಬಿಸಾಕಿದ್ದ ಊಟ ತಿಂದು 10 ಕುರಿ ಸಾವು, 70 ಕುರಿಗಳು ಅಸ್ವಸ್ಥ

Sheeps Die

ಬೆಳಗಾವಿ: ಸುವರ್ಣ ಸೌಧದ ಬಳಿಯ ಕೊಂಡಸಕೊಪ್ಪದ ಬಳಿ ಬಿಸಾಕಿದ್ದ ಊಟ ತಿಂದು ೧೦ ಕುರಿಗಳು ಮೃತಪಟ್ಟು, ೭೦ ಕುರಿಗಳು ಅಸ್ವಸ್ಥಗೊಂಡಿವೆ. ಕಳೆದ ನಾಲ್ಕು ದಿನಗಳ ಹಿಂದೆ ಬಸ್ತವಾಡ ಬಳಿ ಪಂಚಮಸಾಲಿ ಸಮಾವೇಶ ನಡೆದಿತ್ತು. ಕಾರ್ಯಕ್ರಮದಲ್ಲಿ ಉಳಿದ ಅನ್ನ, ರೊಟ್ಟಿಗಳನ್ನು ಸ್ಥಳದಲ್ಲೇ ಎಸೆಯಲಾಗಿತ್ತು. ಆ ಊಟ ಸೇವಿಸಿ ಕುರಿಗಳು (Sheeps Die) ಅಸ್ವಸ್ಥಗೊಂಡಿವೆ.

ನಿಂಗಪ್ಪ ದೆಮಣ್ಣವರ, ಸುನೀಲ್ ದೆಮಣ್ಣವರ ಕುರಿಗಳು ಮೃತಪಟ್ಟಿವೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಿಸಾಡಿದ್ದ ಊಟವನ್ನು ತಿಂದು ಕುರಿಗಳು ಅಸ್ವಸ್ಥಗೊಂಡಿದ್ದವು. ಸ್ಥಳಕ್ಕೆ ಕೆ.ಕೆ. ಕೊಪ್ಪ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ೭೦ ಕುರಿಗಳು ಪ್ರಾಣಾಪಾಯದಿಂದ ಪಾರಾಗಿವೆ.

ಇದನ್ನೂ ಓದಿ | Sagara News | 30ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ, ಫುಡ್ ಪಾಯಿಸನ್ ಶಂಕೆ

Exit mobile version