Site icon Vistara News

Accident | ಬೆಳಗಾವಿಯಲ್ಲಿ ಭೀಕರ ಅಪಘಾತ, ಕ್ರೂಸರ್‌ ಪಲ್ಟಿಯಾಗಿ 7 ಜನ ಸಾವು, ಹಲವರ ಸ್ಥಿತಿ ಗಂಭೀರ

r

ಬೆಳಗಾವಿ: ತಾಲೂಕಿನ ಕಳ್ಯಾಲ್‌ ಪೂಲ್‌ ಬಳಿ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್‌ ವಾಹನ ಪಲ್ಟಿಯಾಗಿ (Accident) ೭ ಜನರು ಮೃತಪಟ್ಟಿದ್ದಾರೆ. ೧೧ ಜನರು ಗಾಯಗೊಂಡಿದ್ದಾರೆ. ಮೃತರನ್ನು ಅಡಿವೆಪ್ಪ ಚಿಲಬಾಂವಿ (27), ಬಸವರಾಜ್ ದಳವಿ (30, ಬಸವರಾಜ ಹನಮನ್ನವರ (51), ಆಕಾಶ ಗಸ್ತಿ (22) ( ಇವರೆಲ್ಲ ಗೋಕಾಕ್‌ ತಾಲೂಕಿನ ಅಕ್ಕತಂಗಿಯರಹಾಳ್ ಗ್ರಾಮದವರು), ಫಕಿರಪ್ಪ ಹರಿಜನ (55), ಮಲ್ಲಪ್ಪ ದಾಸನಟ್ಟಿ (30) (ದಾಸನಟ್ಟಿ ಗ್ರಾಮದವರು) ಎಂದು ಗುರುತಿಸಲಾಗಿದ್ದು, ಇನ್ನೊಬ್ಬರ ಹೆಸರು ಗೊತ್ತಾಗಿಲ್ಲ.

ಒಟ್ಟು 18ಮಂದಿ ಕೂಲಿ ಕಾರ್ಮಿಕರನ್ನು ಅವರ ಹಳ್ಳಿಗಳಿಂದ ಬೆಳಗಾವಿಗೆ ಕ್ರೂಸರ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಕಳ್ಯಾಲ್‌ ಪೂಲ್‌ ಬಳಿ ಅಪಘಾತ ನಡೆದಿದೆ. ಕ್ರೂಸರ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಕೆಳಗೆ ಬಿದ್ದಿದೆ. ಸ್ಥಳಕ್ಕೆ ಮಾರಿಹಾಳ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಗಾಯಗೊಂಡವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪೈಪೋಟಿಯಿಂದ ಅಪಘಾತ !
ಕ್ರೂಸರ್‌ ಪಲ್ಟಿಯಾಗಲು ಕಾರಣ ಚಾಲಕನ ಹುಡುಗಾಟವೂ ಕಾರಣವಾಗಿದೆ. ಬೆಳಗಾವಿ ಸಾಂಬ್ರಾ-ಸುಳೇಭಾವಿ ರೈಲು ಮಾರ್ಗದಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು ಅದಕ್ಕಾಗಿ ಅಕ್ಕತಂಗಿಯರಹಾಳ್, ದಾಸನಹಟ್ಟಿ ಸೇರಿ ಸುತ್ತಲಿನ ಹಳ್ಳಿಗಳಿಂದ ಪ್ರತಿದಿನ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗಲಾಗುತ್ತಿದೆ. ದಿನ ಬೆಳಗಿನ ಜಾವ, ಕೂಲಿ ಕೆಲಸಗಾರರನ್ನು ಹೊತ್ತ ಸುಮಾರು ಮೂರು ಕ್ರೂಸರ್‌ಗಳು ಹೊರಡುತ್ತವೆ. ಇಂದು ಕೂಡ ಹಾಗೇ ಮೂರು ವಾಹನಗಳು ಹೊರಟು ಚಾಲಕರು ಪರಸ್ಪರ ಸ್ಪರ್ಧೆಗೆ ಬಿದ್ದಿದ್ದಾರೆ. ನಾವೇ ಮುಂದೆ ಹೋಗಬೇಕು ಎಂದು ಪೈಪೋಟಿ ಶುರುವಿಟ್ಟುಕೊಂಡಿದ್ದರು. ಆಗ ಈ ಕ್ರೂಸರ್‌ ಚಾಲಕ ಮತ್ತೊಂದು ಕ್ರೂಸರ್‌ ಹಿಂದಿಕ್ಕಲು ವೇಗವಾಗಿ ಹೋಗಿ ರಸ್ತೆಯ ಸೇತುವೆ ಕಟ್ಟೆಗೆ ಡಿಕ್ಕಿ ಹೊಡೆದಿದ್ದಾನೆ. ವಾಹನ ಎರಡು ಪಲ್ಟಿಯಾಗಿ ಬಿದ್ದಿದೆ ಎನ್ನಲಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ, ಮೂವರು ಸಾವು

Exit mobile version