ಬೆಳಗಾವಿ : ಶಾಸಕ ಅನಿಲ ಬೆನಕೆ ಅವರನ್ನು ಬೆಳಗಾವಿ ಬಿಜೆಪಿ ನಗರ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇಮಕ ಮಾಡಿದ್ದಾರೆ. ಈ ಹಿಂದೆ ಶಶಿಕಾಂತ ಪಾಟೀಲ ಅವರು ಅಧ್ಯಕ್ಷರಾಗಿದ್ದರು. ಇದೀಗ ಅವರನ್ನು ಬದಲಾಯಿಸಿ ಅನಿಲ ಬೆನಕೆಗೆ ಜವಾಬ್ದಾರಿ ನೀಡಲಾಗಿದೆ. ಶಶಿಕಾಂತ ಪಾಟೀಲ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಾಕಿ ವಿವಾದಕ್ಕೊಳಗಾಗಿದ್ದರು.
ಶಶಿಕಾಂತ್ ಪಾಟೀಲ್ ಶಾಲೆಯೊಂದನ್ನು ಆರಂಭಿಸಿದ್ದು, ಅದಕ್ಕೆ ಹೆಚ್ಚಿನ ಸಮಯವನ್ನು ನೀಡಿಬೇಕಿರುವುದರಿಂದ ಅಧ್ಯಕ್ಷ ಸ್ಥಾನದ ಜವಬ್ಧಾರಿ ಬೇಡ ಎಂದು ಕೆಲವು ದಿನಗಳ ಹಿಂದೆ ಹೇಳಿದ್ದರು ಎಂದು ಶಾಸಕ ಅಭಯ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ | MLC Election | ಬಿಜೆಪಿ ಬೇಲೂರು, ಗ್ರಾಮಾಂತರ ಮಂಡಲ ಸಭೆ
ಶಶಿಕಾಂತ ಪಾಟೀಲ್ ಮರಾಠ ಸಮಾಜದವರು. ಅನಿಲ ಬೆನಕೆ ಕೂಡ ಮರಾಠ ಸಮಾಜದವರು. ಮರಾಠಾ ಸಮಾಜದವರು ಅಸಮಾಧಾನವಾಗದಂತೆ ನೋಡಿಕೊಳ್ಳುವ ಉದ್ದೇಶ ಅನಿಲ ಬೆನಕ ಅವರನ್ನು ನೇಮಕ ಮಾಡಲಾಗಿದೆ.
ಶಶಿಕಾಂತ ಪಾಟೀಲ ಅವರಿಗೆ ಇನ್ನೂ 6 ತಿಂಗಳು ಅಧಿಕಾರಾವಧಿ ಇತ್ತು. ಹಾಗಾಗಿ 6 ತಿಂಗಳ ಮಟ್ಟಿಗೆ ಬೆನಕೆಗೆ ಜವಾಬ್ದಾರಿ ನೀಡಲಾಗಿದೆ. ಅನಿಲ ಬೆನಕೆಗೆ ಬೆಳಗಾವಿ ಉತ್ತರ ಕ್ಷೇತ್ರದ ಟಿಕೆಟ್ ಪಡೆಯಲು ಅನೇಕರು ಕಸರತ್ತು ಆರಂಭಿಸಿದ್ದಾರೆ. 10 ಕ್ಕೂ ಹೆಚ್ಚು ಆಕಾಂಕ್ಷಿಗಳು ಲಾಬಿ ನಡೆಸಿದ್ದು, ಕುತೂಹಲ ಮೂಡಿಸಿದೆ. ಹಾಲಿ ಶಾಸಕರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ ಬಗ್ಗೆ ಬೆಳಗಾವಿ ರಾಜಕಾರಣದಲ್ಲಿ ಬಿಸಿಬಿಸಿ ಚರ್ಚೆ ಈಗಾಗಲೇ ಶುರುವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅನಿಲ್ ಬೆನಕೆಗೆ ಟಿಕೆಟ್ ಕೈ ತಪ್ಪುತ್ತದೆಯೇ? ಎಂಬ ಪ್ರಶ್ನೆಗಳು ಉದ್ಭವಿಸಿದೆ.
ಶಾಕರಾಗಿದ್ದವರು ಸಂಘಟನೆಯ ಜವಬ್ದಾರಿ ವಹಿಸಿಕೊಂಡರೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎನ್ನುವ ಉದ್ದೇಶದಿಂದ ಈ ನೇಮಕ ಮಾಡಿರಬಹುದು. ಆದರೆ ಚುನಾವಣೆ ಒಂದೇ ವರ್ಷವಿರುವಾಗ ಈ ಬೆಳವಣಿಗೆ ನಡೆದಿರುವುದು ಚರ್ಚೆಗೆ ಎಡೆಮಾಡಿದೆ.
ಇದನ್ನೂ ಓದಿ | ಮಂಡ್ಯದಲ್ಲಿ BJP ಅರಳಿಸಲು ಅನ್ಯ ಪಕ್ಷಗಳ ಮುಖಂಡರಿಗೆ ಗಾಳ