ಬೆಳಗಾವಿ: ಪಿಎಸ್ಐನಿಂದ ಹೆಂಡತಿ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ (Assault Case) ಆರೋಪ ಕೇಳಿ ಬಂದಿದೆ. ತೀವ್ರ ಹಲ್ಲೆಗೊಳಗಾದ ಪತ್ನಿ ಬಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಲಾಗಿದೆ.
ಪಿಎಸ್ಐ ಉದ್ದಪ್ಪ ಕಟ್ಟಿಕಾರ್ ಎಂಬಾತ ಪತ್ನಿಗೆ ಮನಬಂದಂತೆ ಥಳಿಸಿದ್ದಾನೆ. ಪ್ರತಿಮಾ ಉದ್ದಪ್ಪ ಕಟ್ಟಿಕಾರ್ ಹಲ್ಲೆಗೊಳಗಾದವರು. ಪತಿ ಉದ್ದಪ್ಪ ಬೇರೊಬ್ಬ ಯುವತಿಯ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಪತ್ನಿ ಪ್ರತಿಮಾ ಬೇರೊಬ್ಬ ಯುವತಿಯ ಜತೆಗೆ ಅಕ್ರಮ ಸಂಬಂಧ ಇರುವುದನ್ನು ಪ್ರಶ್ನಿಸಿದ್ದಾರೆ.
ಮಕ್ಕಳ ಆಧಾರ ಕಾರ್ಡ್, ರೇಷನ್ ಕಾರ್ಡ್ ಕೇಳಿದ್ದಕ್ಕೆ ಮಕ್ಕಳೆದರೇ ಉದ್ದಪ್ಪ, ಪ್ರತಿಮಾ ಮೇಲೆ ಹಲ್ಲೆ ನಡೆಸಿದ್ದಾನೆ. ಈ ದಂಪತಿ ರಾಮತೀರ್ಥ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪತ್ನಿ ಪ್ರತಿಮಾ ಕಣ್ಣು, ಕುತ್ತಿಗೆ ಭಾಗಕ್ಕೆ ತೀವ್ರವಾಗಿ ಹಲ್ಲೆ ಆಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪತಿಯಿಂದ ನನಗೆ ಮುಕ್ತಿ ಕೊಡಿಸಿ ಎಂದು ಕೈ ಮುಗಿದು ಪತ್ನಿ ಪ್ರತಿಮಾ ಗೋಳಾಡುತ್ತಿದ್ದಾರೆ. ಈ ಹಿಂದೆಯೂ ಪತ್ನಿ ಮೇಲೆ ಹಲ್ಲೆ ಮಾಡಿದ್ದಕ್ಕೆ ಪಿಎಸ್ಐ ವಿರುದ್ಧ ಅಂಕೋಲಾದಲ್ಲಿ ಕೇಸ್ ದಾಖಲಾಗಿತ್ತು. ಈಗ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಪ್ರತಿಮಾ ಬೆಳಗಾವಿಗೆ ಬಂದಿದ್ದರು. ಅಂಕೋಲಾಕ್ಕೆ ಹೋಗಲು ನನಗೆ ಅನುಮತಿ ಕೊಡಿಸಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Theft Case : ರಾತ್ರಿಯಾದರೆ ಮನೆ ಬಾಗಿಲು ತಟ್ಟಿ ಕಳ್ಳತನಕ್ಕೆ ಇಳಿಯುತ್ತಿದ್ದ ಕಳ್ಳನನ್ನು ಹಿಡಿದು ಕಟ್ಟಿ ಹಾಕಿದ ಜನ್ರು
ಹೆಲ್ಮೆಟ್ ಇಲ್ಲದೇ ಚಲಿಸುತ್ತಿದ್ದ ಬೈಕ್ ಸವಾರನ ಕಾಲರ್ ಪಟ್ಟಿ ಹಿಡಿದು ಎಳೆದ ಟ್ರಾಫಿಕ್ ಪೊಲೀಸ್!
ಚಿಕ್ಕಮಗಳೂರು: ಟ್ರಾಫಿಕ್ ಪೊಲೀಸ್‌ವೊಬ್ಬರು ಚಲಿಸುತ್ತಿದ್ದ ಬೈಕ್ ಸವಾರನ ಕಾಲರ್ ಪಟ್ಟಿ ಹಿಡಿದು (Assault Case) ಎಳೆದಿದ್ದಾರೆ. ಪರಿಣಾಮ ಸವಾರ ಬೈಕ್‌ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಚಿಕ್ಕಮಗಳೂರು ನಗರದ ಎಐಟಿ ವೃತ್ತದಲ್ಲಿ ಘಟನೆ ನಡೆದಿದೆ.
ಹೆಲ್ಮೆಟ್ ಹಾಕದಿದ್ದಕ್ಕೆ ಫೈನ್ ಹಾಕುವ ಬದಲು ಟ್ರಾಫಿಕ್ ಪೊಲೀಸ್ ದೌರ್ಜನ್ಯ ಮೆರೆದಿದ್ದಾರೆ ಅಂತ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಟ್ರಾಫಿಕ್ ಸಬ್ ಇನ್‌ಸ್ಪೆಕ್ಟರ್ ಧನಂಜಯ್ ವರ್ತನೆಗೆ ಕಿಡಿಕಾರಿದ್ದಾರೆ. ಘಟನೆಯ ದೃಶ್ಯ ರಸ್ತೆ ಬದಿಯ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾಲರ್ ಪಟ್ಟಿ ಹಿಡಿದು ಎಳೆದಾಕ್ಷಣ ಬೈಕ್ ಸವಾರ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಯುವಕನ ಕೈ-ಕಾಲುಗಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಟ್ರಾಫಿಕ್ ಪಿಎಸ್ಐ ಧನಂಜಯ್ ವರ್ತನೆಗೆ ಸ್ಥಳದಲ್ಲೇ ಹಲವರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಆಟೋ ಚಾಲಕರ ಹೊಡಿಬಡಿ
ಉಡುಪಿ ನಗರದಲ್ಲಿ ಬಾಡಿಗೆ ಮಾಡುವ ವಿಚಾರ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರತಾಪ್ ಚಂದ್ರ ಎಂಬಾತ ಆಟೋ ಚಾಲಕರಿಂದಲೇ ಹಲ್ಲೆಗೊಳಗಾದವರು. ಉಡುಪಿ ನಗರದ ಸಿಟಿ ಬಸ್ ಸ್ಟಾಂಡ್ ಬಳಿ ಘಟನೆ ನಡೆದಿದೆ.
ನಗರ ವ್ಯಾಪ್ತಿಯಲ್ಲಿ ರಿಕ್ಷಾ ಬಾಡಿಗೆ ಮಾಡುತ್ತಿರುವಾಗ ಒಂದು ತಂಡದಿಂದ ಹಲ್ಲೆ ನಡೆದಿದೆ. ಬಾಡಿಗೆ ಮಾಡಲು ನನಗೆ ಅನುಮತಿ ಇದೆ ಎಂದಾಗ ಕೋಪಗೊಂಡ ನಗರದ ರಿಕ್ಷಾ ಚಾಲಕರು ಪ್ರತಾಪ್ ಚಂದ್ರ ಅವರಿಗೆ ಹಲ್ಲೆ ನಡೆಸಿದ್ದಾರೆ. ಉಡುಪಿ ನಗರದ ವ್ಯಾಪ್ತಿಯಲ್ಲಿರುವ ರಿಕ್ಷಾ ಸ್ಟ್ಯಾಂಡ್‌ಗಳಲ್ಲಿ ಎಲ್ಲಿಯೂ ರಿಕ್ಷಾ ನಿಲ್ಲಿಸದಂತೆ ತಾಕೀತು ಮಾಡಿದ್ದಾರೆ. ಸದ್ಯ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಆಟೋ ಚಾಲಕ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ