Site icon Vistara News

Baby Death : ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಯ್ತಾ 3 ವರ್ಷದ ಕಂದಮ್ಮ?

murder case in Belgavi

ಬೆಳಗಾವಿ: ಮಲತಾಯಿಯ ಕ್ರೌರ್ಯಕ್ಕೆ ಮೂರು ವರ್ಷದ ಕಂದಮ್ಮ (Baby Death) ಬಲಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಲತಾಯಿಯೇ 3 ವರ್ಷದ ಮಗುವನ್ನು ಕೊಂದಿದ್ದಾಳೆ (Murder case) ಎನ್ನಲಾಗಿದೆ. ಸಮೃದ್ಧಿ(3) ಮೃತ ದುರ್ದೈವಿ. ಮಲತಾಯಿ ಸಪ್ನಾ ರಾಯಣ್ಣ ನಾವಿ ಎಂಬಾಕೆ ಕೊಲೆ ಆರೋಪ ಎದುರಿಸುತ್ತಿರುವ ಮಲತಾಯಿ ಆಗಿದ್ದಾಳೆ. ಬೆಳಗಾವಿಯ ಕಂಗ್ರಾಳಿ ಕೆ ಹೆಚ್ ಗ್ರಾಮದಲ್ಲಿ ಘಟನೆ ನಡೆದಿದೆ.

ಮಗುವಿನ ಮೇಲೆ ಕ್ರೌರ್ಯ ಮೆರೆದು ಕೊಲೆ ಮಾಡಿದ್ದಾಗಿ ಸಮೃದ್ಧಿಯ ಅಜ್ಜಿ ಹಾಗೂ ಚಿಕ್ಕಪ್ಪ ಆರೋಪಿಸಿದ್ದಾರೆ. ಸಮೃದ್ಧಿ ತಂದೆ ರಾಯಣ್ಣ ಸಿಆರ್‌ಪಿಎಫ್ ಯೋಧನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮೊದಲ ಪತ್ನಿ ನಿಧನದ ನಂತರ ಎರಡನೇ ಮದುವೆಯಾಗಿದ್ದರು. ಇದೀಗ ರಾಯಣ್ಣನ 2ನೇ ಪತ್ನಿ ಸಪ್ನಾ ಎಂಬಾಕೆ ಸಮೃದ್ದಿಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ರಾಯಣ್ಣ ಹಾಗೂ ಮೊದಲ ಪತ್ನಿ ಭಾರತಿ ನಾವಿ, ಆಕೆಯ ಮಗಳು ಸಮೃದ್ದಿ

ಮೊದಲ ಪತ್ನಿ ಕೊಲೆ ಆರೋಪ ಎದುರಿಸುತ್ತಿರುವ ಕುಟುಂಬ

ಈಗಾಗಲೇ ಮೊದಲ ಪತ್ನಿ ಭಾರತಿ ನಾವಿ ಕೊಲೆ ಆರೋಪವನ್ನು ರಾಯಣ್ಣ ಹಾಗೂ ಆತನ ಕುಟುಂಬಸ್ಥರು ಎದುರಿಸುತ್ತಿದ್ದಾರೆ. ಪತಿ ರಾಯಣ್ಣ ಹಾಗೂ ತಾಯಿ ಶೋಭಾ ಹಾಗೂ ತಂಗಿ ರೂಪಾ ವಿರುದ್ಧ 2021ರಲ್ಲಿ ಮೃತ ಭಾರತಿ ನಾವಿ ಕುಟುಂಬಸ್ಥರು ನಾಗಪುರದ ಕಾರದಾ ಠಾಣೆಯಲ್ಲಿ ದಾಖಲಿಸಿದ್ದಾರೆ. ಆ ಪ್ರಕರಣದಲ್ಲೂ ರಾಯಣ್ಣ ನಾವಿ ಕುಟುಂಬ ಆರೋಪಿಯಾಗಿದ್ದರು. ಅಂದು ತಾಯಿ ಕೊಂದರು, ಇಂದು ಆಕೆಯ ಮಗಳು ಸಮೃದ್ಧಿಯನ್ನೂ ಕೊಂದಿದ್ದಾರೆ ಎಂದು ಮೊದಲ ಪತ್ನಿ ಕುಟುಂಬಸ್ಥರು ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಗುವಿಗೆ ಅನಾರೋಗ್ಯ ಸಮಸ್ಯೆ

ಬೆಳಗಾವಿಯಲ್ಲಿ ಮೂರು ವರ್ಷದ ‌ಮಗು ಕೊಲೆ ಆರೋಪ‌ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಪ್ನ, ಮದುವೆಯಾದಾಗಿನಿಂದಲೂ ಮಗುವು ನನ್ನ ಬಳಿಯೇ ಇದೆ. ಆಗಿನಿಂದಲೂ ಮಗುವಿಗೆ ಅನಾರೋಗ್ಯ ಸಮಸ್ಯೆ ಇತ್ತು, ನಾನು ಮಗುವನ್ನು ಜೋಪಾನ ಮಾಡಿಕೊಂಡು ಬಂದಿದ್ದೇನೆ. ಜತೆಗೆ ಅಗತ್ಯ ಚಿಕಿತ್ಸೆಯನ್ನು ಕೊಡಿಸಿದ್ದೆ.

ಮಗುವಿನ ಅಜ್ಜ ಅಜ್ಜಿ ಮಾಡುತ್ತಿರುವ ಆರೋಪ ಸಂಪೂರ್ಣ ಸುಳ್ಳು. ನಾನು ರಾಯಣ್ಣರಿಗೆ ಎರಡನೇ ಪತ್ನಿ ಎನ್ನುವ ಕಾರಣಕ್ಕೆ ನನ್ನ ಮೇಲೆ ಆರೋಪ‌ ಮಾಡುತ್ತಿದ್ದಾರೆ. ಸಮೃದ್ದಿಯನ್ನು ನನ್ನ ಮಗು ಎಂಬಂತೆ ನೋಡಿಕೊಂಡಿದ್ದಾನೆ ಎಂದಿದ್ದಾರೆ.

ಇದನ್ನೂ ಓದಿ: Drowned In water : ಕೆರೆಯಲ್ಲಿ ಈಜಲು ಹೋದ ಬಾಲಕರು ನೀರುಪಾಲು

ಮೇಲಿಂದ ಬಿದ್ದು ಬದುಕುಳಿದಿದ್ದ ಮಗುವಿನ ತಾಯಿ ಸೂಸೈಡ್‌; ಸೋಶಿಯಲ್‌ ಮೀಡಿಯಾ ಕಮೆಂಟ್‌ನಿಂದಲೇ ಖಿನ್ನತೆಗೊಳಗಾಗಿದ್ಳಾ?

ಕೊಯಂಬತ್ತೂರ್‌: ಕಳೆದ ತಿಂಗಳು ಅಪಾರ್ಟ್‌ಮೆಂಟ್‌(Apartment)ನ ಕಿಟಕಿಯಿಂದ ವಿಂಡೋ ಪೋರ್ಚ್‌(Window Porch) ಮೇಲೆ ಬಿದ್ದು, ಪವಾಡ ಸದೃಶ್ಯವಾಗಿ ಬದುಕಿ ಬಂದ ಏಳು ತಿಂಗಳ ಮಗುವಿನ(Toddler) ತಾಯಿ ಇದೀಗ ಆತಹತ್ಯೆಗೆ ಶರಣಾಗಿದ್ದಾಳೆ(Viral News). ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ತಾಯಿಯ ಮಡಿಲಿನಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಿಟಕಿಯಿಂದ ಪ್ಲಾಸ್ಟಿಕ್‌ ಶೀಟ್‌ ಕವರ್‌ ಮಾಡಲಾಗಿದ್ದ ವಿಂಡೋ ಪೋರ್ಚ್‌ ಮೇಲೆ ಬಿದ್ದಿತ್ತು. ಮಗು ಅದೃಷ್ಟವಶಾತ್‌ ಅಲ್ಲೇ ನೇತಾಡಿಕೊಂಡು ಸ್ಥಳೀಯರ ಸಹಾಯದಿಂದ ಬದುಕುಳಿದಿತ್ತು.

ಈ ಘಟನೆ ಬಳಿಕ ಮಗುವಿನ ತಾಯಿ ರಮ್ಯಾ ತೀರ ಖಿನ್ನತೆಗೊಳಗಾಗಿದ್ದರು. ತನ್ನ ಅಜಾಗುರೂಕತೆಯಿಂದ ದುರಂತ ಸಂಭವಿಸಿದೆ ಎಂಬುದನ್ನು ಪದೇ ಪದೇ ಹೇಳುತ್ತಲೇ ಇದ್ದರು. ಇನ್ನು ನೆರೆಹೊರೆಯವರು, ನೆಟ್ಟಿಗರು ಈ ಘಟನೆ ಬಗ್ಗೆ ತಿಳಿದವರು ಎಲ್ಲರೂ ರಮ್ಯಾಳ ಅಜಾಗುರೂಕತೆಯಿಂದಲೇ ಈ ಘಟನೆ ನಡೆದಿದೆ ಎಂದು ದೂರುತ್ತಿದ್ದರು. ಇದರಿಂದ ಬೇಸರಗೊಂಡಿದ್ದ ರಮ್ಯಾ ಖಿನ್ನತೆಗೊಳಗಾಗಿದ್ದರು. ಇದನ್ನು ಗಮನಿಸಿದ ಆಕೆಯ ಪತಿ ವೆಂಕಟೇಶ್‌ ಕೊಯಂಬತ್ತೂರ್‌ನಲ್ಲಿರುವ ಆಕೆಯ ತವರು ಮನೆಗೆ ಕರೆದುಕೊಂಡು ಬಂದಿದ್ದರು.

ಭಾನುವಾರ ರಮ್ಯಾಳನ್ನು ಒಬ್ಬಳೇ ಮನೆಯಲ್ಲಿ ಬಿಟ್ಟು ಎಲ್ಲರೂ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ವಾಪಸ್‌ ಮನೆಗೆ ಬಂದಾಗ ರಮ್ಯಾ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡು ಮನೆಯವರು ಗಾಬರಿಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ. ಇನ್ನು ಆಕೆಯ ಸಾವಿಗೆ ಕಾರಣ ಏನೆಂಬುದು ಸರಿಯಾಗಿ ತಿಳಿದುಬಂದಿಲ್ಲ. ಆಕೆ ಏನಾದರೂ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಏ.28ರಂದು ತಾಯಿಯ ಮಡಿಲಿನಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಿಟಕಿಯಿಂದ ಪ್ಲಾಸ್ಟಿಕ್‌ ಶೀಟ್‌ ಕವರ್‌ ಮಾಡಲಾಗಿದ್ದ ವಿಂಡೋ ಪೋರ್ಚ್‌ ಮೇಲೆ ಬಿದ್ದಿತ್ತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ತಕ್ಷಣ ಮಗುವಿನ ರಕ್ಷಣೆಗೆ ಧಾವಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ವಿಂಡೋ ಪೋರ್ಚ್‌ ಮೇಲೆ ಬಿದ್ದಿ ಮಗುವಿನ ರಕ್ಷಣೆಗೆ ದೌಡಾಯಿಸಿದ್ದ ಅಪಾರ್ಟ್‌ಮೆಂಟ್‌ ನಿವಾಸಿಗಳು ಮತ್ತೊಂದು ಕಿಟಕಿಯಿಂದ ಹೊರಬಂದು ಮಗುವನ್ನು ರಕ್ಷಿಸಿಲು ಹರಸಾಹನ ಪಟ್ಟರು. ನಾಲ್ಕೈದು ಜನ ಕಿಟಕಿಯ ಹೊರ ಭಾಗದಲ್ಲಿರುವ ಸಣ್ಣ ಜಾಗದಲ್ಲಿ ನಿಂತು ಮಗುವಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ರಕ್ಷಿಸಿದ್ದಾರೆ. ಇನ್ನು ಕೆಳಗೆ ಅನೇಕ ಜನ ದೊಡ್ಡ ಬಟ್ಟೆಯೊಂದು ಹಿಡಿದು ಮಗುವಿನ ರಕ್ಷಣೆಗೆ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರಶಂಸೆ ವ್ಯಕ್ತಪಡಿಸಿರುವ ನೆಟ್ಟಿಗರು, ಅಚಾನಕ್ಕಾಗಿ ನಾಲ್ಕನೇ ಮಹಡಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದಿದ್ದ 7 ತಿಂಗಳಿನ ಮಗುವನ್ನು ಬಹಳ ಜಾಣ್ಮೆಯಿಂದ ರಕ್ಷಿಸಿದ್ದಾರೆ. ಅವರ ಕಾರ್ಯಕ್ಕೆ ಸಲಾಂ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version