Site icon Vistara News

ಲಕ್ಷ್ಮೀ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಶೆಟ್ಟರ್‌ಗೆ 50 ಸಾವಿರ ಮತಗಳ ಲೀಡ್; ಕ್ಷೇತ್ರವಾರು ಪಟ್ಟಿ ಇಲ್ಲಿದೆ!

Belagavi Election Result 2024

Belagavi Election Result: BJP's Jagadish Shettar Got Lead In Lakshmi Hebbalkar's Constituency

ಬೆಳಗಾವಿ: ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ (Lok Sabha Election Result 2024) ಬಿಜೆಪಿಯ ಜಗದೀಶ್‌ ಶೆಟ್ಟರ್‌ (Jagadish Shettar) ಅವರು ಗೆಲುವು ಸಾಧಿಸಿದ್ದಾರೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರ ಪುತ್ರ ಮೃಣಾಲ್‌ ಹೆಬ್ಬಾಳ್ಕರ್ (Mrinal Hebbalkar) ಅವರು ನಿರೀಕ್ಷೆ ಹುಟ್ಟಿಸಿದ್ದರೂ ಸೋಲನುಭವಿಸಿದ್ದಾರೆ. ಮೃಣಾಳ್‌ ಹೆಬ್ಬಾಳ್ಕರ್‌ ವಿರುದ್ಧ ಜಗದೀಶ್‌ ಶೆಟ್ಟರ್‌ ಅವರು 1,78,437 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು, ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ವಿಧಾನಸಭೆ ಕ್ಷೇತ್ರವಾದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಯೇ ಜಗದೀಶ್‌ ಶೆಟ್ಟರ್‌ ಅವರಿಗೆ 50,529 ಮತಗಳ ಲೀಡ್‌ ಸಿಕ್ಕಿರುವುದು ಸಚಿವೆಗೆ ಆದ ಹಿನ್ನಡೆ ಎಂದೇ ಹೇಳಲಾಗುತ್ತಿದೆ.

Lok Sabha Election 2024 Laxmi Hebbalkar launches election campaign for Mrinal Hebbalkar

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಜಗದೀಶ್‌ ಶೆಟ್ಟರ್‌ ಅವರಿಗೆ 7,62,029 ಮತಗಳು ಲಭಿಸಿದರೆ, ಮೃಣಾಲ್‌ ಹೆಬ್ಬಾಳ್ಕರ್‌ ಅವರಿಗೆ 5,83,592 ಮತಗಳು ಲಭಿಸಿವೆ. ಇನ್ನು, ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜಗದೀಶ್‌ ಶೆಟ್ಟರ್‌ ಅವರಿಗೆ 1,24,970 ಮತಗಳು ಲಭಿಸಿದರೆ, ಮೃಣಾಲ್‌ ಹೆಬ್ಬಾಳ್ಕರ್‌ ಅವರಿಗೆ 74,441 ಮತಗಳು ಲಭಿಸಿವೆ. ಸಚಿವೆಯ ಕ್ಷೇತ್ರದಲ್ಲಿಯೇ ಬಿಜೆಪಿಯ ಶೆಟ್ಟರ್‌ ಅವರಿಗೆ 50,529 ಮತಗಳ ಲೀಡ್‌ ಸಿಕ್ಕಿದೆ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಪುತ್ರನನ್ನು ಕಣಕ್ಕಿಸಿದ ಕಾರಣ ಬೆಳಗಾವಿ ಲೋಕಸಭೆ ಕ್ಷೇತ್ರವನ್ನು ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು.

ಬೆಳಗಾವಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ಲೀಡ್?

ಅರಭಾವಿ ಕ್ಷೇತ್ರ
ಜಗದೀಶ್ ಶೆಟ್ಟರ್: 1,01,114 ಮತಗಳು
ಮೃಣಾಲ್ ಹೆಬ್ಬಾಳ್ಕರ್: 79,639 ಮತಗಳು
ಶೆಟ್ಟರ್ 21,475 ಮತಗಳ ಮುನ್ನಡೆ

ಗೋಕಾಕ್ ಕ್ಷೇತ್ರ
ಜಗದೀಶ್ ಶೆಟ್ಟರ್: 1,02519
ಮೃಣಾಲ್ ಹೆಬ್ಬಾಳ್ಕರ್: 78,622
ಶೆಟ್ಟರ್ 23,897 ಮತಗಳ ಮುನ್ನಡೆ

ಬೆಳಗಾವಿ ಉತ್ತರ
ಜಗದೀಶ್ ಶೆಟ್ಟರ್: 83,938
ಮೃಣಾಲ್ ಹೆಬ್ಬಾಳ್ಕರ್: 81,537
ಶೆಟ್ಟರ್ 2‌,401 ಮತಗಳ ಮುನ್ನಡೆ

ಬೆಳಗಾವಿ ದಕ್ಷಿಣ
ಜಗದೀಶ್ ಶೆಟ್ಟರ್: 1,19,249
ಮೃಣಾಲ್ ಹೆಬ್ಬಾಳ್ಕರ್: 81,537
ಶೆಟ್ಟರ್ 73,220 ಮತಗಳ ಮುನ್ನಡೆ

ಬೆಳಗಾವಿ ಗ್ರಾಮೀಣ
ಜಗದೀಶ್ ಶೆಟ್ಟರ್: 1,24970
ಮೃಣಾಲ್ ಹೆಬ್ಬಾಳ್ಕರ್: 74,441
ಶೆಟ್ಟರ್ 50,529 ಮತಗಳ ಮುನ್ನಡೆ

ಬೈಲಹೊಂಗಲ
ಜಗದೀಶ್ ಶೆಟ್ಟರ್: 82,015
ಮೃಣಾಲ್ ಹೆಬ್ಬಾಳ್ಕರ್: 60,618
ಶೆಟ್ಟರ್ 21,397 ಮತಗಳ ಮುನ್ನಡೆ

ಸವದತ್ತಿ
ಜಗದೀಶ್ ಶೆಟ್ಟರ್: 67,937
ಮೃಣಾಲ್ ಹೆಬ್ಬಾಳ್ಕರ್: 84,888
ಮೃಣಾಲ್ 16,951 ಮತಗಳ ಮುನ್ನಡೆ

ರಾಮದುರ್ಗ
ಜಗದೀಶ್ ಶೆಟ್ಟರ್: 74,729
ಮೃಣಾಲ್ ಹೆಬ್ಬಾಳ್ಕರ್: 75,123
ಮೃಣಾಲ್ 394 ಮತಗಳ ಮುನ್ನಡೆ

ಅಂಚೆ ಮತಗಳ ವಿವರ:
ಜಗದೀಶ ಶೆಟ್ಟರ್: 5,558
ಮೃಣಾಲ್ ಹೆಬ್ಬಾಳ್ಕರ್: 2,695
ಶೆಟ್ಟರ್ 2,863 ಮತಗಳ ಮುನ್ನಡೆ

ಪಿ.ಸಿ. ಮೋಹನ್‌ ಗೆದ್ದಿದ್ದೂ ಇದೇ ರೀತಿ

ಕರ್ನಾಟಕದ ಮತದಾರರ ಪಾಲಿಗೆ ಅತ್ಯಂತ ಕುತೂಹಲ ಮೂಡಿಸಿದ ಕ್ಷೇತ್ರವೆಂದರೆ ಬೆಂಗಳೂರು ಸೆಂಟ್ರಲ್​. ಇಲ್ಲಿ ಕೊನೇ ತನಕ ಕಾಂಗ್ರೆಸ್​ನ ಮನ್ಸೂರ್ ಅಲಿ ಖಾನ್​ ಗೆದ್ದಿದ್ದಾರೆ ಎಂದು ಅಂದುಕೊಂಡರೆ ಕೊನೇ ಕ್ಷಣದಲ್ಲಿ ಹಾಲಿ ಸಂಸದ ಪಿ. ಸಿ ಮೋಹನ್ ಅವರೇ ಗೆದ್ದು ಬೀಗಿದ್ದಾರೆ. ಈ ರೋಚಕ ಫಲಿತಾಂಶಕ್ಕೆ ಕಾರಣ ಮಂಜುಳಾ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ಕ್ಷೇತ್ರ. ಈ ಕ್ಷೇತ್ರವೊಂದೇ ಪಿ. ಸಿ ಮೋಹನ್ ಅವರಿಗೆ ದೊಡ್ಡ ಪ್ರಮಾಣದಲ್ಲಿ ಲೀಡ್​ ಕೊಡುವೆ ಮೂಲ ಅವರ ಮರ್ಯಾದೆ ಕಾಪಾಡಿದೆ.

ಮಹದೇವಪುರ ಕ್ಷೇತ್ರದಲ್ಲಿ ಎಣಿಕೆ ಆರಂಭಗೊಂಡಾಗ ಪಿ.ಸಿ ಮೋಹನ್ ಅವರಿಗೆ ಮುನ್ನಡೆ ಸಿಗಲು ಆರಂಭವಾಯಿತು. ಈ ವೇಳೆ ಎಣಿಕೆ ಕೇಂದ್ರನ್ನು ತೊರೆದಿದ್ದ ಬಿಜೆಪಿ ಕಾರ್ಯಕರ್ತರು ಮತ್ತೆ ಅಲ್ಲಿಗೆ ಬರಲು ಆರಂಭಿಸಿದರು. ಈ ಕ್ಷೇತ್ರವೊಂದೇ ಮೋಹನ್ ಅವರಿಗೆ 1,18,046 ಮತದ ಮುನ್ನಡೆ ತಂದುಕೊಟ್ಟಿತು. 32,707 ಮತಗಳ ಅಂತರದಿಂದ ಅವರು ಗೆದ್ದೇ ಬಿಟ್ಟರು.

ಇದನ್ನೂ ಓದಿ: J Shantha: ಅಣ್ಣ-ತಂಗಿಗೆ ಕಹಿ; ಕರ್ನಾಟಕದಲ್ಲಿ ಶ್ರೀರಾಮುಲು, ಆಂಧ್ರದಲ್ಲಿ ಜೆ. ಶಾಂತಾಗೆ ಸೋಲು!

Exit mobile version