ಬೆಳಗಾವಿ: ಚಳಿಗಾಲದ ಅಧಿವೇಶನವನ್ನು ಒಂದು ದಿನ ಮೊದಲೇ ಮೊಟಕುಗೊಳಿಸುತ್ತಿರುವುದಕ್ಕೆ ಪ್ರತಿಪಕ್ಷ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಈಗ ಸದನ ನಡೆಯುತ್ತಿದೆ ಆಮೇಲೆ ಬನ್ನಿ ಅಂತ ಅಮಿತ್ ಅವರಿಗೆ ಹೇಳಲು ಬಿಜೆಪಿಯವರಿಗೆ ದಮ್ ಇಲ್ಲ ಎಂದಿದ್ದಾರೆ.
ಡಿಸೆಂಬರ್ 17 ಕ್ಕೆ ಆರಂಭವಾಗಿದ್ದ ಅಧಿಚವೇಶನ ಡಿಸೆಂಬರ್ 30ರಂದಯ ಮುಕ್ತಾಯಗೊಳ್ಳಬೇಕಿತ್ತು. ಆದರೆ ಅಂದು ಕೇಂದ್ರ ಗೃಹಸಚಿವ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ವಿಜಯಪುರದಲ್ಲಿ ಕಾಂಗ್ರೆಸ್ ಸಮಾವೇಶವೂ ಇದೆ. ಹಾಗಾಗಿ ಅಧಿವೇಶನವನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದ್ದವು.
ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಉತ್ತಕರ್ನಾಟಕ ಭಾಗದ ಚರ್ಚೆಗೆ ಅವಕಾಶವಿಲ್ಲ. ಕಬ್ಬು ಬೆಳೆಗಾರರು, ಭತ್ತ ಬೆಳೆಗಾರರ ಬಗ್ಗೆ ಚರ್ಚೆಯಾಗಬೇಕು. ಸ್ಪೀಕರ್ ಎರಡು ದಿನ ಚರ್ಚೆ ಮಾಡೋಣ ಎಂದಿದ್ದರು. ಅವರು ಚರ್ಚೆಗೆ ಬರಲೇ ಇಲ್ಲ. ನಾವು ಅಖಂಡ ಕರ್ನಾಟಕದ ಚರ್ಚೆ ಮಾತನಾಡಿದ್ದೆವು. ಅದೆಂತದ್ದೋ ಪಾದಯಾತ್ರೆ ಮಾಡಿದರು. ಯಾವ ಭಾಗದ ರೈತರೇ ಆಗಲಿ ರೈತರೆ. ಅದಕ್ಕೋಸ್ಕರ ನಿನ್ನೆ ಅದರ ಚರ್ಚೆ ಮಾಡಿದ್ದು. ಹೆಚ್ಚಿನ ಹಣ ಬಿಡುಗಡೆ ಮಾಡಲಿ. ಇವರು ನೊಟಿಪಿಕೇಶನ್ ಮಾಡಿಸೋಕೆ ಏನಾಗಿತ್ತು? ಬರಿಯ ಭಾಷಣ ಮಾಡಿದರೆ ಸಾಕೇ? ಅದಕ್ಕಾಗಿಯೇ ನಾವು ವಿಜಯಪುರದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಲ್ಲಿ ಏನೇನು ಫೇಲಾಗಿದೆ ಎಲ್ಲವನ್ನೂ ಹೇಳುತ್ತೇನೆ. ಒಂದೂವರೆ ಲಕ್ಷ ಕೋಟಿ ರೂ. ಹಣ ಕೊಡಬೇಕಿತ್ತು.
ಅಮಿತ್ ಶಾ ಬರುತ್ತಾರೆ, ಹೋಗುತ್ತಾರೆ. ಅವರು ಬಂದರೆ ಸದನ ಮಾಡೋಕೇನು? ಸದನ ನಡೆಯುತ್ತಿದೆ, ಈಗ ಬರಬೇಡಿ ಎಂದು ಹೇಳಬೇಕಿತ್ತು. ಅದನ್ನು ಹೇಳುವ ದಮ್ ಅವರಿಗೆ ಇಲ್ಲ ಎಂದರು. ನೀವೂ ವಿಜಯಪುರದಲ್ಲಿ ಸಮಾವೇಶ ನಡೆಸುತ್ತಿದ್ದೀರಲ್ಲ ಎಂಬ ಪ್ರಶ್ನೆಗೆ, ನಾನು ಸಮಾವೇಶಕ್ಕೆ ಹೋಗುತ್ತೇನೋ ಬಿಡುತ್ತೇನೊ. ಸ್ಪೀಕರ್ ಇರುತ್ತಾರೆ ಅಲ್ಲವ? ಅವರೇನೂ ಸಮಾವೇಶಕ್ಕೆ ಹೋಗುವುದಿಲ್ಲವಲ್ಲ? ಇವರು ಅಮಿತ್ ಶಾ ಬರ್ತಾನೆ ಎಂದು ಸದನ ನಿಲ್ಲಿಸಿದರೆ ಹೇಗೆ? ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ | Amit Shah | ಹಳೆ ಮೈಸೂರಿನಲ್ಲಿ ಕಹಳೆ ಮೊಳಗಿಸಿದ ಬಿಜೆಪಿ; HDK ಟೀಕೆ ಮೂಲಕ ಅಮಿತ್ ಶಾಗೆ ಸ್ವಾಗತ ಕೋರಿದ ಪಕ್ಷ
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಸದನ ಮೊಟಕು ಮಾಡುವುದು ಬೇಡ ಎಂದಿದ್ದೆವು. ಉತ್ತರ ಕರ್ನಾಟಕದ ಸಮಸ್ಯೆಗಳಿವೆ. ಇದರ ಬಗ್ಗೆ ಚರ್ಚೆಯಾಗಬೇಕು ದು ಒತ್ತಾಯಿಸಿದ್ದೆವು. ಆದರೆ ಮೊನ್ನೆ ಸಿಎಂ ದೆಹಲಿಗೆ ಹೋಗಿದ್ದರು. ಈಗ ಸದನ ಮೊಟಕುಗೊಳಿಸುತ್ತಿದ್ದಾರೆ ಎಂದರು.
ಮಾಧ್ಯಮಗಳನ್ನು ಟೀಕೆ ಮಾಡಿದ ಖರ್ಗೆ, ಕಾಂಗ್ರೆಸ್ ನವರು ಧ್ವನಿ ಎತ್ತಲಿಲ್ಲ ಎನ್ನುತ್ತೀರ. ಅಜೆಂಡಾದಲ್ಲಿ ಮೊದಲ ಪ್ರಶ್ನೆಯೇ ರೈತರ ವಿಚಾರ ಇತ್ತು. ರೈತರ ಸಮಸ್ಯೆ, ಪಶುರೋಗಗಳ ಬಗ್ಗೆ ಇತ್ತು. ಅದರ ಮಧ್ಯೆ ಸ್ಪೀಕರ್ ಸಪ್ಲಿಮೆಂಟರಿ ವಿಷಯ ತಂದರು. ರೈತರ ಸಮಸ್ಯೆ ವಿಚಾರ ಮುಂದಕ್ಕೆ ಹಾಕಿದರು, ಕುಕ್ಕರ್ ಬ್ಲಾಸ್ಟ್ ವಿಚಾರ ಮೊದಲಿಗೆ ತಂದರು. ಕುಕ್ಕರ್ ಬ್ಲಾಸ್ಟ್ ವಿಚಾರ ಚರ್ಚೆಗೆ ಬೇಕಿತ್ತಾ? ಸದನ ನಡೆಸುವ ಪ್ರಾಥಮಿಕ ಜವಾಬ್ದಾರಿ ಯಾರದ್ದು? ಸ್ಪೀಕರ್ ಅವರು ಅವಕಾಶ ಕೊಡಬೇಕು. ರೈತರು, ಜನರ ಬಗ್ಗೆ ಚರ್ಚೆಗೆ ಅವಕಾಶ ಇಲ್ಲ. ಚಿಲುಮೆ ಸಂಸ್ಥೆ ಹಗರಣ, ಮಹದಾಯಿ ವಿಚಾರ ಚರ್ಚೆ ಆಗಲಿಲ್ಲ. ಪಿಎಸ್‌ಐ ಹಗರಣ ಬಗ್ಗೆ ಚರ್ಚೆಯಾಗಲಿಲ್ಲ ಎಂದರು.
ಬಿಜೆಪಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಮಾತನಾಡಿ, ಬೆಳಗಾವಿ ಅಧಿವೇಶನ ಆರಂಭವಾದಾಗ ಮೊದಲ ದಿನವೇ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಚರ್ಚೆ ಆಗಬೇಕು ಎಂದು ಹೇಳಿದೆ . ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನೀಲಿನಕ್ಷೆ ಕಂಡುಕೊಳ್ಳಬೇಕು ಎಂದು ಒತ್ತಾಯ ಮಾಡಿದೆ . ನಾನು ಇದನ್ನ ವಿಪಕ್ಷ ನಾಯಕರ ಮೇಲೂ ಒತ್ತಾಯ ಮಾಡಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು ಎಂದು, ಉತ್ತರ ಕರ್ನಾಟಕ ಭಾಗದ ಶಾಸಕರೂ ಒತ್ತಾಯ ಮಾಡಲಿಲ್ಲ.
ಒಂದು ದಿನ ಅಧಿವೇಶನ ಮೊಟಕು ಆಗಿದೆ. ಅಮಿತ್ ಶಾ ಕಾರಣಕ್ಕಾಗಿ ಅಲ್ಲ. ವಿಜಯಪುರದಲ್ಲಿ ಕಾಂಗ್ರೆಸ್ ಸಮಾವೇಶವಿದೆ ಹಾಗೂ ಅಮಿತ್ ಶಾ ಕಾರ್ಯಕ್ರಮ ಇದೆ. ಹಾಗಾಗಿ ನಾಳಿನ ಸಮಯ ಇವತ್ತೇ ಚರ್ಚೆಗೆ ತೆಗೆದುಕೊಳ್ಳುತ್ತಾರೆ. ಗುರುವಾರವೇ ಹೆಚ್ಚು ಚರ್ಚೆ ಮಾಡುತ್ತಾರೆ ಎಂದರು.
ಇದನ್ನೂ ಓದಿ | ಬೆಳಗಾವಿ ಅಧಿವೇಶನ | ʼಮಹಾʼ ಉದ್ಧಟತನಕ್ಕೆ ಒಕ್ಕೊರಲ ಖಂಡನೆ; ಒಂದಿಂಚು ಭೂಮಿಯನ್ನೂ ಬಿಡೆವು ಎಂದ ಕರ್ನಾಟಕ