Site icon Vistara News

ಬೆಳಗಾವಿ ಅಧಿವೇಶನ | ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಳಿಸಲು ನಿರ್ಧಾರ: ಚರ್ಚೆಯಾಗಿಲ್ಲ ಉತ್ತರದ ಸಮಸ್ಯೆ !

belagavi-session-to-be-adjourned-one-day-before

ಬೆಳಗಾವಿ: ವಿಧಾನ ಮಂಡಲ ಕಾರ್ಯಕಲಾಪವನ್ನು, ನಿಗದಿಗಿಂತ ಒಂದು ದಿನ ಮೊದಲೇ ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ.

ವಿಧಾನಪರಿಷತ್ತಿನ ಮೀಟಿಂಗ್ ಹಾಲ್‌ನಲ್ಲಿ ಸಭಾಪತಿ ಹೊರಟ್ಟಿ, ಉಪಸಭಾಪತಿ ಎಂ.ಕೆ. ಪ್ರಾಣೇಶ್, ಸಿಎಂ ಬೊಮ್ಮಾಯಿ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಜೆಡಿಎಸ್ ನಾಯಕ ಟಿ.ಎ. ಶರವಣ ಸೇರಿ ಅನೇಕರು ನಡೆಸಿದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಪ್ರಾರಂಭದ ನಿರ್ಧಾರದಂತೆ ಡಿಸೆಂಬರ್‌ 30ರ ಶುಕ್ರವಾರ ಅಧಿವೇಶನ ಮುಕ್ತಾಯಗೊಳ್ಳಬೇಕಿತ್ತು. ಆದರೆ ಡಿಸೆಂಬರ್‌ 30ರಂದು ಕೇಮದ್ರ ಗೃಹಸಚಿವ ಅಮಿತ್‌ ಶಾ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮಂಡ್ಯ, ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಅದೇ ದಿನ ಕಾಂಗ್ರೆಸ್‌ನಿಂದ ವಿಜಯಪುರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೃಷ್ಣಾ ನೀರಾವರಿ ಯೋಜನೆಗಳಲ್ಲಿ ಬಿಜೆಪಿ ನೀತಿ ಖಂಡಿಸಿ ಬೃಹತ್ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಪಕ್ಷಗಳ ಘಟಾನುಘಟಿ ನಾಯಕರು ಪಾಲ್ಗೊಳ್ಳಬೇಕಿರುವುದರಿಂದ ಒಂದು ದಿನದ ಮುಂಚೆಯೇ ಮೊಟಕು ಮಾಡಲು ನಿರ್ಧಾರ ಮಾಡಲಾಗಿದೆ.

ಸಂಸತ್‌ ಅಧಿವೇಶನವನ್ನು ಒಂದು ವಾರ ಮೊದಲೇ ಮೊಟಕುಗೊಳಿಸಲಾಗಿತ್ತು. ಆದರೆ ಉತ್ತರ ಕರ್ನಾಟಕದ ಅನೇಕ ವಿಚಾರಗಳು ಚರ್ಚೆ ಆಗಬೇಕಿರುವುದರಿಂದ ಸಂಪೂರ್ಣ ಅಧಿವೇಶನ ನಡೆಯುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು.

ಸೋಮವಾರ ನವದೆಹಲಿಯಲ್ಲಿ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ನಂತರ, ಅವರು ಕರ್ನಾಟಕಕ್ಕೆ ಬರುವ ವಿಚಾರ ತಿಳಿದುಬಂದಿತ್ತು. ಈವರೆಗೂ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಆಗಿಲ್ಲ. ಅತಿವೃಷ್ಠಿ, ಅನಾವೃಷ್ಠಿ, ಕಬ್ಬು ಬೆಳೆಗಾರರ ಸಮಸ್ಯೆ , ನೀರಾವರಿ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳನ್ನು ಉತ್ತರ ಕರ್ನಾಟಕ ಎದುರಿಸುತ್ತಿದ್ದು, ಚರ್ಚೆ ಆಗಬೇಕಿದೆ. ಪ್ರಮುಖವಾಗಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಚರ್ಚಿಸಲೆಂದೇ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತದೆ.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಕರ್ನಾಟಕದಲ್ಲೂ ಅಧಿವೇಶನ ಮೊಟಕು?; ಮೀಸಲಾತಿ ಕುರಿತೂ ನಿರ್ಧಾರ: ಸೋಮವಾರ ಮಹತ್ವದ ಸಂಪುಟ ಸಭೆ

Exit mobile version