ಬೆಳಗಾವಿ: ಅಗ್ನಿಪಥ್ (Agnipath) ವಿರೋಧಿಸಿ ಸೇನಾಕಾಂಕ್ಷಿಗಳ ‘ಬೆಳಗಾವಿ ಚಲೋ’ ವಿಚಾರವಾಗಿ ಯುವಕರನ್ನು ಬೆಳಗಾವಿ ಬರದಂತೆ ತಡೆಹಿಡಿದಿದ್ದಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕರು ಬೆಳಗಾವಿಗೆ ಬರದಂತೆ ತಡೆದಿರುವುದು ಸರಿಯಲ್ಲ ಎಂದವರು ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ. ಬೆಳಗಾವಿಯಲ್ಲಿ ಯಾರೂ ಹೋರಾಟ ನಡೆಸದಂತೆ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಬೇರೆ ಊರುಗಳಿಂದ ಬೆಳಗಾವಿಗೆ ಆಗಮಿಸುತ್ತಿದ್ದ ಯುವಕರನ್ನು ಬೆಳಗಾವಿ ಪೊಲೀಸರು ತಡೆಹಿಡಿದಿದ್ದಾರೆ. ಇದನ್ನು ಹೆಬ್ಬಾಳ್ಕರ್ ಖಂಡಿಸಿದ್ದಾರೆ.
“”ಎಷ್ಟು ದಿನ ಪೊಲೀಸರು ಹೀಗೆ ಜನರನ್ನು ತಡೆಯಲು ಸಾಧ್ಯ? ಶಿವಮೊಗ್ಗದಿಂದ ರ‍್ಯಾಪಿಡ್ ಫೋರ್ಸ್ ಕರೆಸಲಾಗಿದೆ. ಆದರೆ, ಅವರು ಎಷ್ಟು ದಿನದ ವರೆಗೆ ಇಲ್ಲಿರಲು ಸಾಧ್ಯ? ಅವರು ಮರಳಿದ ನಂತರವೂ ಅಗ್ನಿಪಥ್ ವಿಚಾರವಾಗಿ ನಮ್ಮ ಹೋರಾಟ ಮಾತ್ರ ನಿಲ್ಲುವುದಿಲ್ಲʼʼ ಎಂದು ಕಾಂಗ್ರೆಸ್ ಶಾಸಕಿ ಹೇಳಿದ್ದಾರೆ.
“”ಅಗ್ನಿಪಥ್ ಯೋಜನೆಯಲ್ಲಿ ನಿವೃತ್ತರಾದವರನ್ನು ಬಿಜೆಪಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಇಟ್ಟುಕೊಳ್ಳುವದಾಗಿ ಹೇಳುವ ಬಿಜೆಪಿ ಮುಖಂಡರ ಮನಸ್ಥಿತಿ ಯಾವ ಮಟ್ಟಕ್ಕಿದೆ ಎಂದು ತಿಳಿಯುತ್ತದೆ. ಅಮಿತ್ ಶಾ ಮಗ ಜಯ್ ಶಾ ಅಗ್ನಿಪಥ್ ಕೆಲಸಕ್ಕೆ ಹೋಗಲಿ. ನಿವೃತ್ತರಾದ ಎಷ್ಟೋ ಜನ ಸೈನಿಕರಿಗೆ ಈಗ ಉದ್ಯೋಗ ಸಿಗುತ್ತಿಲ್ಲ. ಇನ್ನು ಅಗ್ನಿಪಥ್ ಯೋಜನೆಯಲ್ಲಿ ಯಾವ ಜಾಬ್ ಸೆಕ್ಯೂರಿಟಿ ಇದೆʼʼ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Agnipath | ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೋರಾದ ಪ್ರತಿಭಟನೆ, ಪೊಲೀಸರು ಫುಲ್ ಅಲರ್ಟ್!