Site icon Vistara News

Dead Body found : ಕ್ಯಾಂಪ್‌ ಪೊಲೀಸ್‌ ಠಾಣೆ ಆವರಣದಲ್ಲೇ ಇತ್ತು ಕೊಳೆತ ಶವ!

Dead Body Found

ಬೆಳಗಾವಿ: ಪೊಲೀಸ್ ಠಾಣೆ ಆವರಣದೊಳಗೆ ಅಪರಿಚಿತ ವ್ಯಕ್ತಿ ಶವ (Dead Body found) ಪತ್ತೆಯಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ವ್ಯಕ್ತಿಯ ಶವವು ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ಬೆಳಗಾವಿ ನಗರದ (Belgavi News) ಕ್ಯಾಂಪ್‌ ಪ್ರದೇಶದ ಸಂಚಾರಿ ಪೊಲೀಸ್ ಠಾಣಾ ಆವರಣದಲ್ಲಿ ಶವ ಪತ್ತೆಯಾಗಿದೆ.

ಸಂಚಾರಿ ಪೊಲೀಸರು ಸ್ಲೀಪರ್ ಬಸ್‌ವೊಂದನ್ನು ಜಪ್ತಿ ಮಾಡಿ ನಿಲ್ಲಿಸಿದ್ದರು. ಇದೇ ಬಸ್‌ನ ಹಿಂಬದಿಯ ಸೀಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ 40-45 ವಯಸ್ಸಿನ ವ್ಯಕ್ತಿಯೊಬ್ಬ ಶವ ಸಿಕ್ಕಿದೆ. ಮೃತನ ಗುರುತು ಪತ್ತೆಯಾಗಿಲ್ಲ, ಕಳೆದ 15 ದಿನಗಳ ಹಿಂದೆಯೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬಸ್‌ನಿಂದ ದುರ್ವಾಸನೆ ಬಂದಾಗ ಒಳಹೊಕ್ಕು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಿಂಬದಿ ಸೀಟ್‌ನ ಬಲಭಾಗದಲ್ಲಿ ಮಲಗಿರುವ ಸ್ಥಿತಿಯಲ್ಲಿ ಶವ ಸಿಕ್ಕಿದೆ.

ಸ್ಥಳಕ್ಕೆ ಕ್ಯಾಂಪ್‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಕೊಲೆಯೋ ಅಥವಾ ಅಸಹಜ ಸಾವೋ ಎಂಬುವುದರ ಬಗ್ಗೆ ಪೊಲೀಸರ ತನಿಖೆಯನ್ನು ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕ್ಯಾಂಪ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Assault Case : ಪದೇಪದೆ ಹಾರ್ನ್‌ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕಿರಿಕ್‌; ಯುವಕರಿಗೆ ಚಾಕು ಹಾಕಿದ ಪುಂಡರು

ಜೋಡಿ ಕೊಲೆ; ಪರಪುರುಷನ ಮೋಹಿಸಿದ ತಾಯಿಯನ್ನು ಕೊಚ್ಚಿ ಕೊಂದ ಮಗ

ವಿಜಯಪುರ: ಕಳೆದ ಮಾರ್ಚ್ 18ರಂದು ವಿಜಯಪುರದ (Vijayapura News) ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ಒಬ್ಬ ಪುರುಷ ಮತ್ತು ಮಹಿಳೆಯೊಬ್ಬಳ ಬರ್ಬರ (Murder Case) ಕೊಲೆಯಾಗಿತ್ತು. ಅಕ್ರಮ‌ ಸಂಬಂಧದ (Illicit Relationship) ಸಂಶಯದ ಹಿನ್ನೆಲೆಯಲ್ಲಿ ಜೋಡಿ ಕೊಲೆ (Couple murder) ಆಗಿರಬಹುದೆಂದು ಪೊಲೀಸರು ಶಂಕಿಸಿದ್ದರು. ಆದರೆ ಕೊಲೆಗಾರರು ಯಾರು ಎಂಬ ಪ್ರಶ್ನೆ ಮೂಡಿತ್ತು. ಇದೀಗ ಪ್ರಕರಣ ಭೇದಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಗಣಿ ಗ್ರಾಮದ ಸೋಮನಿಂಗಪ್ಪ ಕಲ್ಲಪ್ಪ ಕುಂಬಾರ (35) ಮತ್ತು ಪಾರ್ವತಿ ತಳವಾರ (38) ಎಂಬುವವರ ಹತ್ಯೆ ಆಗಿತ್ತು. ಪಾರ್ವತಿ ಅವರ ಮಗ ಲಕ್ಷ್ಮಣ ತಳವಾರನೇ ಸಂಚು ರೂಪಿಸಿ ತಾಯಿಯನ್ನು ಹಾಗೂ ಆಕೆಯ ಜತೆಗಿದ್ದ ಸೋಮನನ್ನು ಹತ್ಯೆ ಮಾಡಿದ್ದ. ಲಕ್ಷ್ಮಣನಿಗೆ ಗೆಳೆಯರಾದ ಶಶಿಕುಮಾರ ಮಣಗೂರ, ಬಸವರಾಜ ಹಡಪದ ಸಾಥ್‌ ಕೊಟ್ಟಿದ್ದರು.

ಆಕಳವಾಡಿ ಹಾಗೂ ಮಾರಡಗಿ ರಸ್ತೆಯಲ್ಲಿ ಪಾರ್ವತಿ ಹಾಗೂ ಸೋಮ ಜತೆಯಾಗಿ ಗಣಿ ಗ್ರಾಮಕ್ಕೆ ಬರುವ ದಾರಿಯಲ್ಲಿ ಇವರಿಬ್ಬರನ್ನು ಕೊಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದರು. ನಿಡಗುಂದಿ ತಾಲೂಕಿನ‌ ಮಾರಡಗಿ ತಾಂಡಾದ ಸಮೀಪ ಸೋಮವಾರ (ಮಾ.18) ರಾತ್ರಿ ಕೊಲೆ ನಡೆದಿತ್ತು. ಮರುದಿನ ಬೆಳಗ್ಗೆ ಸ್ಥಳೀಯರು ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕೂಡಲೇ ಸ್ಥಳಕ್ಕೆ ಬಂದ ನಿಡಗುಂದಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಮೃತರ ಹಿನ್ನೆಲೆ ಹುಡುಕುತ್ತಾ ಹೋದಾಗ ಇವರಿಬ್ಬರು ಅಕ್ರಮ ಸಂಬಂಧದಿಂದಲೇ ಕೊಲೆಯಾದರು ಎಂದು ತಿಳಿದು ಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version