ಬೆಳಗಾವಿ : ಜಿಲ್ಲೆಯಲ್ಲಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಕಳ್ಳರ (Child Thieves) ಬಗ್ಗೆ ಸುಳ್ಳು ವದಂತಿಗಳು ಹಬ್ಬಿದ್ದವು. ಹಲವು ವ್ಯಕ್ತಿಗಳ ಮೇಲೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಈ ವಂದಂತಿಗಳ ಬಗ್ಗೆ ಕಿವಿಗೊಡಬೇಡಿ ಎಂದು ಬೆಳಗಾವಿ ಎಸ್ಪಿ ಡಾ.ಸಂಜೀವ ಪಾಟೀಲ್ ಜನರಿಗೆ ಮನವಿ ಮಾಡಿದ್ದಾರೆ.
ಈ ಹಿಂದೆ ಜಿಲ್ಲೆಯಲ್ಲಿ ನಾಲ್ಕು ಕಡೆ ಮಕ್ಕಳ ಕಳ್ಳರೆಂದು ಅಮಾಯಕರನ್ನು ಜನರು ಥಳಿಸಿದ್ದರು. ಕಿತ್ತೂರು ತಾಲೂಕಿನಲ್ಲಿಯೂ ಪ್ಲಾಸ್ಟಿಕ್ ಬುಟ್ಟಿ ಮಾರುವವರಿಗೆ ಮಕ್ಕಳ ಕಳ್ಳರೆಂದು ಜನರು ಧರ್ಮದೇಟು ನೀಡಿದ್ದರು. ಖಾನಾಪುರ ತಾಲೂಕಿನ ನಂದಗಡದಲ್ಲಿ ಮಾನಸಿಕ ಅಸ್ವಸ್ಥನೊಬ್ಬನ ವರ್ತನೆ ಬಗ್ಗೆಯೂ ಶಂಕೆ ವ್ಯಕ್ತಪಡಿಸಲಾಗಿತ್ತು. ಸವದತ್ತಿ ತಾಲೂಕಿನ ಶಿರಸಂಗಿಯಲ್ಲಿ ನಾಗಪುರದ ನಾಲ್ವರು ಆಶ್ರಮಕ್ಕೆ ಡೊನೇಶನ್ ಕೇಳಲು ಬಂದವರ ಬಗ್ಗೆಯೂ ಸಂಶಯ ವ್ಯಕ್ತವಾಗಿತ್ತು. ಕುಲಗೋಡದಲ್ಲಿ ನಾಗಾ ಸಾಧುಗಳನ್ನು ಮಕ್ಕಳ ಕಳ್ಳರೆಂದು ಶಂಕಿಸಲಾಗಿತ್ತು. ಇದೆಲ್ಲ ಪ್ರಕರಣವನ್ನು ಗಮನಿಸಿ ಎಸ್ಪಿ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ | ಬೆಂಗಳೂರು| ಮಕ್ಕಳನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ಕದಿಯುತ್ತಿದ್ದ ಕಳ್ಳರು ಆರೆಸ್ಟ್
ಎಸ್ಪಿ ಡಾ.ಸಂಜೀವ ಪಾಟೀಲ್ ಮಾತನಾಡಿ ʻʻಜಿಲ್ಲೆಯಲ್ಲಿ ಯಾವುದೇ ಮಕ್ಕಳ ಕಳ್ಳತನ ಪ್ರಕರಣ ದಾಖಲಾಗಿಲ್ಲ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಭಯ ಪಡಬೇಕಿಲ್ಲ. ಹಾಗೇನಾದರೂ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ 112ಗೆ ಕರೆ ಮಾಡಿ.ʼʼ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಮನೆಯಿಂದಲೇ 4 ಲಕ್ಷ ಕದ್ದು ಮೋಜು ಮಾಡಿ ನಕಲಿ ನೋಟು ತಂದಿಟ್ಟ ಮಕ್ಕಳು!