ಬೆಳಗಾವಿ: ಆಯತಪ್ಪಿ ಮಾರ್ಕಂಡೇಯ ನದಿಯ (Drowned in water) ನಾಲೆಗೆ ಸಹೋದರರು ಬಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಮರೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಬೆಳಗಾವಿ ತಾಲೂಕಿನ ಆಲತಗಾ ಬಳಿ ನಿನ್ನೆ ಶನಿವಾರ ತಡರಾತ್ರಿ ಈ ದುರ್ಘಟನೆ ನಡೆದಿತ್ತು.
ಓಂಕಾರ ಪಾಟೀಲ್ ಹಾಗೂ ಜ್ಯೋತಿನಾಥ ಪಾಟೀಲ್ ಎಂಬ ಸಹೋದರರು ಬೈಕ್‌ನಲ್ಲಿ ಹೋಗುತ್ತಿದ್ದರು. ಶ್ರಾವಣ ಮಾಸ ಪ್ರಾರಂಭ ಹಿನ್ನೆಲೆಯಲ್ಲಿ ಕಟಿಂಗ್ ಮಾಡಿಸಿಕೊಳ್ಳಲು ತೆರಳಿದ್ದರು.
ಈ ವೇಳೆ ಆಯತಪ್ಪಿ ಇಬ್ಬರು ನಾಲೆಗೆ ಬಿದ್ದಿದ್ದರು. ನಾಲೆಗೆ ಬೀಳುತ್ತಿದ್ದಂತೆ ಜ್ಯೋತಿನಾಥ ಪಾಟೀಲ್ ಹೇಗೋ ಈಜಿ ದಡ ಸೇರಿದ್ದರು. ಆದರೆ ಇತ್ತ ಓಂಕಾರ ಪಾಟೀಲ್ ಬೈಕ್ ಜತೆಗೆ ಕಣ್ಮರೆಯಾಗಿದ್ದರು.
ಬಳಿಕ ನಾಪತ್ತೆಯಾಗಿದ್ದ ಓಂಕಾರ ಪಾಟೀಲ್‌ಗಾಗಿ ಶೋಧ ನಡೆಸಲಾಗಿತ್ತು. ಇದೀಗ ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. ನಿರಂತರ ಕಾರ್ಯಾಚರಣೆ ನಡೆಸಿದ ಎಸ್‌ಡಿಆರ್‌ಎಫ್ ತಂಡ ಶವ ಹೊರತೆಗೆದಿದ್ದಾರೆ.
ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: PSI Parashuram Case: ಸರ್ಕಾರಿ ಯೋಜನೆ ಹಣ ಬಿಡುಗಡೆಗೂ ಕಮಿಷನ್‌ಗೆ ಬೇಡಿಕೆ; ಎ2 ಪಂಪನಗೌಡ ವಿರುದ್ಧ ಮತ್ತೊಂದು ಆರೋಪ
ಸ್ಟೇರಿಂಗ್ ರಾಡ್ ತುಂಡಾಗಿ ಸೇತುವೆ ತಡೆಗೋಡೆಗೆ ಬಸ್ ಡಿಕ್ಕಿ
ಹಳ್ಳದ ಸೇತುವೆ ತಡೆಗೋಡೆಗೆ ಬಸ್‌ವೊಂದು ಡಿಕ್ಕಿ ಹೊಡೆದಿದ್ದು, ಮೂವರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಉಳಿದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನಂದಿಹಾಳ ಬಳಿ ಅಪಘಾತ ನಡೆದಿದೆ.
ಕಲ್ಯಾಣ ಸಾರಿಗೆ ಬಸ್ ಸ್ಟೇರಿಂಗ್ ರಾಡ್ ತುಂಡಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಬಸ್ ಡಿಕ್ಕಿಯಾಗಿದೆ. ಮಾನ್ವಿ- ಸಿಂಧನೂರು ಮಾರ್ಗದ ಬಸ್ ಇದಾಗಿದ್ದು, ಗಾಯಾಳುಗಳು ಮಾನ್ವಿ ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ