Site icon Vistara News

Drowned in water : ಆಯತಪ್ಪಿ ಘಟಪ್ರಭಾ ನದಿಗೆ ಬಿದ್ದ ಟ್ರಾಕ್ಟರ್; ಓರ್ವ ನೀರುಪಾಲು, 12 ಮಂದಿ ಪಾರು

Drowned in water

ಬೆಳಗಾವಿ: ಭಾರಿ ಮಳೆಗೆ ತುಂಬಿ ಹರಿಯುತ್ತಿದ್ದ ನದಿ ಸೇತುವೆ (Drowned in water) ಮೇಲೆ 13 ಜನರನ್ನು ಹೊತ್ತು ಬರುತ್ತಿದ್ದ ಟ್ರಾಕ್ಟರ್‌ವೊಂದು ಮಗುಚಿಬಿದ್ದಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ನಂದಗಾಂವ್ ಬಳಿ ದುರ್ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ನಂದಗಾಂವ್ ಗ್ರಾಮದ ಮಧ್ಯೆ ಇರುವ ಬ್ರಿಡ್ಜ್ ಕಮ್ ಬ್ಯಾರೇಜ್‌ ಮೇಲೆ ಬಂದಾಗ ಟೈಲರ್ ಸಮೇತ ಟ್ರಾಕ್ಟರ್ ನೀರಿಗೆ ಬಿದ್ದಿದೆ. ನೀರಿಗೆ ಬಿದ್ದೊಡನೆ 12 ಮಂದಿ ಈಜಿಕೊಂಡು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಓರ್ವ ನೀರಲ್ಲಿ ಕಣ್ಮರೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ಅವರಾದಿಯಿಂದ ನಂದಗಾಂವ್‌ಗೆ ಕೂಲಿ ಕೆಲಸಕ್ಕೆಂದು‌ ಕಾರ್ಮಿಕರು ಟ್ರಾಕ್ಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ನದಿ ದಾಟುವಾಗ ಆಯತಪ್ಪಿ ಘಟಪ್ರಭಾ ನದಿಗೆ ಟ್ರಾಕ್ಟರ್ ಬಿದ್ದಿತ್ತು. ಸ್ಥಳಕ್ಕೆ ಕುಲಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿಯಲ್ಲಿ ಕೊಚ್ಚಿ ಹೋದವನಿಗಾಗಿ ಹುಡುಕಾಟ ನಡೆಯುತ್ತಿದೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ:Car Accident : ಚಿಕ್ಕೋಡಿಯಲ್ಲಿ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ; ಕಾರು ಬಿಟ್ಟು ಚಾಲಕ ಪರಾರಿ

ಕೋಲಾರದಲ್ಲಿ ಕೃಷಿ ಹೊಂಡಕ್ಕೆ ಜಾರಿ ಬಿದ್ದ ಬಾಲಕ ಸಾವು

ಕೃಷಿ ಹೊಂಡದಲ್ಲಿ ಜಾರಿ ಬಿದ್ದು ಬಾಲಕನೊರ್ವ ಮೃತಪಟ್ಟಿದ್ದಾನೆ. ಕೋಲಾರ ತಾಲೂಕಿನ ದಂಡಿಗಾನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಚರಣ್ (11) ಮೃತ ದುರ್ದೈವಿ.

ಐದನೇ ತರಗತಿಯಲ್ಲಿ ಓದುತ್ತಿದ್ದ ಚರಣ್‌ ಕೃಷಿ ಹೊಂಡದ ಸಮೀಪ ಬಂದಾಗ, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆ. ಪರಿಣಾಮ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಾಲಕನ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version