ಬೆಳಗಾವಿ: ವಿದ್ಯುತ್ ಶಾಕ್ (Electric Shock) ಹೊಡೆದು ಒಂದೇ ಕುಟುಂಬದ ಮೂವರು ದಾರುಣವಾಗಿ ಪ್ರಾಣ ಕಳೆದುಕೊಂಡ (Three from one Family dies together) ಭಯಾನಕ ಘಟನೆ ಬೆಳಗಾವಿಯ ಶಾಹುನಗರದ (Shahu nagar in Belagavi) ಮೊದಲನೇ ಕ್ರಾಸ್‌ನ ಮನೆಯಲ್ಲಿ ಸಂಭವಿಸಿದೆ. ಶನಿವಾರ ರಾತ್ರಿ ನಿರ್ಮಾಣ ಹಂತದ ಮನೆಯ (Under Construction building) ಶೆಡ್‌ನಲ್ಲಿ ಈ ದುರಂತ ಸಂಭವಿಸಿದ್ದು, ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಅವರ ಪತ್ನಿ ಮತ್ತು ಮೊಮ್ಮಗು ಪ್ರಾಣ ಕಳೆದುಕೊಂಡಿದ್ದಾರೆ (Watch man Family).
ಈರಪ್ಪ ಗಂಗಪ್ಪ ರಾಥೋಡ(55), ಶಾಂತವ್ವ ಈರಪ್ಪ ರಾಥೋಥ (50), ಅನ್ನಪೂರ್ಣ ಹೊನ್ನಪ್ಪ ಲಮಾಣಿ (8) ಮೃತರು. ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅರಗಂಚಿ ತಾಂಡಾದ ನಿವಾಸಿಗಳು.
ರಾಥೋಡ್ ದಂಪತಿ ನಿರ್ಮಾಣ ಹಂತದ ಮನೆಗೆ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಮೊಮ್ಮಗಳಾದ ಅನ್ನಪೂರ್ಣಳನ್ನು ಶಿಕ್ಷಣಕ್ಕಾಗಿ ತಮ್ಮ ಬಳಿ ಇಟ್ಟುಕೊಂಡಿದ್ದರು. ಆದರೆ, ಇದೀಗ ಮೂವರೂ ಪ್ರಾಣ ಕಳೆದುಕೊಂಡಿದ್ದಾರೆ.
ಪಂಪ್ ಸ್ವಿಚ್ ಆಫ್ ಮಾಡಲು ಹೋಗಿದ್ದ ಮೊಮ್ಮಗಳಿಗೆ ಶಾಕ್
ಭಾನುವಾರ ಬೆಳಗ್ಗೆ ಬೋರ್‌ವೆಲ್‌ನ ಮೋಟಾರ್ ಬಂದ್ ಮಾಡುವ ವೇಳೆ ಎಂಟು ವರ್ಷದ ಬಾಲಕಿ ಅನ್ನಪೂರ್ಣ ಲಮಾಣಿಗೆ ವಿದ್ಯುತ್ ತಂತಿ ತಾಗಿತ್ತು. ಈ ವೇಳೆ ಶಾಕ್‌ಗೆ ಒಳಗಾದ ಬಾಲಕಿ ಜೋರಾಗಿ ಕಿರುಚಿಕೊಂಡಳು. ತಕ್ಷಣವೇ ಓಡಿಬಂದ ಈರಪ್ಪ ರಾಥೋಡ ಹಾಗೂ ಶಾಂತವ್ವ ರಾಥೋಡ ಅವರು ಮಗುವಿನ ರಕ್ಷಣೆಗಾಗಿ ಪ್ರಯತ್ನಿಸಿದರು. ಆಗ ಆ ವಿದ್ಯುತ್ ಈರಪ್ಪ ರಾಥೋಡ ಹಾಗೂ ಗಂಗವ್ವ ರಾಥೋಡ್‌ಗೂ ತಾಗಿ ಸ್ಥಳದಲ್ಲೇ ಮೂವರೂ ಮೃತಪಟ್ಟರು.
ಶಾಹುನಗರದ ಸರ್ಕಾರಿ ಕನ್ನಡ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನ್ನಪೂರ್ಣಳನ್ನು ರಕ್ಷಿಸಲು ಹೋಗಿ ಅವಳ ಅಜ್ಜ ಮತ್ತು ಅಜ್ಜಿ ಕೂಡಾ ಪ್ರಾಣ ಕಳೆದುಕೊಂಡರು.
ಮೂವರೂ ಸಾವನ್ನಪ್ಪಿದ ಸುದ್ದಿ ಕೇಳಿ ತಾಂಡಾದಿಂದ ಬಂಧುಗಳು ಧಾವಿಸಿ ಬಂದಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಎಪಿಎಂಸಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ : Electric Shock : ರೋಡ್ ಡಿವೈಡರ್ ದಾಟುವ ವೇಳೆ ಕರೆಂಟ್ ಶಾಕ್: ಬೈಕ್ ಸವಾರ ಸ್ಥಳದಲ್ಲೇ ಸಾವು