ಬೆಳಗಾವಿ: ಮಹಿಳೆಯ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿ ಇಸ್ಲಾಂಗೆ ಮತಾಂತರ ಮಾಡಲು ಯತ್ನಿಸಿದ (Forced Conversion) ದಂಪತಿಯನ್ನು ಬೆಳಗಾವಿಯ ಸವದತ್ತಿ ಪೊಲೀಸರು ಬಂಧಿಸಿದ್ದಾರೆ. ಮತಾಂತರ ಮಾಡಲು ಯತ್ನಿಸಿದ ರಫೀಕ್ ಬೇಫಾರಿ ಹಾಗೂ ಆತನ ಪತ್ನಿ ಕೌಸರ್ ಬೇಫಾರಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಬೆಳಗಾವಿಯ ಎಸ್‌ಪಿ ಭೀಮಾಶಂಕರ್ ಗುಳೇದ ಮಾಹಿತಿ ನೀಡಿದ್ದಾರೆ.
ಅನ್ಯಾಯಕ್ಕೊಳಗಾದ ಮಹಿಳೆ 7 ಜನರ ವಿರುದ್ಧ ಮತಾಂತರ ಯತ್ನಿಸಿದ ಆರೋಪ ಮಾಡಿದ್ದರು. ಈ ಸಂಬಂಧ ಸವದತ್ತಿ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದರು. ಮಹಿಳೆ ದೂರಿನನ್ವಯ ಸವದತ್ತಿ ಪೊಲೀಸರು ಮತಾಂತರಕ್ಕೆ ಯತ್ನಿಸಿದ ಗಂಡ-ಹೆಂಡತಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಕಿಡಿಗೇಡಿಗಳು ಸಂತ್ರಸ್ತೆಗೆ ನಿನ್ನ ಖಾಸಗಿ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ, ಮತಾಂತರಕ್ಕೆ ಯತ್ನಿಸಿದ್ದರು ಎನ್ನಲಾಗಿದೆ. ಬುರ್ಕಾ ಹಾಕಬೇಕು, ನಮಾಜ್ ಮಾಡಬೇಕು ಎಂದು ರಫಿಕ್ ಹಾಗೂ ಕೌಸರ್ ದಂಪತಿ ಕಂಡಿಷನ್ ಹಾಕಿದ್ದರಂತೆ.
ರಫೀಕ್ ನೀಡುತ್ತಿದ್ದ ಕಿರುಕುಳವನ್ನು ಸಹಿಸಲು ಸಾಧ್ಯವಾಗದೆ ಕೊನೆಗೆ ಮಹಿಳೆ ನಡೆದ ವಿಚಾರವನ್ನೆಲ್ಲ ತನ್ನ ಪತಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಸಂತ್ರಸ್ತೆ ಪತಿ ಏ.18ರಂದು ಸವದತ್ತಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರು ಆಧರಿಸಿ ಪೊಲೀಸರು ದಂಪತಿಯನ್ನು ಜೈಲಿಗಟ್ಟಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: Assault Case : ಪ್ರೀತ್ಸೆ ಅಂದ.. ವಿರೋಧಿಸಿದ್ದಕ್ಕೆ ಯುವತಿ ತಂದೆ ಕಾಲು ಮುರಿದು, ಕಣ್ಣಿಗೆ ಕಲ್ಲಿನಿಂದ ಜಜ್ಜಿದ ಕಿರಾತಕ
ಸ್ಕೂಲ್ ಹುಡುಗಿಗೆ ಬೆದರಿಸಿ ರೂಮಿಗೆ ಕರೆದೊಯ್ಯುತ್ತಿದ್ದ ಯುವಕನನ್ನು ಹಿಡಿದ ಬಜರಂಗ ದಳ
ಬೀದರ್: ಖಾಸಗಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಶಾಲಾ ವಿದ್ಯಾರ್ಥಿನಿಯನ್ನು ಬೆದರಿಸಿ ಲೈಂಗಿಕ ದೌರ್ಜನ್ಯ (Physical Abuse) ನಡೆಸಿರುವ ಘಟನೆ ನಡೆದಿದೆ. ಗಡಿಜಿಲ್ಲೆ ಬೀದರ್‌ನಲ್ಲಿ ಅನ್ಯಕೋಮಿನ ಯುವಕನಿಂದ ಅತ್ಯಾಚಾರ ಆರೋಪವೊಂದು ಕೇಳಿ ಬಂದಿದೆ. ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ವಿದ್ಯಾರ್ಥಿನಿಗೆ ಬೆದರಿಸಿ ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ ಬೀದರ್ ನಗರದ ಮಹಿಳಾ ಠಾಣೆಯಲ್ಲಿ ವಿದ್ಯಾರ್ಥಿನಿಯ ತಾಯಿ ದೂರು ನೀಡಿದ್ದಾರೆ.
ಲಾಯಕ್ ಅಲಿ (20) ಬಂಧಿತ ಯುವಕ. ಲಾಯಕ್ ಅಲಿ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ. 9ನೇ ತರಗತಿ ವಿದ್ಯಾರ್ಥಿನಿಗೆ ಪ್ರೀತಿಸುತ್ತೇನೆ ಎಂದು ನಂಬಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಶಾಲೆ ಮುಗಿಸಿ ವಿದ್ಯಾರ್ಥಿನಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಬೈಕ್‌ನಲ್ಲಿ ಬಂದ ಲಾಯಕ್ ಅಲಿ ತನ್ನ ಬಾಡಿಗೆ ಮನೆಗೆ ಕರೆದೊಯ್ಯುತ್ತಿದ್ದ. ಈ ವಿಚಾರ ತಿಳಿದ ಬಜರಂಗ ದಳ ಕಾರ್ಯಕರ್ತರು ಯುವಕನನ್ನು ವಿಚಾರಿಸಿದಾಗ ಬ್ಲ್ಯಾಕ್‌ಮೇಲ್ ವಿಷಯ ಹೊರಬಿದ್ದಿದೆ. ಕೂಡಲೇ ಯುವಕನನ್ನು ಹಿಡಿದು, ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ.
ನಂತರ ಪೊಲೀಸರಿಗೆ ಮಾಹಿತಿ ನೀಡಿ ಕಾರ್ಯಕರ್ತರು ಇಬ್ಬರನ್ನು ಠಾಣೆಗೆ ಒಪ್ಪಿಸಿದ್ದಾರೆ. ಸದ್ಯ ವಿಚಾರಣೆ ವೇಳೆ ಲಾಯಕ್ ಅಲಿ ತನಗೆ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಬೆದರಿಸಿದ್ದ. ಹೀಗಾಗಿ ಭಯ ಪಟ್ಟು ನಾನು ತಾನೊಟ್ಟಿಗೆ ಹೋಗಿದ್ದೇನೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ. ಸದ್ಯ ಆರೋಪಿ ಲಾಯಕ್ ಅಲಿ ವಿರುದ್ಧ ಮಹಿಳಾ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ