Site icon Vistara News

Ganesha Festival : ಗಣೇಶನ ಹಬ್ಬಕ್ಕೆ ಊರಿಗೆ ಹೋಗ್ಬೇಕಾ? ನಿಮಗಾಗಿ ಸ್ಪೆಷಲ್‌ ರೈಲು ಬಿಟ್ಟಿದೀವಿ, ಹೆಚ್ಚುವರಿ ಬೋಗಿ ಹಾಕ್ಸಿದೀವಿ!

Ganesha Festival train

ಬೆಂಗಳೂರು: ಗಣೇಶನ ಚತುರ್ಥಿ (Ganesha Chaturthi) ಅಂದ ಕೂಡಲೇ ಎಲ್ಲರೂ ಊರಿಗೆ ಹೋಗೋದು ಕಾಮನ್‌. ಎಲ್ಲರೂ ಒಟ್ಟಿಗೇ ಹೊರಡುವುದರಿಂದ ಬಸ್ಸು, ರೈಲುಗಳೆಲ್ಲ ತುಂಬಿ ತುಳುಕುತ್ತವೆ. ಕೆಲವೊಮ್ಮೆ ಸೀಟೇ ಸಿಗದೆ ಪರದಾಡಬೇಕಾಗುತ್ತದೆ. ಇದನ್ನೆಲ್ಲ ಮನಗಂಡು ಭಾರತೀಯ ರೈಲ್ವೆ (Indian Railway) ರಾಜ್ಯದ ನಾನಾ ಕಡೆಗಳಿಗೆ ಹೆಚ್ಚುವರಿ ರೈಲು ಸೇವೆಯನ್ನು (Special train service) ಒದಗಿಸಿದೆ, ಕೆಲವು ಕಡೆ ಇರುವ ರೈಲುಗಳಿಗೆ ಹೆಚ್ಚುವರಿ ಬೋಗಿಯನ್ನು (Extra compartments) ಫಿಕ್ಸ್‌ ಮಾಡಲು ಮುಂದಾಗಿದೆ.

ಸದ್ಯದ ಮಾಹಿತಿ ಪ್ರಕಾರ ಬೆಂಗಳೂರಿನಿಂದ ಬೆಳಗಾವಿ (Bangalore to Belagavi) ಮತ್ತು ಹುಬ್ಬಳ್ಳಿ (Bangalore to Hubballi) ಕಡೆಗೆ ಹೆಚ್ಚುವರಿ ರೈಲು ಸೇವೆ ಮತ್ತು ಬೋಗಿ ಸೇವೆಗಳನ್ನು ಒದಗಿಸಲಾಗಿದೆ. ಅದರ ವಿವರ ಇಲ್ಲಿದೆ. ರೈಲ್ವೇ ಬುಕಿಂಗ್‌ ಸೇವೆಯಲ್ಲೇ (Railway Booking Service) ಈ ರೈಲುಗಳ ಬುಕಿಂಗ್‌ಗೆ ಅವಕಾಶ ಇರುತ್ತದೆ.

ಬೆಂಗಳೂರು-ಬೆಳಗಾವಿ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ

ಗಣೇಶ ಹಬ್ಬದ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ನೈಋುತ್ಯ ರೈಲ್ವೇ ಇಲಾಖೆ ಮಹಾ ಪ್ರಬಂಧಕರು ಯಶವಂತಪುರದಿಂದ ಬೆಳಗಾವಿಗೆ ಮತ್ತು ಬೆಳಗಾವಿಯಿಂದ ಯಶವಂತಪುರಕ್ಕೆ ವಿಶೇಷ ರೈಲು ಸೇವೆ ಕಲ್ಪಿಸಲು ಆದೇಶಿಸಿದ್ದಾರೆ.

Special train service
  1. ಯಶವಂತಪುರ-ಬೆಳಗಾವಿ ರೈಲು ಸೆ.15ರಂದು ಸಂಜೆ 6.15ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು ಸೆ. 16ರ ಬೆಳಗ್ಗೆ 6 ಗಂಟೆಗೆ ಬೆಳಗಾವಿ ತಲುಪಲಿದೆ.
  2. ಬೆಳಗಾವಿ-ಯಶವಂತಪುರ ರೈಲು ಸೆ.16ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು 17ರಂದು ಬೆಳಗ್ಗೆ 4.30ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.
  3. ಸೆ.17ರಂದು ಸಂಜೆ 6.15ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು 18ರಂದು ಬೆಳಗ್ಗೆ 6 ಗಂಟೆಗೆ ಬೆಳಗಾವಿ ತಲುಪಲಿದೆ.
  4. ಸೆ.18ರ ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು 19 ರಂದು ಬೆಳಗ್ಗೆ 4.30ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.

ಈ ರೈಲುಗಳ ಬುಕಿಂಗ್‌ IRCTC ವೆಬ್‌ಸೈಟ್‌ನಲ್ಲೇ ಲಭ್ಯವಿರಲಿದೆ.

ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವ ಪ್ರಯಾಣಿಕರ ಗಮನಕ್ಕೆ

ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೋಗುವ ಪ್ರಯಾಣಿಕರಿಗಾಗಿ ಈಗ ಇರುವ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಒದಗಿಸಲಾಗುತ್ತದೆ. ಎಷ್ಟು ಬೋಗಿ ಮತ್ತು ಯಾವ ಅವಧಿಯಲ್ಲಿ ಇರುತ್ತದೆ ಎಂಬುದರ ವಿವರ ಇಲ್ಲಿದೆ.

Special train service
  1. ರೈಲು ಸಂಖ್ಯೆ 07339 ಎಸ್.ಎಸ್.ಎಸ್ ಹುಬ್ಬಳ್ಳಿ-ಕೆ.ಎಸ್.ಆರ್ ಬೆಂಗಳೂರು ವಿಶೇಷ ಡೈಲಿ ಎಕ್ಸ್‌ಪ್ರೆಸ್”: ಮೂರು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿ. ಸೆಪ್ಟೆಂಬರ್ 14ರಿಂದ 19ರವರೆಗೆ ಈ ಸೇವೆ ಲಭ್ಯ
  2. ರೈಲು ಸಂಖ್ಯೆ 07340 ಕೆ.ಎಸ್.ಆರ್ ಬೆಂಗಳೂರು-ಎಸ್.ಎಸ್.ಎಸ್ ಹುಬ್ಬಳ್ಳಿ ವಿಶೇಷ ಡೈಲಿ ಎಕ್ಸ್‌ಪ್ರೆಸ್: ಮೂರು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿ. ಸೆಪ್ಟೆಂಬರ್ 15ರಿಂದ ಸೆ. 20.
  3. ರೈಲು ಸಂಖ್ಯೆ 12079 ಕೆ.ಎಸ್.ಆರ್ ಬೆಂಗಳೂರು- ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್: ಒಂದು ಹೆಚ್ಚುವರಿ ನಾನ್-ಎಸಿ ಚೇರ್ ಕಾರ್ ಬೋಗಿ. ಸೆಪ್ಟೆಂಬರ್ 15ರಿಂದ 18ರವರೆಗೆ.
  4. ರೈಲು ಸಂಖ್ಯೆ 12080 ಎಸ್.ಎಸ್.ಎಸ್ ಹುಬ್ಬಳ್ಳಿ-ಕೆ.ಎಸ್.ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್: ಒಂದು ಹೆಚ್ಚುವರಿ ನಾನ್-ಎಸಿ ಚೇರ್ ಕಾರ್ ಬೋಗಿ. ಸೆಪ್ಟೆಂಬರ್ 15ರಿಂದ 18ರವರೆಗೆ.
  5. ರೈಲು ಸಂಖ್ಯೆ 17309 ಯಶವಂತಪುರ-ವಾಸ್ಕೋ-ಡ-ಗಾಮಾ ಡೈಲಿ ಎಕ್ಸ್‌ಪ್ರೆಸ್: ಒಂದು ಹೆಚ್ಚುವರಿ ಎಸಿ ತ್ರಿ ಟೈಯರ್ ಬೋಗಿ ಜೋಡಣೆ. ಸೆಪ್ಟೆಂಬರ್ 14ರಿಂದ ಅಕ್ಟೋಬರ್ 5ರವರೆಗೆ.
  6. ರೈಲು ಸಂಖ್ಯೆ 17310 ವಾಸ್ಕೋ-ಡ-ಗಾಮಾ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್: ಒಂದು ಹೆಚ್ಚುವರಿ ಎಸಿ ತ್ರಿ ಟೈಯರ್ ಬೋಗಿ. ಸೆಪ್ಟೆಂಬರ್ 13ರಿಂದ ಅಕ್ಟೋಬರ್ 4ರವರೆಗೆ
Exit mobile version