Site icon Vistara News

Goolihatti Shekhar : ಅನ್ನದ ಬಟ್ಟಲಿಗೆ ಮಣ್ಣು ಹಾಕಬೇಡಿ; ಗೂಳಿಹಟ್ಟಿಗೆ ಬಿಜೆಪಿ ಎಚ್ಚರಿಕೆ

Chalavadi Narayanaswamy Goolihatti Shekhar

ಬೆಳಗಾವಿ: ನೀವು ಕಾಂಗ್ರೆಸ್‍ಗೆ ಹೋಗುವುದಾದರೆ ನಮ್ಮ ಅಡ್ಡಿ ಇಲ್ಲ; ಹೋಗಬಹುದು. ಆದರೆ, ನೀವು ಉಂಡ ತಟ್ಟೆಯಲ್ಲಿ ಮಣ್ಣು ಹಾಕಿ ಹೋಗುವುದು ಎಷ್ಟು ಸರಿ- ಹೀಗೆಂದು ಗೂಳಿಹಟ್ಟಿ ಶೇಖರ್‌ (Goolihatti Shekhar) ಅವರಿಗೆ ಪ್ರಶ್ನೆ ಮಾಡಿದ್ದಾರೆ ವಿಧಾನ ಪರಿಷತ್ ಸದಸ್ಯ ಮತ್ತು ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy).

ತಾನು ದಲಿತ ಎಂಬ ಕಾರಣಕ್ಕೆ ತಮ್ಮನ್ನು ನಾಗಪುರ ಆರೆಸ್ಸೆಸ್‌ ಕಚೇರಿ (Nagapura RSS office) ಪ್ರವೇಶಿಸಲು ಬಿಟ್ಟಿಲ್ಲ ಎಂಬ ಹೊಸದುರ್ಗದ ಮಾಜಿ ಶಾಸಕರಾದ ಗೂಳಿಹಟ್ಟಿ ಶೇಖರ್ ಅವರ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಅವರು, ಗೂಳಿಹಟ್ಟಿ ಅವರು ಆರೆಸ್ಸೆಸ್ ಕುರಿತಂತೆ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದ್ದಾರೆ. ಆರೆಸ್ಸೆಸ್‍ನಲ್ಲಿ ಜಾತಿಭೇದ ಇಲ್ಲ. ರಿಜಿಸ್ಟರ್‌ನಲ್ಲಿ ಸಹಿ ಮಾಡುವ ಪದ್ಧತಿಯೂ ಇಲ್ಲ ಎಂದಿದ್ದಾರೆ. ಅದರ ಜತೆಗೆ, ನೀವು ಕಾಂಗ್ರೆಸ್‍ಗೆ ಹೋಗುವುದಾದರೆ ನಮ್ಮ ಅಡ್ಡಿ ಇಲ್ಲ; ಹೋಗಬಹುದು. ಆದರೆ, ನೀವು ಉಂಡ ತಟ್ಟೆಯಲ್ಲಿ ಮಣ್ಣು ಹಾಕಿ ಹೋಗುವುದು ಸರಿಯಲ್ಲ ಎಂದಿದ್ದಾರೆ. ಗೂಳಿಹಟ್ಟಿ ಶೇಖರ್‌ ಅವರು ಬೇರೆಯವರಲ್ಲ. ನನ್ನ ಸಹೋದರರು. ಆದರೆ ದಯವಿಟ್ಟು ಈ ಥರ ತಪ್ಪು ದಾರಿಯಲ್ಲಿ ಹೋಗಬೇಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: Gulihatty Shekhar: ಜಾತಿ ಕಾರಣಕ್ಕೆ ಕಚೇರಿ ಪ್ರವೇಶ ಸಿಗಲಿಲ್ಲ ಎಂಬ ಗೂಳಿಹಟ್ಟಿ ಆರೋಪ ತಳ್ಳಿಹಾಕಿದ ಆರ್‌ಎಸ್‌ಎಸ್‌

ಬೆಳಗಾವಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು ಗೂಳಿಹಟ್ಟಿ ಶೇಖರ್‌ ಅವರ ಆರೋಪಗಳಿಗೆ ಸಂಬಂಧಿಸಿ ಕೆಲವೊಂದು ಸ್ಪಷ್ಟನೆಗಳನ್ನು ನೀಡಿದರು.

  1. ಗೂಳಿಹಟ್ಟಿ ಶೇಖರ್ ಅವರ ಆಡಿಯೋ ವೈರಲ್ ಆಗಿದ್ದನ್ನು ಗಮನಿಸಿದ್ದೇನೆ. ಅದು ನಿಜಕ್ಕೂ ಅವರದೇ ಅಥವಾ ಅಲ್ಲವೇ ಎಂಬುದು ಬೇರೆ ವಿಷಯ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಬಂದ ವಿಷಯ ನಮ್ಮ ಪಕ್ಷದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿದೆ.
  2. ಆರೆಸ್ಸೆಸ್‌ ಕಚೇರಿಯಲ್ಲಿ ಹಾಗಾಗಿರಲು ಸಾಧ್ಯವಿಲ್ಲ. ಆಗಿದ್ದರೆ, ತಕ್ಷಣವೇ ಪ್ರಶ್ನಿಸಬೇಕಿತ್ತು. ಅಪಪ್ರಚಾರ ಮಾಡಿ ತಪ್ಪು ದಾರಿಗೆ ಎಳೆಯುವುದು ಸರಿಯಲ್ಲ.
  3. ಸಂಘದಲ್ಲಿ ಜಾತಿ ಕೇಳುವ ಪ್ರಶ್ನೆ, ಪದ್ಧತಿ ಇಲ್ಲವೇ ಇಲ್ಲ. ಸಂಘದವರು ನೀವು ಯಾವ ಜಾತಿ ಎಂದು ಕೇಳಿದ್ದನ್ನು ನಾನು ಯಾವತ್ತೂ ಗಮನಿಸಿಲ್ಲ. ಹೀಗಾಗಿ ತಪ್ಪು ದಾರಿಗೆ ಎಳೆಯುವ ಗೂಳಿಹಟ್ಟಿ ಅವರ ನಡೆಯನ್ನು ನಾನು ಖಂಡತುಂಡವಾಗಿ ಖಂಡಿಸುತ್ತೇನೆ.
  4. ಒಬ್ಬ ಸ್ವಾಭಿಮಾನಿ ವ್ಯಕ್ತಿ, ಪರಿಶಿಷ್ಟ ಜಾತಿಯವನಾಗಿದ್ದರೆ, ಡಾ. ಅಂಬೇಡ್ಕರ್ ಅವರ ರಕ್ತ ಅವರಲ್ಲಿ ಹರಿಯುತ್ತಿದ್ದರೆ ಇಂಥದ್ದು ನಡೆದ ಸಂದರ್ಭದಲ್ಲೇ ಪ್ರತಿಭಟಿಸಬೇಕಿತ್ತು. ಆ ಜಾಗದಲ್ಲಿ ನಾನಿದ್ದರೂ ಪ್ರತಿಭಟಿಸುತ್ತಿದ್ದೆ.
  5. ಇವತ್ತು ಗೂಳಿಹಟ್ಟಿಯವರು ರಾಜಕೀಯ ಕಾರಣಕ್ಕಾಗಿ, ಕಾಂಗ್ರೆಸ್ ಬಾಗಿಲು ತಟ್ಟುವ ಸಂದರ್ಭದಲ್ಲಿ ಪಕ್ಷಕ್ಕೆ ಈ ರೀತಿ ಹಾನಿ ಮಾಡುವುದು ಸರಿಯಾದ ಕ್ರಮವಲ್ಲ .ಇದು ಅಕ್ಷಮ್ಯ ಕ್ರಮ. ಸುಳ್ಳುಗಳನ್ನು ಹಬ್ಬಿಸುವ ಕೆಲಸ ಮಾಡಬಾರದು.
Exit mobile version