Site icon Vistara News

KPTCL Scam | ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಪ್ರಮುಖ ಆರೋಪಿ ಬಂಧನ

KPTCL Scam

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ (KPTCL Scam) ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಪ್ರಮುಖ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ಜಿಲ್ಲೆಯ ಗೋಕಾಕ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರಾಯಭಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಸೋಮನಗೌಡ ಪಾಟೀಲ ಬಂಧಿತ ವ್ಯಕ್ತಿ. ಈತನ ಬಂಧನದೊಂದಿಗೆ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ‌ಅಕ್ರಮದಲ್ಲಿ ಬಂಧಿತರ ಸಂಖ್ಯೆ 35ಕ್ಕೆ ಏರಿದೆ. ಗದಗಿನ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ, ಅಭ್ಯರ್ಥಿಗಳಿಗೆ ರವಾನಿಸಿದ ಆರೋಪದಲ್ಲಿ ಸೋಮಗೌಡ ಪಾಟೀಲನನ್ನು ಬಂಧಿಸಲಾಗಿದೆ.

ಗದಗ ಮುನಿಸಿಪಲ್ ಪಿಯು ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನವಣೆ, ಪುತ್ರ ಸುಮಿತ್‌ಕುಮಾರ್‌‌ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸೋಮನಗೌಡ, ಬಂಧಿತ ಸುಮಿತ್‌ ಕುಮಾರ್‌ ಜತೆಗೆ ಡೀಲ್ ಕುದರಿಸಿದ್ದ. ಸೋಮನಗೌಡ, ಅಭ್ಯರ್ಥಿಗಳಿಂದ 7.10 ಲಕ್ಷ ರೂಪಾಯಿ ಪಡೆದು ಅದರಲ್ಲಿ 4.50 ಲಕ್ಷ ರೂ. ಸುಮಿತ್‌ಕುಮಾರ್‌ಗೆ ನೀಡಿದ್ದ. ನಂತರ ಆ.7ರಂದು ಸೋಮನಗೌಡ ವಾಟ್ಸ್‌ ಆ್ಯಪ್‌ಗೆ ಸುಮಿತ್‌ಕುಮಾರ್ ಪ್ರಶ್ನೆ ಪತ್ರಿಕೆ ಕಳುಹಿಸಿದ್ದ. ಬಳಿಕ ಸೋಮನಗೌಡ ಪಾಟೀಲ ಆ ಪ್ರಶ್ನೆ ಪತ್ರಿಕೆಯನ್ನು ಉತ್ತರ ಹೇಳುವ ತಂಡಕ್ಕೆ ರವಾನಿಸಿದ್ದ. ಹೀಗಾಗಿ ಈತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Fraud case | ಓಎಲ್‌ಎಕ್ಸ್‌ನಲ್ಲಿ ಸೈಟ್, ಮನೆ ಮಾರಲು ಮುಂದಾಗಿದ್ದೀರಾ? ವಂಚಕರಿದ್ದಾರೆ ಹುಷಾರು!

Exit mobile version